Wednesday, January 22, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ : ಸಂಕಷ್ಟದಲ್ಲಿರುವ ಸಾತ್ವಿಕ್‌ಗೆ ನೆರವಾಗಿರಿ-ಕಹಳೆ ನ್ಯೂಸ್

ಬಿ.ಸಿ.ರೋಡ್ :  ಬಂಟ್ವಾಳ ತಾಲೂಕಿನ ಬಿ. ಮೂಡ ಗ್ರಾಮದ ಅಜ್ಜಿಬೆಟ್ಡು ನಿವಾಸಿ ಹೇಮಾವತಿ ಮತ್ತು ಹರೀಶ್ ದಂಪತಿಗಳ ಮಗ ಸಾತ್ವಿಕ್ (17) ಕಿಡ್ನಿ ವೈಫಲ್ಯದ ತೊಂದರೆಯಿAದ ಅನಿರೀಕ್ಷಿತವಾಗಿ ಅನಾರೋಗ್ಯಕ್ಕೆ ಒಳಗಾಗಿ ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರಿನ ಫಾದರ್ ಮುಲ್ರ‍್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದ್ವಿತೀಯ ಪಿಯುಸಿ ವ್ಯಾಸಂಗಕ್ಕೆ ಸಜ್ಜಾಗಬೇಕಿದ್ದ ಹುಡುಗ ಈಗ ಆಸ್ಪತ್ರೆಯಲ್ಲಿ ಮಲಗಿದ್ದಾರೆ.
ತನ್ನ ತಾಯಿಯೇ ಕಿಡ್ನಿ ನೀಡಲು ಮುಂದಾಗಿದ್ದು, ಶಸ್ತ್ರ ಚಿಕಿತ್ಸೆಗೆ ಸುಮಾರು 10 ಲಕ್ಷಕ್ಕಿಂತಲೂ ಅಧಿಕ ಮೊತ್ತ ಅಗತ್ಯ ಇದೆ. ಇವರ ಕುಟುಂಬವು ಆರ್ಥಿಕವಾಗಿ ಬಡಕುಟುಂಬವಾಗಿದ್ದು, ತಂದೆ ಹೃದಯ ಸಂಬAಧಿ ಅನಾರೋಗ್ಯಕ್ಕೆ ಒಳಗಾಗಿದ್ದು, ಅದರ ಔಷಧಿ ವೆಚ್ಚವನ್ನು ನಿಭಾಯಿಸುವುದರೊಂದಿಗೆ ಮನೆಯ ಇನ್ನಿತರ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಈಗಾಗಲೇ ಕಆರ್ಥಿಕ ಸಂಕಷ್ಟವಿದ್ದು, ಮಗನ ಅನಾರೋಗ್ಯ ಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗದೇ ದಿಕ್ಕುತೋಚದಂತಾಗಿದ್ದಾರೆ. ಆದುದರಿಂದ ಸಹೃದಯಿ ಬಂಧುಗಳ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

ಖಾತೆದಾರರ ಹೆಸರು : ಹರೀಶ್, ಬ್ಯಾಂಕ್ ಹೆಸರು : ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಶಾಖೆ : ಬಂಟ್ವಾಳ, ಖಾತೆ ಸಂಖ್ಯೆ : 520101070321856, ಐಎಫ್‌ಎಸ್‌ಸಿ – ಯುಬಿಐಎನ್0902047, ಮೊಬೈಲ್ ಸಂಖ್ಯೆ : 9008357648, 8495922963

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು