Monday, November 18, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ಕುಂಬ್ರದ ಬ್ಯಾಂಕ್ ಆಫ್ ಬರೋಡಾ ಎಟಿಎಂ ವಿರುದ್ಧ ಗ್ರಾಹಕರ ಆಕ್ರೋಶ –ಕಹಳೆ ನ್ಯೂಸ್

ಪುತ್ತೂರು : ಕುಂಬ್ರ  ಬ್ಯಾಂಕ್ ಆಫ್ ಬರೋಡ ಎಟಿಎಂ ಬಳಸುವ ಮುನ್ನ ಗ್ರಾಹಕರು ಎಚ್ಚರದಿಂದ ಇರಬೇಕಾಗಿದೆ. ಏಕೆಂದರೆ ಎಟಿಎಂಗೆ ಹಣ ಡ್ರಾ ಮಾಡಲು ಹೋದಾಗ ಅಪ್ಪಿತಪ್ಪಿ ಏನಾದರೂ ಕರೆಂಟ್ ಕಡಿತಗೊಂಡರೆ ಹಣವೂ ಕಡಿತಗೊಳ್ಳುವ ಸಾಧ್ಯತೆ ಇದೆ.

ಈ ಎಟಿಎಂನಲ್ಲಿ ಇನ್ವರ್ಟರ್ ಅಥವಾ ಜನರೇಟ್ ವ್ಯವಸ್ಥೆ ಇಲ್ಲದೇ ಇರುವುದೇ ಇದಕ್ಕೆ ಕಾರಣವಾಗಿದೆ. ಎಟಿಎಂ ಮೆಷಿನ್‌ಗೆ ಕಾರ್ಡ್ ಹಾಕಿ, ಪಿನ್ ನಂಬರ್ ಮತ್ತು ಅಮೌಂಟ್ ಹಾಕಿ ಇನ್ನೇನು ಹಣ ಮೆಷಿನ್‌ನೊಳಗಿಂದ ಹಣ ಹೊರ ಬರುವಷ್ಟರಲ್ಲಿ ವಿದ್ಯುತ್ ಕಡಿತಗೊಂಡರೆ ಮೆಷಿನ್ ಸ್ಥಗಿತಗೊಳ್ಳುತ್ತದೆ. ಈ ವೇಳೆ ಅಕೌಂಟಿನಿAದ ಹಣ ಕಡಿತಗೊಂಡ ಸಂದೇಶ ಮೊಬೈಲಿಗೆ ಬರುತ್ತದೆ. ಆದರೆ ಹಣ ನಮಗೆ ಸಿಗುವುದಿಲ್ಲ. ಇದರಿಂದಾಗಿ ಬಹಳಷ್ಟು ಗ್ರಾಹಕರು ಗಲಿಬಿಲಿಗೊಂಡು ಆತಂಕ್ಕಕ್ಕೀಡಾದ ಘಟನೆಗಳು ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತುರ್ತ ಸಂದರ್ಭದಲ್ಲಿ ಗ್ರಾಹಕರು ಈ ಎಟಿಎಂನ್ನು ನಂಬಿ ಬಂದು ಹಣ ಡ್ರಾ ಮಾಡುವಾಗ ಈ ಸಮಸ್ಯೆ ಹಲವು ಬಾರಿ ತಲೆದೋರಿದ್ದು, ಹಲವರು ತೊಂದರೆಗೆ ಸಿಲುಕಿದ ಉದಾಹರಣೆಗಳೂ ಇದೆ. ಇನ್ನು ಮಳೆಗಾಲ ಸಂದರ್ಭದಲ್ಲಿ ಆಗಾಗ ವಿದ್ಯುತ್ ಕಡಿತಗೊಳ್ಳುತ್ತಿರುವುದರಿಂದ ತುರ್ತಾಗಿ ಉತ್ತಮ ಇನ್ವರ್ಟರ್ ಅಥವಾ ಜನರೇಟರ್ ವ್ಯವಸ್ಥೆ ಮಾಡಬೇಕೆಂದು ಗ್ರಾಹಕರು ಆಗ್ರಹಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು