Sunday, November 17, 2024
ಬೆಂಗಳೂರುಸುದ್ದಿ

ಪೆನ್ ಡ್ರೈವ್ ಪ್ರಕರಣ : ವಿದೇಶದಿಂದ ಭಾರತಕ್ಕೆ ಹೊರಟ ಪ್ರಜ್ವಲ್ ರೇವಣ್ಣ : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀಡು ಬಿಟ್ಟ SIT ತಂಡ – ಕಹಳೆ ನ್ಯೂಸ್

ಬೆಂಗಳೂರು: ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಅದನ್ನು ವಿಡಿಯೋ ಮಾಡಿ ವಿಕೃತಿ ಮೆರೆದಿದ್ದ ಪ್ರಜ್ವಲ್‌ ರೇವಣ್ಣ ಅಂತೂ ಇಂತು ಸ್ವದೇಶಕ್ಕೆ ರಿಟರ್ನ್‌ ಆಗ್ತಾ ಇದ್ದಾನೆ. ಪೆನ್‌ಡ್ರೈವ್ ಲೀಕ್‌ ಆಗ್ತಾ ಇದ್ದಂತೆ ದೇಶ ಬಿಟ್ಟು ಎಸ್ಕೇಪ್ ಆಗಿದ್ದ ಪ್ರಜ್ವಲ್‌ ರೇವಣ್ಣಗೆ ಎಸ್‌ಐಟಿ ಹಲವು ನೊಟೀಸ್ ನೀಡಿದ್ರೂ ಕ್ಯಾರೆ ಅಂದಿರಲಿಲ್ಲ. ಇದೀಗ ವಿದೇಶದಿಂದ ವಾಪಾಸಾಗಲು ಮನಸ್ಸು ಮಾಡಿರೋ ಪ್ರಜ್ವಲ್‌ನನ್ನು ಲಾಕ್‌ ಮಾಡಲು ಎಸ್‌ಐಟಿ ಅಧಿಕಾರಿಗಳು ಕೂಡಾ ಸಿದ್ಧತೆ ನಡೆಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದೇಶಕ್ಕೆ ಬರುವುದಾಗಿ ಹಲವು ಬಾರಿ ಸುದ್ದಿಯಾಗಿದ್ರೂ ಪ್ರಜ್ವಲ್‌ ರೇವಣ್ಣ ಬಾರದೆ ಜಾರಿಕೊಂಡಿದ್ದ. ಪ್ರಜ್ವಲ್‌ ಬರ್ತಾನೆ ಅನ್ನೋ ಸುದ್ದಿಯಾದಾಗ ಎಸ್‌ಐಟಿ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಕಾದು ಕೂತು ಸುಸ್ತಾಗಿ ಹೋಗಿದ್ದರು. ಇಷ್ಟೆಲ್ಲಾ ಬೆಳವಣಿಗೆಯ ಬಳಿಕ ಜನರೂ ಕೂಡಾ ರೊಚ್ಚಿಗೆದ್ದು ಆತನ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಲು ಆರಂಭಿಸಿದ್ದರು. ಕೊನೆಗೂ ಹಲವು ಒತ್ತಡಗಳ ಬಳಿಕ ತಾನು ಬರುತ್ತಿರುವುದಾಗಿ ವಿಡಿಯೋ ಮಾಡಿ ಸಂದೇಶ ನೀಡಿ ಫ್ಲೈಟ್ ಹತ್ತಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿದೇಶದಲ್ಲಿ ಕುಳಿತು ಮೇ.31 ರಂದು ಅಂದ್ರೆ ನಾಳೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ವೀಡಿಯೋ ಮೂಲಕ ಹೇಳಿದ್ದ. ಇದೀಗ ಪ್ರಜ್ವಲ್ ರೇವಣ್ಣ ಅವರು ಜರ್ಮನಿಯ ಮ್ಯೂನಿಕ್‌ನಿಂದ ಬೆಂಗಳೂರಿಗೆ ಹೊರಟಿರುವ ವಿಮಾನವನ್ನು ಹತ್ತಿದ್ದಾನೆ. ಇಂದು ತಡರಾತ್ರಿ ಪ್ರಜ್ವಲ್ ರೇವಣ್ಣ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಪ್ರಜ್ವಲ್ ರೇವಣ್ಣಗೆ ಬಂಧನ ಭೀತಿ ಕಾಡುತ್ತಿರುವ ಮಧ್ಯೆ ವಿದೇಶದಲ್ಲಿದ್ದುಕೊಂಡೇ ನಿರೀಕ್ಷಣಾ ಜಾಮೀನು ಅರ್ಜಿ ಕೂಡ ಸಲ್ಲಿಸಿದ್ದ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದ್ದು, ನಿರೀಕ್ಷಣಾ ಜಾಮೀನು ನೀಡುವಂತೆ ಮನವಿ ಮಾಡಿದ್ದ. ಆದರೆ ಎಸ್ಐಟಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ಮೇ 31ಕ್ಕೆ ಮುಂದೂಡಿ ಆದೇಶ ಹೊರಡಿಸಿತ್ತು. ಆ ಮೂಲಕ ಪ್ರಜ್ವಲ್ ಬಂಧನ ಫಿಕ್ಸ್ ಆಗಿದೆ. ಇದೀಗ ಪ್ರಜ್ವಲ್ ಬರುವಿಕೆಯನ್ನು ಕಾದು ಕುಳಿತಿರುವ SIT ತಂಡ ಈಗಾಗಲೇ ಏರ್ಪೋರ್ಟ್ನಲ್ಲೇ ಬೀಡುಬಿಟ್ಟಿದೆ.