Recent Posts

Tuesday, January 21, 2025
ಉಡುಪಿರಾಜಕೀಯಸುದ್ದಿ

ಜನರ‌ ಮನಸ್ಸಿನಿಂದ ನನ್ನನ್ನು ಉಚ್ಛಾಟಿಸಲು ಸಾಧ್ಯವಿಲ್ಲ : ನಾನು ಮಾಡಿದ ಸೇವೆಗೆ ಪದವೀಧರರು ನನ್ನ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸವಿದೆ: ರಘುಪತಿ ಭಟ್– ಕಹಳೆ ನ್ಯೂಸ್

ಸಾಮಾಜಿಕ ಹಾಗೂ ರಾಜಕೀಯ ಜೀವನದಲ್ಲಿ ನಾನು ಮಾಡಿದ ಸೇವಾ ಕಾರ್ಯಗಳಿಂದ ಜನ ನನಗೆ ಅವರ ಮನಸ್ಸಿನಲ್ಲಿ ಸ್ಥಾನ ನೀಡಿದ್ದಾರೆ. ಇಂದು ನಾನು ಹೋದ ಎಲ್ಲಾ ಭಾಗಗಳಲ್ಲಿಯೂ ಜನ ನನ್ನನ್ನು ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದಾರೆ. ಜನರ ಮನಸ್ಸಿನಿಂದ ನನ್ನನ್ನು ಉಚ್ಛಾಟಿಸಲು ಸಾಧ್ಯವಿಲ್ಲ ಎಂದು ನೈಋತ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ಶ್ರೀ‌ ಕೆ. ರಘುಪತಿ ಭಟ್ ಅವರು‌ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಉಡುಪಿ ಹಾಗೂ ಕುಂದಾಪುರ ಭಾಗಗಳಲ್ಲಿ ಬಾರ್ ಕೌನ್ಸಿಲ್, ಶಿಕ್ಷಣ ಸಂಸ್ಥೆಗಳು ಹಾಗೂ ವಿವಿಧ ಕಂಪನಿಗಳಲ್ಲಿ ಇಂದು ದಿನಾಂಕ 30-05-2024 ರಂದು ಮತದಾರರ ಸಭೆ ನಡೆಸಿ ಮತ ಯಾಚಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಸಕನಾಗಿದ್ದಾಗ ಎಲ್ಲಾ ವರ್ಗದ ಜನತೆಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ. ಎಲ್ಲಾ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದೆ. ಹಿಜಾಬ್ ವಿವಾದ ಬಂದಾಗ ಶಾಲೆಯ ಒಳಗೆ ಸಮಾನತೆ ಕಾಯ್ದುಕೊಳ್ಳುವ ದೃಷ್ಟಿಯಿಂದ ಸಮವಸ್ತ್ರಕ್ಕೆ ಆದ್ಯತೆ ನೀಡಲು ಒತ್ತಾಯಿಸಿದ್ದೆ. ಆ ವಿಚಾರದಲ್ಲಿ ನನ್ನನ್ನು ಇಂದು ವ್ಯಂಗ್ಯ ಮಾಡಿದವರಿಗೆ ಜನ ಉತ್ತರ ನೀಡುತ್ತಾರೆ. ಎಲ್ಲರೂ ಶಿಕ್ಷಣ ಪಡೆಯಬೇಕು. ಉತ್ತಮ ಶಿಕ್ಷಣ ಪಡೆದಾಗ ಸುಶಿಕ್ಷಿತ ಸಮಾಜದ ನಿರ್ಮಾಣ ಸಾಧ್ಯ ಎಂದು ಹೇಳಿದ ಅವರು ಇನ್ನೂ ಕೆಲಸ ಮಾಡುವ ತುಡಿತ ಇರುವ ನನಗೆ ಸೇವೆ ಮಾಡಲು ಹರಸಿ ಎಂದು ಪದವೀಧರರು, ವಕೀಲರು ಮತ್ತು ಶಿಕ್ಷಕರಲ್ಲಿ ಮನವಿ ಮಾಡಿದರು.