ರಸ್ತೆ ಬದಿಯಲ್ಲಿ ನಮಾಜ್ ಪ್ರಕರಣ : ಹಿಂದೂ ಮುಖಂಡರ ವಿರುದ್ಧ ಎಫ್.ಐ.ಆರ್ ವಿಶ್ವ ಹಿಂದೂ ಪರಿಷದ್ ದಕ್ಷಿಣ ಪ್ರಾಂತ ಗೋರಕ್ಷ ಪ್ರಮುಖ್ ಮುರಳಿಕೃಷ್ಣ ಹಸಂತಡ್ಕ ಖಂಡನೆ – ಕಹಳೆ ನ್ಯೂಸ್
ಪುತ್ತೂರು : ಮಂಗಳೂರಿನ ಕಂಕನಾಡಿಯ ರಸ್ತೆ ಸಮೀಪ ನಮಾಜ್ ಮಾಡಿದ ಘಟನೆಯನ್ನು ಖಂಡಿಸಿ ಹೇಳಿಕೆ ನೀಡಿರುವ ಹಿಂದೂ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ವಿಶ್ವ ಹಿಂದೂ ಪರಿಷದ್ ದಕ್ಷಿಣ ಪ್ರಾಂತ ಗೋರಕ್ಷ ಪ್ರಮುಖ್ ಮುರಳಿಕೃಷ್ಣ ಹಸಂತಡ್ಕ ಖಂಡಿಸಿದ್ದಾರೆ.
ಮಂಗಳೂರಿನ ಕಂಕನಾಡಿ ರಸ್ತೆ ಬದಿಯಲ್ಲಿ ನಮಾಜ್ ಮಾಡಿ ಸಾರ್ವಜನಿಕರಿಗೆ ಕಿರಿಕಿರಿಯನ್ನುಂಟು ಮಾಡಿದ ಕೃತ್ಯವನ್ನು ಖಂಡಿಸಿ ಹೇಳಿಕೆ ನೀಡಿದ ವಿಶ್ವ ಹಿಂದೂ ಪರಿಷತ್ತಿನ ಪ್ರಮುಖರಾದ ಶರಣ್ ಪಂಪ್ವೆಲ್ ಹಾಗೂ ಪ್ರದೀಪ್ ಸರಿಪಲ್ಲ ಅವರ ಮೇಲೆ ಎಫ್‍ಐಆರ್ ದಾಖಲಿಸಿರುವುದು ಮಾತ್ರವಲ್ಲದೆ, ಸಂಚಾರಕ್ಕೆ ಅಡಚಣೆ ಆಗಿರುವುದು ಸ್ಪಷ್ಟವಾಗಿ ಗೋಚರಿಸಿದ್ದರೂ, ಸಂಚಾರಕ್ಕೆ ಅಡಚಣೆ ಮಾಡುವ ಉದ್ದೇಶ ಇರಲಿಲ್ಲ ಎಂದು ಷರಾ ಬರೆದು ಕೇಸನ್ನು ಹಿಂಪಡೆಯಲು ಹೊರಟಿರುವ ಇಲಾಖೆಯ ಕ್ರಮ ಅತ್ಯಂತ ಖಂಡನೀಯ.
ರಾಜ್ಯ ಸರಕಾರ ಅಲ್ಪಸಂಖ್ಯಾತರ ತುಷ್ಟೀಕರಣದ ಪರಾಕಾಷ್ಟೆಯನ್ನು ತಲುಪಿದ್ದು, ಮುಂದೆ ಹಿಂದೂ ಸಮಾಜ ತಕ್ಕ ಉತ್ತರ ಕೊಡಲಿದೆ ಎಂದು ಹೇಳಿದರು.
ಕೂಡಲೇ ಹಿಂದೂ ನಾಯಕರ ಮೇಲೆ ದಾಖಲು ಮಾಡಿರುವ ಕೇಸನ್ನು ಹಿಂಪಡೆದು ರಸ್ತೆಯಲ್ಲಿ ನಮಾಜ್ ಮಾಡಿದವರ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.