Saturday, November 16, 2024
ಕುಂದಾಪುರದಕ್ಷಿಣ ಕನ್ನಡಸುದ್ದಿ

ಕುಂದಾಪುರ: ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ : ಆಡಳಿತ ವೈದ್ಯಾಧಿಕಾರಿ ವಿರುದ್ಧ ದೂರು – ಆರೋಪಿ ನಾಪತ್ತೆ-ಕಹಳೆ ನ್ಯೂಸ್

ಕುಂದಾಪುರ: ಕಳೆದ ಆರು ತಿಂಗಳಿನಿAದ ತನಗೆ ಹಗಲು ರಾತ್ರಿಯೆನ್ನದೇ ವೈದ್ಯಾಧಿಕಾರಿಯೊಬ್ಬ ಲೈಂಗಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಸಹೋದ್ಯೋಗಿ ವೈದ್ಯೆಯೊಬ್ಬಳು ನೀಡಿದ ದೂರಿನಂತೆ ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ, ರಾಬರ್ಟ್ ರೆಬೆಲ್ಲೋ ಅವರ ವಿರುದ್ಧ ಮಾನಭಂಗಕ್ಕೆ ಯತ್ನ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕುಂದಾಪುರದ ಸರ್ಕಾರೀ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೋ ವಿರುದ್ಧ ಹಿಂದಿನಿAದಲೇ ಹಲವು ಆರೋಪಗಳಿದ್ದವು. ಇದೀಗ ತನ್ನ ಆಸ್ಪತ್ರೆಯಲ್ಲಿರುವ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ವೈದ್ಯೆಗೆ ಕಳೆದ ಆರು ತಿಂಗಳಿನಿAದ ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ ಹಾಗೂ ಮಾನಭಂಗಕ್ಕೆ ಯತ್ನಿಸಿದ್ದಾಗಿ ಮಹಿಳಾ ವೈದ್ಯ ಗುರುವಾರ ಸಂಜೆ ಕುಂದಾಪುರ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಪೊಲೀಸರು 354, 354ಂ, 504, 506, 509 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಆರೋಪಿ ವಿರುದ್ಧ ಸಾರ್ವಜನಿಕರು ಆಕ್ರೋಶಿತರಾಗಿದ್ದು, ಆರೋಪಿ ರಾಬರ್ಟ್ ರೆಬೆಲ್ಲೋ ಬಂಧಿಸುವAತೆ ಆಗ್ರಹಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಘಟನೆಯ ವಿವರ: 32 ವರ್ಷ ಪ್ರಾಯದ ವಿವಾಹಿತ ಮಹಿಳಾ ವೈದ್ಯೆ ಕುಂದಾಪುರದ ಸಾರ್ವಜನಿಕ ತಾಲೂಕು ಆಸ್ಪತ್ರೆಯ ಎನ್,ಆರ್,ಸಿ.ವಿಭಾಗದಲ್ಲಿ ಎನ್.ಆರ್.ಎಚ್.ಎಂ ಅಡಿಯಲ್ಲಿ ವೈದ್ಯಾಧಿಕಾರಿಯಾಗಿ ಅಕ್ಟೋಬರ್ 2023ರಿಂದ ಕೆಲಸ ಮಾಡುತ್ತಿದ್ದಾರೆ. ಕರ್ತವ್ಯದ ಆರಂಭದ ದಿನಗಳಿಂದಲೇ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾಗಿರುವ ಡಾ. ರಾಬರ್ಟ್ ರೆಬೆಲ್ಲೋ ಮೊಬೈಲ್ ಮೂಲಕ ಅಶ್ಲೀಲ ಸಂಭಾಷಣೆ ಮತ್ತು ಸಂದೇಶಗಳನ್ನು ಕಳುಹಿಸುತ್ತಿದ್ದ ಎಂದು ಆರೋಪಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕರ್ತವ್ಯದ ಸಮಯ ಮುಗಿದ ಮೇಲೆ ರಾತ್ರಿ 10-11 ಗಂಟೆಯ ನಂತರದಲ್ಲಿ ಮೆಸೇಜ್ಗಳನ್ನು ಕಳುಹಿಸಿ “ ಅವರನ್ನು ನನ್ನ ಆಪ್ತ ಸ್ನೇಹಿತನೆಂದು ತಿಳಿ ಎಂದು ಹೇಳುತ್ತಾ ನಿನ್ನ ಗಂಡನ ಒಟ್ಟಿಗೆ ಸಂತೋಷವಾಗಿದ್ದೀಯಾ ಗಂಡ ನಿನ್ನ ಮೊಬೈಲ್ ನೋಡುತ್ತಾನೆಯೇ” ಎಂದು ವೈಯುಕ್ತಿಕ ಬದುಕನ್ನು ಕೆದಕುವಂತೆ ಮೆಸೇಜ್ಗಳನ್ನು ಮಾಡುತ್ತಾ ವೀಡಿಯೋ ಕರೆಗಳನ್ನು ಮಾಡುತ್ತಾ ಕಿರುಕುಳ ನೀಡುತ್ತಿರುವುದಾಗಿದೆ. ಅಲ್ಲದೇ ರಾತ್ರಿ ಕರ್ತವ್ಯದ ಹೊರತು ಸಮಯದಲ್ಲಿ ಅತೀ ಅಶ್ಲೀಲವಾಗಿ, ದೈಹಿಕ ರೂಪದ ಬಗ್ಗೆ ವರ್ಣಿಸುವುದು , ಮತ್ತು “ನಿನ್ನಲ್ಲಿ ಅಡಗಿರುವ ಸೌಂದರ್ಯವನ್ನು ನನಗೆ ತೋರಿಸು, ಂm iಟಿ ಟove ತಿiಣh ಥಿou ನನಗೋಸ್ಕರ ನೀನು ಜೀನ್ಸ್ ಟಿ ಷರ್ಟ್ ಗಳನ್ನು ಧರಿಸು ಬೇಬಿ ಡಾರ್ಲಿಂಗ್” “ನಿನ್ನ ಸುಂದರವಾದ ಭಾವಚಿತ್ರ ನನಗೆ ಕಳುಹಿಸು” ಎಂದು ತೀವ್ರ ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಂತ್ರಸ್ತೆ ತನ್ನ ವಾಟ್ಸಾಪ್ ನಲ್ಲಿ ಡಿಸ್ಪ್ಲೇ ಮಾಡಿಕೊಂಡಿದ್ದ ಪೋಟೋಗಳನ್ನು ಹಾಗೂ ಸ್ಟೇಟಸ್ ಗಳನ್ನು ಆರೋಪಿ ರಾಬರ್ಟ್ ಸೇವ್ ಮಾಡಿಕೊಂಡು ನಂತರದಲ್ಲಿ ಸಂತ್ರಸ್ಥೆಗೆ ಕಳುಹಿಸಿ ಅಶ್ಲೀಲ ಕಮೆಂಟ್ಗಳನ್ನು ಮಾಡುತ್ತಿದ್ದ. ಇಷ್ಟಕ್ಕೇ ಬಿಡದ ಆರೋಪಿ ಬೇರೆ ಬೇರೆ ನಂಬರುಗಳಿAದ ವಾಟ್ಸಾಪ್ ಮೆಸೇಜ್ ಮಾಡುತ್ತಿದ್ದು, ಬೇರೆ ಹೆಣ್ಣುಮಕ್ಕಳೊಂದಿಗೆ ಇರುವ ಭಾವಚಿತ್ರ ಕಳುಹಿಸಿ “ನಾನು ಹೊರದೇಶದಲ್ಲಿದ್ದೇನೆ ಮತ್ತು ದುಬಾರಿ ಹೋಟೇಲ್ ನಲ್ಲಿ ತಂಗುತ್ತೇನೆ” ಎಂದು ಹೇಳಿ “ನೀನು ಸಹಕರಿಸಿದರೆ ನಿನ್ನನ್ನೂ ಕರೆದೊಯ್ಯುತ್ತೇನೆ” ಎನ್ನುತ್ತಿದ್ದ. ರಾಜಕೀಯ ವ್ಯಕ್ತಿಗಳ ಜೊತೆ ಇರುವ ಫೋಟೋವನ್ನು ಷೇರ್ ಮಾಡಿ ಅತ್ಯಂತ ಪ್ರಭಾವಿತ ವ್ಯಕ್ತಿ ಬಿಂಬಿಸುತ್ತಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಲ್ಲದೇ ಕಛೇರಿ ಸಮಯದಲ್ಲಿ “ಲಂಚ್ ಗೆ ಡಿನ್ನರ್ ಗೆ ಬಾ” ಎಂದು ಪೀಡಿಸಿ ಪುಸಲಾಯಿಸುತ್ತಿದ್ದ. ಆದರೆ ಸಂತ್ರಸ್ಥೆ ಆತನ ಕೋರಿಕಗಳನ್ನು ನಿರಾಕರಿಸಿದ್ದರಿಂದ ಹತಾಶೆಗೊಳಗಾದ ರಾಬರ್ಟ್ ಆಕೆಗೆ ಅವಾಚ್ಯವಾಗಿ ನಿಂದಿಸಿ, ಜೀವಬೆದರಿಕೆ ಹಾಕಿದ್ದಾನೆ. ಬಳಿಕ ಅಕೆಯ ಮೊಬೈಲ್ ನಲ್ಲಿದ್ದ ಫೋಟೋ ವಿಡಿಯೋ ಹಾಗೂ ಮೆಸೇಜ್ ಗಳನ್ನು ಡಿಲಿಟ್ ಮಾಡುವಂತೆ ಒತ್ತಾಯಿಸಿ ಬೆದರಿಕೆ ಹಾಕಿದ್ದಾನೆ. ಮೇ 23ರಂದು ಕೆಲಸದ ಕಾರಣಕ್ಕೆ ಸಂತ್ರಸ್ಥೆ ರಾಬರ್ಟ್ ಕೊಠಡಿಗೆ ಹೋದಾಗ ಯಾರೂ ಇಲ್ಲದ ಸಮಯ ಸಂತ್ರಸ್ಥೆಯ ಮೊಬೈಲನ್ನು ಕಸಿದುಕೊಂಡು ರಾಬರ್ಟ್ ಮಾಡಿದ ವಾಟ್ಸಾಪ್ ಚಾಟನ್ನು ಡಿಲೀಟ್ ಮಾಡಬೇಕೆಂದು ಒತ್ತಾಯಿಸಿದ್ದು, ನಿರಾಕರಿಸಿದಾಗ “ನೀನು ಪುರುಷ ಡಾಕ್ಟರ್ ಗಳ ಜೊತೆ ಸ್ವಾಭಾವಿಕವಾಗಿ ಮಾತನಾಡುವ ವಿಚಾರವನ್ನು ಎಂದು ಬಿಂಬಿಸಿ ಪತ್ರಿಕೆಯಲ್ಲಿ ಪ್ರಕಟಣೆ ಮಾಡಿ ನಿನ್ನ ಗೌರವಕ್ಕೆ ಧಕ್ಕೆ ತಂದು ನಿನ್ನ ಹೆಸರನ್ನು ಕೆಡಿಸಿ ಉದ್ಯೋಗದಿಂದ ತೆಗೆಯುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ಥೆ ವೈದ್ಯೆ ದೂರಿನಲ್ಲಿ ತಿಳಿಸಿದ್ದಾಳೆ. ಈ ಬಗ್ಗೆ ಪ್ರತಿಕ್ರಿಯೆಗಾಗಿ ಆರೋಪಿಯಾಗಿರುವ ಆಡಳಿತ ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೋನನ್ನು ಸಂಪರ್ಕಿಸಿದಾಗ ಸಂಪರ್ಕಕ್ಕೆ ಲಭ್ಯವಾಗಿಲ್ಲ.