Friday, September 20, 2024
ಸುದ್ದಿ

ಎಟಿಎಂಗಳಿಗೂ ಕ್ಯೂಆರ್ ಕೋಡ್ ಅಳವಡಿಸಲು ಸಿದ್ದತೆ – ಕಹಳೆ ನ್ಯೂಸ್

ದೆಹಲಿ: ದೇಶದಲ್ಲಿ ನೋಟ್ ಬ್ಯಾನ್ ಬಳಿಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಡಿಜಿಟಲೀಕರಣದ ಯುಗ ಆರಂಭವಾಯಿತು ಎಂದರೆ ತಪ್ಪಿಲ್ಲ. ಡಿಜಿಟಲ್ ಕ್ರಾಂತಿಯ ಮುಂದುವರಿದ ಭಾಗವಾಗಿ ಎಟಿಎಂಗಳಿಗೂ ಕ್ಯೂಆರ್ ಕೋಡ್ ಅಳವಡಿಸಲು ಸಿದ್ದತೆ ನಡೆದಿದೆ.

ಇಷ್ಟು ದಿನ ಎಟಿಎಂಗಳಿಂದ ಹಣ ಬಿಡಿಸಲು ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನು ಎಟಿಎಂ ಯಂತ್ರಗಳಲ್ಲಿ ಸ್ವೈಪ್ ಮಾಡಿ ಹಣ ಬಿಡಿಸಬೇಕಿತ್ತು. ಆದರೆ ಇದೀಗ ಕೇವಲ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಹಣ ಬಿಡಿಸಿಕೊಳ್ಳುವ ತಂತ್ರಾಂಶ ಸಿದ್ಧಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪೇಟಿಯಂ, ಯುಪಿಐ ಸೇರಿದಂತೆ ವಿವಿಧ ಇ-ವ್ಯಾಲೆಟ್ ನಲ್ಲಿರುವ ಸೌಲಭ್ಯದಂತೆ ಬ್ಯಾಂಕ್ ಖಾತೆಗೂ ಇದನ್ನು ಮುಂದುವರಿಸಲು ಬ್ಯಾಂಕಿಂಗ್ ಕ್ಷೇತ್ರ ಸಿದ್ಧತೆ ನಡೆಸಿದೆ.

ಜಾಹೀರಾತು