Recent Posts

Tuesday, January 21, 2025
ಸುದ್ದಿ

ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ..?- ಕಹಳೆ ನ್ಯೂಸ್‌

ಚಿನ್ನದ ಬೆಲೆ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಕುಸಿತ ಕಾಣುತ್ತಿದೆ. ಹೀಗೆ ಚಿನ್ನವು ಭಾರಿ ಪ್ರಮಾಣದಲ್ಲಿ ಕುಸಿತ ಕಾಣುತ್ತಿರುವ ಕಾರಣಕ್ಕೆ ಆಭರಣ ಪ್ರಿಯರ ಗಮನ ಕೂಡ ಈ ಹಳದಿ ಲೋಹದ ಕಡೆಗೆ ನೆಟ್ಟಿದೆ. ಹೀಗಿದ್ದಾಗಲೇ ಚಿನ್ನದ ಬೆಲೆ ಕುಸಿಯುತ್ತಾ ಹೋಗಿ, ಕೆಲ ದಿನಗಳಲ್ಲಿ 50,000 ರೂಪಾಯಿಗೆ ವಾಪಸ್ ಬರುತ್ತಾ?

ಅನ್ನೋ ಪ್ರಶ್ನೆ ಕೂಡ ಈಗ ಉದ್ಭವಿಸಿದೆ. ಹಾಗಾದ್ರೆ ಇದೀಗ ಎಷ್ಟಿದೆ ಚಿನ್ನದ ಬೆಲೆ?

ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು, ಚಿನ್ನದ ಬೆಲೆ ನಿರಂತರವಾಗಿ ಏರಿಕೆ ಕಾಣುತ್ತಿದ್ದ ಕಾರಣಕ್ಕೆ ಆಭರಣ ಪ್ರಿಯರಿಗೆ ಈ ಸುದ್ದಿ ಆಘಾತ ನೀಡುತ್ತಿತ್ತು. ಆದರೆ ಇದ್ದಕ್ಕಿದ್ದಂತೆ ಮತ್ತೆ ಚಿನ್ನದ ಬೆಲೆ ಕುಸಿತದ ಹಾದಿಯ ಹಿಡಿಯಿತು. ಹೀಗೆ ನೋಡ ನೋಡುತ್ತಲೇ ಕಳೆದ 1 ವಾರದಿಂದ ಚಿನ್ನದ ಬೆಲೆ ನಿರಂತರವಾಗಿ ಇಳಿಕೆ ಕಾಣಲು ಆರಂಭ ಆಯಿತು. ಕೆಲವು ದಿನಗಳ ಹಿಂದೆ ಚಿನ್ನ ಮತ್ತಷ್ಟು ಕುಸಿತ ಕಂಡು ಈಗ ಹೊಸ ಹೊಸ ದಾಖಲೆ ಬರೆಯುತ್ತಿದೆ. ಹಾಗಾದ್ರೆ ಚಿನ್ನದ ಬೆಲೆ 50,000 ರೂಪಾಯಿಗೆ ವಾಪಸ್ ಬರುತ್ತಾ? ಮುಂದೆ ಓದಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಚಿನ್ನದ ಬೆಲೆ ಈಗ ಎಷ್ಟಿದೆ?

ಆಭರಣ ಚಿನ್ನ ಅಂದರೆ 22 ಕ್ಯಾರೆಟ್ ಚಿನ್ನದ ಬೆಲೆ ಮಾರುಕಟ್ಟೆಯಲ್ಲಿ ಕುಸಿತ ಕಂಡಿದ್ದು, ಪ್ರತಿ 100 ಗ್ರಾಂ ಆಭರಣ ಚಿನ್ನದ ಬೆಲೆ ಇದೀಗ 4000 ರೂಪಾಯಿ ಕುಸಿತ ಕಂಡಿದೆ. ಹಾಗೇ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ಇದೀಗ 400 ರೂ. ನಷ್ಟು ಕಡಿತವಾಗಿದೆ. ಹೀಗೆ ಆಭರಣ ಚಿನ್ನದ ಬೆಲೆ ಕುಸಿತದ ನಂತರ ಪ್ರತಿ 10 ಗ್ರಾಂಗೆ 66,700 ರೂ. ಬೆಲೆ ಇದೆ. 24 ಕ್ಯಾರೆಟ್‌ನ ಚಿನ್ನದ ಬೆಲೆ ಕೂಡ ಕುಸಿದು ಬಿದ್ದಿದ್ದು, ಈಗ 24 ಕ್ಯಾರೆಟ್ ಚಿನ್ನದ ಬೆಲೆ 4,400 ರೂಪಾಯಿ ಕುಸಿತ ಕಂಡಿದೆ. ಈ ಮೂಲಕ ಇದೀಗ 24 ಕ್ಯಾರೆಟ್ ಚಿನ್ನದ ಬೆಲೆ 72760 ರೂಪಾಯಿ ಆಗಿದೆ. ಹಾಗೇ 18 ಕ್ಯಾರೆಟ್ ಚಿನ್ನದ ಬೆಲೆ 3,300 ರೂಪಾಯಿ ಕುಸಿತ ಕಂಡು ಪ್ರತಿ 10 ಗ್ರಾಂಗೆ 54,570 ರೂಪಾಯಿ ಮಾರಾಟ ಆಗುತ್ತಿದೆ.

50 ಸಾವಿರ ರೂಪಾಯಿಗೆ ಚಿನ್ನ?

ಹೂಡಿಕೆ ಮಾಡುವವರಿಗೆ ಚಿನ್ನದ ಬೆಲೆ ಹೆಚ್ಚಾದರೆ ಖುಷಿ ಆಗುತ್ತದೆ, ಹೀಗಿದ್ರೂ ಸಾಮಾನ್ಯವಾಗಿ ಆಭರಣ ಹೆಚ್ಚಾಗಿ ಇಷ್ಟಪಡುವ ಮಹಿಳೆಯರಿಗೆ ಚಿನ್ನದ ಬೆಲೆ ಕುಸಿದರೆ ಖುಷಿ. ಹೀಗಾಗಿ ಚಿನ್ನದ ಬೆಲೆ ಕಳೆದ 1 ತಿಂಗಳಿಂದ ಭಾರಿ ಏರಿಳಿತ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯು ಮತ್ತಷ್ಟು ಕುಸಿತ ಕಂಡು ಆ ನಂತರ, ಮತ್ತೆ ಏರಿಕೆಯ ಹಾದಿಗೆ ಮರಳುತ್ತೆ ಎಂದು ಹೇಳುತ್ತಿದ್ದರು ತಜ್ಞರು. ಆದ್ರೆ ಈಗ ಚಿನ್ನ ಮತ್ತೆ 50 ಸಾವಿರ ರೂಪಾಯಿಗೆ ಕುಸಿತ ಕಾಣಲಿದೆ ಎಂಬ ಮಾತುಗಳು ಓಡಾಡುತ್ತಿವೆ. ಈ ಪ್ರಶ್ನೆಗಳಿಗೆ ಇನ್ನೇನು ಕೆಲವೇ ದಿನದಲ್ಲಿ ಉತ್ತರ ಸಿಗಲಿದೆ.