Tuesday, January 21, 2025
ದಕ್ಷಿಣ ಕನ್ನಡಬಂಟ್ವಾಳಶಿಕ್ಷಣಸುದ್ದಿ

ಬಂಟ್ವಾಳ ತಾಲೂಕಿನ ದ ಕ ಜಿ ಪಂ ಹಿ ಪ್ರಾ ಶಾಲೆ ಕಡೇಶಿವಾಲಯ ಇಲ್ಲಿ 2024-2025 ನೇ ಸಾಲಿನ ಶಾಲಾ ಪ್ರಾರಂಭೋತ್ಸವ–ಕಹಳೆ ನ್ಯೂಸ್

ದ ಕ ಜಿ ಪಂ ಹಿ ಪ್ರಾ ಶಾಲೆ ಕಡೇಶಿವಾಲಯ ಇಲ್ಲಿ ಕಡೇಶಿವಾಲಯ ಪಂಚಾಯತ್ ನಾ ಅಧ್ಯಕ್ಷರಾದ ಭಾರತಿ ಎಸ್ ರಾವ್ ಹೊಸದಾಗಿ ಸೇರಿದ ಮಕ್ಕಳನ್ನು ಹೂಗುಚ್ಛ ಕೊಟ್ಟು ಸ್ವಾಗತಿಸುವುದರೊಂದಿಗೆ ಶಾಲಾ ಪ್ರಾರಂಭೋತ್ಸವವನ್ನು ಆಚರಿಸಲಾಯಿತು. ಶಾಲೆಯನ್ನು ತಳಿರು ತೋರಣಗಳಿಂದ ಶೃಂಗರಿಸಲಾಯಿತು.

ಶಾಲೆಯ ಎಲ್ಲಾ ಸಿಬ್ಬಂದಿ ವರ್ಗ, ಶಾಲಾ ವಿದ್ಯಾರ್ಥಿಗಳು, ಎಸ್ ಡಿ ಎಂ ಸಿ ಸಮಿತಿಯ ಅಧ್ಯಕ್ಷರು,ಸದಸ್ಯರು ಹಾಜರಿದ್ದರು. ಆಂಗ್ಲ ಮಾಧ್ಯಮ ಶಾಲೆ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಸದಸ್ಯರು ಮಕ್ಕಳ ಪೋಷಕರು ಹಿರಿಯರು ನಿವೃತ್ತ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕರಾದ ಬಾಬು ಪೂಜಾರಿ ಕೆ ಸೇರಿದಂತಹ ಅತಿಥಿಗಳನ್ನು ಸ್ವಾಗತಿಸಿದರು ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಗಿರಿಯಪ್ಪ ಸರ್ ಮತ್ತು ಮಾಧವ ರೈ ಗಳು ಮಕ್ಕಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಸುರೇಶ್ ಕಣ್ಣೊಟ್ಟು, ಸದಸ್ಯರಾದ ವಶಿತಾ ನೆತ್ತರ, ಊರಿನ ಗಣ್ಯರಾದ ವಿದ್ಯಾಧರ್ ರೈ, ಕಿ ರಣ್ ಶೆಟ್ಟಿ,ಸಾಂತಪ್ಪ ಪೂಜಾರಿ, ಭವಾನಿ ಟೀಚರ್ ಉಪಸ್ಥಿತರಿದ್ದರು. ಎಸ್ ಡಿ ಎಂ ಸಿ ಅಧ್ಯಕ್ಷರಾದ ಹರಿಶ್ಚಂದ್ರ ಎಂ ಎಲ್ಲರಿಗೂ ವಂದಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು