Tuesday, January 21, 2025
ದಕ್ಷಿಣ ಕನ್ನಡಬಂಟ್ವಾಳಶಿಕ್ಷಣಸುದ್ದಿ

ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನ ಆಶ್ರಯದಲ್ಲಿ ನಡೆದ “ಸ್ವಸ್ಥ ಭಾರತಕ್ಕಾಗಿ ಸ್ವಚ್ಛ ಪರಿಸರ” ಎಂಬ ವಿಷಯದ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ – ಕಹಳೆ ನ್ಯೂಸ್

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನ ಆಶ್ರಯದಲ್ಲಿ ಸ್ವಸ್ಥ ಭಾರತಕ್ಕಾಗಿ ಸ್ವಚ್ಛ ಪರಿಸರಎಂಬ ವಿಷಯದ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವು ಪದವಿ ವಿಭಾಗದ ಆಜಾದ್ ಭವನದಲ್ಲಿ ನಡೆಯಿತು. ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿಯವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದರು.

ಪ್ರಾರಂಭದಲ್ಲಿ ವಿದ್ಯಾರ್ಥಿಗಳಿಂದ ಸರಸ್ವತಿ ವಂದನೆ ನಡೆದಿದ್ದು ನಂತರ ವಾತಾವರಣ ಶುದ್ಧಗೊಳಿಸುವ ಅಗ್ನಿಹೋತ್ರದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮಾಜಸೇವಕಿ, ಅದಮ್ಯ ಚೇತನಾ ಟ್ರಸ್ಟ್ ನ ಸಂಸ್ಥಾಪಕಿ, ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಪತ್ನಿ ಡಾ. ತೇಜಸ್ವಿನಿ ಇವರು ಮಾತನಾಡಿ, ಬಳಕೆಯ ಪ್ರತಿಯೊಂದು ವಸ್ತುವಿನ ಮೂಲವನ್ನು ಅರಿತು, ಪರಿಸರ ಸ್ನೇಹಿಯೇ ಎಂಬುದಾಗಿ ವಿಚಾರ ಮಾಡಿ ಬಳಸಬೇಕು, ಪ್ರತಿಯೊಬ್ಬರೂ ಪರಿಸರ ರಕ್ಷಣೆಯ ಚಿಂತನೆಯನ್ನು ಮಾಡಬೇಕು ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕ ಡಾ.ಪ್ರಭಾಕರ ಭಟ್ ಕಲ್ಲಡ್ಕಅವರು, ಪ್ರತಿಯೊಂದು ಜೀವಿಯೂ ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಆದ್ದರಿಂದ ಪ್ರಕೃತಿಯ ನಾಶದಿಂದ ಸರ್ವನಾಶ, ಎಂದು ಎಚ್ಚರಿಸುವ ಮೂಲಕ ಪ್ರಸ್ತಾವಿಕ ನುಡಿಗಳನ್ನಾಡಿದರು. ಪ್ರಾಂಶುಪಾಲ ಕೃಷ್ಣ ಪ್ರಸಾದ್ ಕಾಯರಕಟ್ಟೆ ಸ್ವಾಗತಿಸಿದರು. ವಿದ್ಯಾರ್ಥಿನಿ ಪ್ರತೀಕಾ ಕಾರ್ಯಕ್ರಮ ನಿರ್ವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಉದ್ಘಾಟನಾ ಸಮಾರಂಭದ ನಂತರಅದೇ ವೇದಿಕೆಯಲ್ಲಿ ಪರಿಸರ ಹಿತಚಿಂತನೆಯ ವಿಚಾರವಾಗಿ 5 ಗೋಷ್ಠಿಗಳು ನಡೆದವು. ಮೊದಲನೇ ಗೋಷ್ಠಿಯಲ್ಲಿ “ಜಲ ಮತ್ತು ಮರಜಾಗೃತಿಯ ದೇಸಿ ದಾರಿ” ಎಂಬ ವಿಷಯದ ಕುರಿತು ಪರಿಸರ ಚಿಂತಕರು ಮತ್ತು ಬರಹಗಾರ ಶಿವಾನಂದ ಕಳವೆಯವರು ವಿಷಯ ಮಂಡಿಸಿದರು. ಎರಡನೇ ಗೋಷ್ಠಿಯಲ್ಲಿ “ಆರಾಧನೆ ಮತ್ತು ನಂಬಿಕೆಗಳಲ್ಲಿ ಪರಿಸರ ಉಳಿಕೆಯ ದೃಷ್ಟಿ” ವಿಷಯವನ್ನು ಪುತ್ತೂರಿನ ಸರಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ನರೇಂದ್ರ ರೈ ದೇರ್ಲ ಇವರು ಮಂಡಿಸಿದರು.

ಮೂರನೇ ಅವಧಿಯ ಸಂಪನ್ಮೂಲ ವ್ಯಕ್ತಿ ಕರ್ನಾಟಕ ರಾಜ್ಯ ಪರಿಸರ ಆಘಾತ ಅಂದಾಜಿಕರಣ ಪ್ರಾಧಿಕಾರ ಬೆಂಗಳೂರಿನ ನಿಕಟಪೂರ್ವಚಅಧ್ಯಕ್ಷ ಡಾ.ಎಂ.ಆರ್ ಶ್ರೀಹರ್ಷ ಇವರು “ಸಮಗ್ರತ್ಯಾಜ್ಯ ನಿರ್ವಹಣೆ” ಕುರಿತು ವಿವರಿಸಿದರು. ನಾಲ್ಕನೇ ಅವಧಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ವೃತ್ತಿಯಲ್ಲಿ ಇದ್ದು, ಪ್ರಸ್ತುತ ಪೂರ್ಣಾವಧಿ ಕೃಷಿಕ ವಸಂತ ಕಜೆಯವರು “ಮಣ್ಣುಮತ್ತುಆಹಾರವಿಷಮುಕ್ತವಾಗುವತ್ತ” ಎಂಬ ವಿಷಯವನ್ನು ಪ್ರಸ್ತುತಪಡಿಸಿದರು.ಕೊನೆಯ ಗೋಷ್ಠಿಯಲ್ಲಿ ಪರ್ಯಾವರಣ ಸಂರಕ್ಷಣಗತಿವಿಧಿಯ ಪ್ರಾಂತ ಸಂಯೋಜಕ ವೆಂಕಟೇಶ್ ಸಂಗನಾಳ ಇವರು “ಪರಿಸರ ಸ್ನೇಹಿ ಜೀವನ ಪದ್ಧತಿ” ಯ ಬಗ್ಗೆ ಮಂಡಿಸಿದರು. ಕು.ಗಾಯತ್ರೀ ಪರಿಸರದಕುರಿತಾದ ವೈಯಕ್ತಿಕ ಗೀತೆಯನ್ನು ಹಾಡಿದರು. ಒಟ್ಟು 45 ವಿದ್ಯಾಸಂಸ್ಥೆಗಳಿಂದ 229 ಶಿಕ್ಷಕರು, 487 ವಿದ್ಯಾರ್ಥಿಗಳು, 51 ಇತರ ಪ್ರತಿನಿಧಿಗಳು ಸೇರಿಒಟ್ಟು 767 ಮಂದಿ ಭಾಗವಹಿಸಿದ್ದರು.