Friday, November 22, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಟರ್ಪಾಲಿನಲ್ಲಿ ಮುಚ್ಚಿಕೊಂಡ ಬ್ರಹ್ಮರಕೂಟ್ಲುವಿನ ಟೋಲ್ ಕೇಂದ್ರ- ಕಹಳೆ ನ್ಯೂಸ್

ಬಂಟ್ವಾಳ : ಟರ್ಪಾಲಿನಲ್ಲಿ ಮುಚ್ಚಿಕೊಂಡ ನಾಲ್ಕು ಬೂತ್‍ಗಳು, ಟರ್ಪಾಲಿನೊಳಗಡೆ ಕಬ್ಬಿಣದ ತುಕ್ಕು ಹಿಡಿದ ಮೆಶ್‍ನಿಂದ ನಿರ್ಮಾಣ ಮಾಡಿದ ಸುಂಕ ವಸೂಲಿ ಮಾಡಲು ನಿರ್ಮಿಸಿರುವ ಪುಟ್ಟ ಕೊಠಡಿ, ಅದರ ಸುತ್ತಲೂ ಕಬ್ಬಿಣದ ಶೀಟುಗಳ ರಾಶಿ, ಮತ್ತೊಂದು ಕಡೆ ತುಕ್ಕು ಹಿಡಿದಿರುವ ಕಬ್ಬಿಣದ ಪೈಪುಗಳ ರಾಶಿ ಹೀಗೆ ಕಬ್ಬಿಣದ ಪಂಜರದೊಳಗಿಂದ ದಿನದಲ್ಲಿ ಲಕ್ಷಾಂತರ ಸುಂಕ ವಸೂಲಿ ಮಾಡುತ್ತಿದ್ದರೂ ಕಾರ್ಮಿಕರಿಗೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ.

ಇದು ಮಂಗಳೂರು-ಬೆಂಗಳೂರು ಮಧ್ಯ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಬ್ರಹ್ಮರಕೂಟ್ಲುವಿನಲ್ಲಿ ಹಲವಾರು ವರ್ಷಗಳಿಂದ ಸುಂಕ ವಸೂಲಿ ಮಾಢುತ್ತಿರುವ ಟೋಲ್ ಕೇಂದ್ರದ ದುಸ್ಥಿತಿ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ದಿನಕ್ಕೆ ಲಕ್ಷಾಂತರ ಹಣವನ್ನು ರಾತ್ರಿ ಹಗಲೆನ್ನದೇ, ಮಳೆ ಬಿಸಿಲೆನ್ನದೇ ರಸ್ತೆಯಲ್ಲೇ ನಿಂತು ದಿನನಿತ್ಯ ಪ್ರವಾಸಿಗರಿಂದ ಬೈಗಳನ್ನೂ ತಿಂದರೂ ಸುಂಕ ವಸೂಲಿ ಮಾಡಿ ನೀಡುವ ಬೂತ್ ಮಾತ್ರ ಗ್ರಾಮೀಣ ಭಾಗದಲ್ಲಿರುವ ಗೂಡಂಗಡಿಗೆ ತರ್ಪಾಲ್ ಮುಚ್ಚಿದ ಸ್ಥಿತಿಯಲ್ಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೇಲ್ಚಾವಣಿ ರಿಪೇರಿ : ಕಳೆದ ಕೆಲವು ದಿನಗಳಿಂದ ಟೋಲ್ ಪ್ಲಾಜಾದ ಮೇಲ್ಚಾವಣಿ ಶೀಟು ಇಲ್ಲದಿರುವ ಕಡೆ ಹೊಸ ಶೀಟುಗಳನ್ನು ಹಾಕಿದ್ದು, ಅದರಲ್ಲಿ ಉಳಿದ ಹಳೆಯ ತುಕ್ಕು ಹಿಡಿದಿರುವ ಕಬ್ಬಿಣದ ಕಂಬಗಳು, ಕಬ್ಬಿಣದ ಶೀಟುಗಳು ಸುಂಕ ವಸೂಲಿ ಕೇಂದ್ರದ ಹತ್ತಿರವೇ ರಾಶಿಯಾಗಿ ಬಿದ್ದಿದೆ. ಇದರಿಂದ ಇಲ್ಲಿರುವ ಕಾರ್ಮಿಕರಿಗೆ ಬರುವ ವಾಹನಗಳ ಸುಂಕ ವಸೂಲಿ ಮಾಡಲು ತೊಂದರೆಯಾಗುತ್ತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾತ್ರಿ ಮರಳು ಲಾರಿ ವಿರುದ್ಧ ದಿಕ್ಕಿನಲ್ಲಿ ಸಂಚಾರ : ಸರ್ವೀಸ್ ರಸ್ತೆಯಲ್ಲಿ ಘನವಾಹನಗಳಿಗೆ ತಡೆಬೇಲಿ ನಿರ್ಮಿಸಿರುವುದರಿಂದ ಬಿ.ಸಿ.ರೋಡಿನಿಂದ ಮರಳು ಕೊಂಡೊಯ್ಯಲು ಬರುತ್ತಿರುವ ಹೆಚ್ಚಿನ ವಾಹನಗಳು ರಾತ್ರಿ ಹೊತ್ತಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲೇ ವಿರುದ್ಧ ದಿಕ್ಕಿನಲ್ಲೇ ನಿರಂತರ ಸಂಚಾರ ಮಾಡುತ್ತಿವೆ. ಈ ಸಮಯದಲ್ಲಿ ಸುಂಕ ವಸೂಲಿ ಮಾಡುವ ಕಾರ್ಮಿಕರು ಮಾತ್ರ ಇದ್ದು, ಪೆÇಲೀಸ್ ಇಲಾಖೆ ಯಾವುದೇ ಸಿಬ್ಬಂದಿಯನ್ನು ನೇಮಿಸದೇ ಇರುವುದರಿಂದ ವಸೂಲಿ ಮಾಡುವ ಸಂದರ್ಭದಲ್ಲಿ ಪ್ರಾಣ ಭಯವೂ ಕಾಡುತ್ತಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಂಡು ವ್ಯವಸ್ಥಿತ ರೀತಿಯಲ್ಲಿ ಈ ಟೋಲ್ ಬೂತ್‍ನ್ನು ನಿರ್ಮಾಣ ಮಾಡಬೇಕಾಗಿದೆ. ಇದರಿಂದ ಟೋಲ್ ವಸೂಲಿ ಕಾರ್ಮಿಕಗರಿಗೂ ಅನುಕೂಲವಾಗಲಿದೆ ಜೊತೆಗೆ ವಾಹನ ಸವಾರರಿಗೂ ಕೂಡ.