Recent Posts

Monday, January 20, 2025
ಸುದ್ದಿ

#MeToo ಮಾವನ ಬಳಿಕ ಅಳಿಯ ಚಿರಂಜೀವಿ ಮೇಲೂ ಮೀಟೂ ಆರೋಪ – ಕಹಳೆ ನ್ಯೂಸ್

ಬೆಂಗಳೂರು: ಕೆಲವು ದಿನಗಳಿಂದ ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಮೇಲೆ ಶೃತಿ ಹರಿಹರನ್ ಮೀಟೂ ಆರೋಪ ಮಾಡುತ್ತಿದ್ದು, ಪ್ರಕರಣ ದಾಖಲಿಸಿದ್ದಾರೆ. ಈ ಬೆನ್ನಲ್ಲೇ ಅವರ ಅಳಿಯ ನಟ ಚಿರಂಜೀವಿ ಸರ್ಜಾ ಮೇಲೆ ಮೀಟೂ ಆರೋಪ ಕೇಳಿ ಬರುತ್ತಿದೆ.

ನಟಿ ಸಂಗೀತಾ ಭಟ್ ಅಭಿಮಾನಿಗಳು ಚಿರಂಜೀವಿ ಸರ್ಜಾ ಮೇಲೆ ಮೀಟೂ ಆರೋಪ ಮಾಡುತ್ತಿದ್ದಾರೆ. 2017 ರಲ್ಲಿ ತೆಲುಗು ಚಿತ್ರ ‘ಕ್ಷಣಂ’ ರಿಮೇಕ್ ವೇಳೆ ಈ ಘಟನೆ ನಡೆದಿದ್ದು, ಕೆ.ಎಂ.ಚೈತನ್ಯ ನಿರ್ದೇಶನದ ಹೆಸರಿಡದ ಚಿತ್ರಕ್ಕಾಗಿ ಶೃತಿ ಹರಿಹರನ್ ಮತ್ತು ಸಂಗೀತಾ ಭಟ್ ಇಬ್ಬರನ್ನು ನಾಯಕಿರನ್ನಾಗಿ ಆಯ್ಕೆ ಮಾಡಲಾಗಿತ್ತು. ಈ ವೇಳೆ ತಮ್ಮ ಅನುಭವವನ್ನು ಸಂಗೀತಾ ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು. ಇದಕ್ಕೆ ಕಮೆಂಟ್ ಮಾಡಿದ ನಟಿಯ ಅಭಿಮಾನಿಗಳು ಚಿರಂಜೀವಿ ವಿರುದ್ಧ ಆರೋಪ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪವೇನು?:
ನಟಿ ಸಂಗೀತಾ ಭಟ್ ಇತ್ತೀಚೆಗೆ ಒಂದು ಪೋಸ್ಟ್ ಮಾಡಿದ್ದರು ಅದರಲ್ಲಿ, 2017ರಲ್ಲಿ ರೀಮೇಕ್ ಚಿತ್ರವೊಂದನ್ನು ಒಪ್ಪಿಕೊಂಡಿದ್ದೆ. ಆದರೆ ಆ ಸಿನಿಮಾದ ನಟ ಕನ್ಯತ್ವವನ್ನು ಪ್ರಶ್ನೆ ಮಾಡಿದ್ದರು. ಆದ್ದರಿಂದ ನಾನು ಸಿನಿಮಾದಿಂದ ಹೊರಬಂದೆ ಎಂದು ಹೇಳಿದ್ದರು. ಆದರೆ ಈಗ ಅವರ ಅಭಿಮಾನಿಗಳು ಆ ಸಿನಿಮಾದ ನಟ ಚಿರಂಜೀವಿ ಆಗಿದ್ದರು. ಆದ್ದರಿಂದ ಅವರು ಈ ರೀತಿ ಪ್ರಶ್ನೆ ಮಾಡಿದ್ದಾರಾ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.

ಸಂಗೀತಾ ಸ್ಪಷ್ಟನೆ:
ಈ ಆರೋಪದ ಬಗ್ಗೆ ಸಂಗೀತಾ ಭಟ್ ಫೇಸ್ ಬುಕ್ ನಲ್ಲಿ ಲೈವ್ ಬಂದು ಸ್ಪಷ್ಟನೆ ಕೊಟ್ಟಿದ್ದಾರೆ. “ನಾನು ಇತ್ತೀಚೆಗೆ ಜೀವನದಲ್ಲಿ ನಡೆದ ಘಟನೆಯ ಬಗ್ಗೆ ಒಂದು ಪೋಸ್ಟ್ ಹಾಕಿದ್ದೆ. ನನ್ನನ್ನು ಫಾಲೋ ಮಾಡುತ್ತಿರುವ ಅಭಿಮಾನಿಗಳಿಗೆ ನಾನು ಪಟ್ಟಿರುವ ಕಷ್ಟ ಗೊತ್ತಾಗಲಿ ಎಂದು ಆ ಪೋಸ್ಟ್ ಹಾಕಿದ್ದೆ. ನಾನು 1 ವರ್ಷದಿಂದ ಇಂಡಸ್ಟ್ರಿಯಲ್ಲಿ ಇಲ್ಲ. ಹೀಗಾಗಿ ನಾನು ಪಬ್ಲಿಸಿಟಿಗೋಸ್ಕರ್ ಪೋಸ್ಟ್ ಮಾಡಿಲ್ಲ. ನಾನು ನನ್ನ ಜೀವನದಲ್ಲಿ ನಡೆದ ಘಟನೆಯನ್ನು ಹೇಳಿಕೊಂಡಿದ್ದೇನೆ” ಎಂದು ಹೇಳಿದ್ದಾರೆ.

ಇನ್ನೊಂದು ನಾನು ಹಾಕಿರುವ ಪೋಸ್ಟ್ ನಲ್ಲಿ ಯಾವ ನಟ, ನಿರ್ದೇಶಕ, ನಿರ್ಮಾಪಕರ ಮೇಲೂ ಮೀಟೂ ಆರೋಪ ಮಾಡಿಲ್ಲ. ನನ್ನ ಅನುಭವನ್ನು ಹಂಚಿಕೊಂಡಿದ್ದೇನೆ ಅಷ್ಟೆ. ನಾನು ಮಾಡಿರುವ ಪೋಸ್ಟ್ ಇಟ್ಟುಕೊಂಡು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಆ ರೀತಿ ಮಾಡಬೇಡಿ. ನಮ್ಮ ಪಾಡಿಗೆ ನಮ್ಮನ್ನು ಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ.