Sunday, November 24, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ಬಲ್ನಾಡಿನಲ್ಲಿ ನಡೆದ ಕೃಷ್ಣ ಜನ್ಮಾಷ್ಟಮಿಯ ಪೂರ್ವಭಾವಿ ಸಭೆ ಹಾಗೂ ಬೆಳ್ಳಿಹಬ್ಬದ ಕಮಿಟಿ ರಚನೆ – ಕಹಳೆ ನ್ಯೂಸ್

ಪುತ್ತೂರು : 25ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆಯುವ ವಿವಿಧ ಆಟೋಟ ಸ್ಪರ್ಧೆಗಳು ಹಾಗೂ ಬೆಳ್ಳಿಹಬ್ಬದ ಕಮಿಟಿ ರಚನೆಯ ಪೂರ್ವಭಾವಿ ಸಭೆಯು ಇಂದು ಬಲ್ನಾಡಿನಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಬಲ್ನಾಡು ವಿನಾಯಕ ಕ್ರೀಡಾಂಗಣದಲ್ಲಿ ನಡೆಯಲಿರುವ ಶ್ರೀಕೃಷ್ಣ ಜನ್ಮಾಷ್ಠಮಿಯ ದಿನ ನಡೆಯುವ ವಿವಿಧ ಆಟೋಟ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ಚರ್ಚಿಸಲಾಯಿತು. ಹಾಗೂ 25ನೇ ವರ್ಷದ ಬೆಳ್ಳಿಹಬ್ಬದ ಕಮಿಟಿಯನ್ನು ರಚಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

25ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಬಲಿವಾಡು ಕೂಟ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಇನ್ನು 25ನೇ ವರ್ಷದ ಬೆಳ್ಳಿಹಬ್ಬದ ಕಮಿಟಿಯ ಗೌರವಾಧ್ಯಕ್ಷರಾಗಿ ಚನಿಲ ತಿಮ್ಮಪ್ಪ ಶೆಟ್ಟಿ, ರವಿ ಕೃಷ್ಣ ಭಟ್, ಪರಮೇಶ್ವರಿ ಭಟ್,ಅಧ್ಯಕ್ಷರಾಗಿ ಪ್ರಕಾಶ್ ಕೆಲ್ಲಾಡಿ, ಕಾರ್ಯದರ್ಶಿರಾಗಿ ವೆಂಕಟ ಕೃಷ್ಣ ಭಟ್ ಪಾಲೆಚ್ಚಾರು, ಜೊತೆ ಕಾರ್ಯದರ್ಶಿಯಾಗಿ ರೂಪೇಶ್ ಬಲ್ನಾಡ್, ಉಪಾಧ್ಯಕ್ಷರಾಗಿ ಕಿರಣ್ ಕುಮಾರ್ ರೈ, ಪೂರ್ಣಿಮಾ ಚೆನ್ನಪ್ಪ ಗೌಡ, ಗೌರವ ಸಲಹೆಗಾರರಾಗಿ ಕೊರಗಪ್ಪ ಕುಲಾಲ್, ನವೀನ್ ಕರ್ಕೆರ, ಹೊನ್ನಪ್ಪ ಪದವು, ತಿಮ್ಮಪ್ಪ ಗೌಡ ಬ್ರಹ್ಮರಕೋಡಿ, ಬಾಲಕೃಷ್ಣ ನಾಯ್ಕ ಕಪ್ಪೆಕೆರೆ ಆಯ್ಕೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಬಾಬು ಪೂಜಾರಿ ಕುಕ್ಕುತ್ತಡಿ, ಅಧ್ಯಕ್ಷ ಬಾಲಸುಬ್ರಮಣ್ಯ, ಕಾರ್ಯದರ್ಶಿ ಶರತ್ ಮುದಲಾಜೆ, ಉಪಾಧ್ಯಕ್ಷ ಬಾಲಕೃಷ್ಣ ಕುಲಾಲ್, ಕೋಶಾಧಿಕಾರಿ ಅಶೋಕ್ ಕುಮಾರ್ ಪದವು, ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ)ನ ಅಧ್ಯಕ್ಷ ಗಿರೀಶ್ ಕಂಟ್ರಾನಿಮೂಲೆ, ಕಾರ್ಯದರ್ಶಿ ದೀಪಕ್ ಕೊಪ್ಪಳ, ಹಾಗೂ ಟ್ರಸ್ಟ್ ನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.