ಬಂಟ್ವಾಳ: ಕಲ್ಲಡ್ಕ ಸರಕಾರಿ ಮಾದರಿ ಹಿ.ಪ್ರಾ.ಶಾಲೆಯ ಮನವಿಗೆ ಸ್ಪಂದಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಲ್ಲಡ್ಕ ವಲಯ ಶೌರ್ಯ ವಿಪತ್ತು ತಂಡದ ಸದಸ್ಯರು- ಕಹಳೆ ನ್ಯೂಸ್
ಬಂಟ್ವಾಳ ತಾಲೂಕಿನ ಕಲ್ಲಡ್ಕ ಸರಕಾರಿ ಮಾದರಿ ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಶಾಲಾ ಆವರಣದಲ್ಲಿರುವ ದೊಡ್ಡ ಕುಡಿಯುವ ನೀರಿನ ಟ್ಯಾಂಕಿ ಹಾಗೂ ಭಾವಿಯ ಸ್ವಚ್ಛತೆ ಮಾಡಿಕೊಡುವಂತೆ ಸ್ಥಳೀಯ ಕಲ್ಲಡ್ಕ ಶೌರ್ಯ ವಿಪತ್ತು ತಂಡಕ್ಕೆ ಲಿಖಿತ ಮನವಿ ಸಲ್ಲಿಸಿದ್ದು ಮನವಿ ಸ್ವೀಕರಿಸಿದ ಶೌರ್ಯ ತಂಡದ ಸದಸ್ಯರು ಈಗಾಗಲೇ ಶಾಲೆ ಆರಂಭವಾದ ಕಾರಣ ಕೂಡಲೆ ಕಾರ್ಯಪ್ರವತರಾಗಿ ಇವತ್ತು ತಂಡದ 11 ಸದಸ್ಯರು ಶ್ರಮದಾನದ ಮೂಲಕ ಶಾಲಾ ಆವರಣದಲ್ಲಿರುವ ದೊಡ್ಡ ಟ್ಯಾಂಕಿ ಹಾಗೂ ಬಾವಿಯನ್ನು ಸ್ವಚ್ಛ ಮಾಡಿಕೊಟ್ಟರು.
ಈ ಸ್ವಚ್ಛತಾ ಕಾರ್ಯದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ ಅಧ್ಯಕ್ಷ ತುಳಸಿ, ಶೌರ್ಯ ವಿಪತ್ತು ತಂಡದ ಅಧ್ಯಕ್ಷ ಮಾಧವ ಸಾಲಿಯಾನ್ ಕುದ್ರೆಬೆಟ್ಟು, ತಂಡದ ಸಂಯೋಜಕಿ ವಿದ್ಯಾ, ಸದಸ್ಯರುಗಳಾದ ವೆಂಕಪ್ಪ, ರವಿಚಂದ್ರ,ಮೌರೀಶ್, ರಮೇಶ್, ಚಿನ್ನಾ, ಸಂತೋಷ್, ಧನಂಜಯ, ಗಣೇಶ್, ಮೊದಲಾದವರು ಭಾಗವಹಿಸಿದ್ದರು. ಕಲ್ಲಡ್ಕ ಶೌರ್ಯ ತಂಡದ ಕಾರ್ಯಕ್ಕೆ ಶಾಲಾಭಿವೃದ್ಧಿ ಸಮಿತಿ, ಮುಖ್ಯ ಶಿಕ್ಷಕ ಹಾಗೂ ಶಿಕ್ಷಕರಿಂದ, ಅಭಿನಂದನೆಯನ್ನು ವ್ಯಕ್ತಪಡಿಸಿದ್ದಾರೆ.