Wednesday, January 22, 2025
ಉಡುಪಿ

ನಿರಂತರ ಕೈಮಗ್ಗದ ನೇಯ್ಗೆ ತರಬೇತಿಗೆ ಕೈಮಗ್ಗಗಳನ್ನು ಪ್ರಾಯೋಜಿಸುವ ನಮ್ಮ ಬೇಡಿಕೆಗೆ ಸ್ಪಂದಿಸಿದ ಪದ್ಮಶಾಲಿ ಸಮುದಾಯ ಯು.ಎ.ಇ.-ಕಹಳೆ ನ್ಯೂಸ್

ಪದ್ಮಶಾಲಿ ಸಮುದಾಯ ಯು.ಎ.ಇ. ಇದರ ಅಧ್ಯಕ್ಷರಾದ ಶ್ರೀಯುತ ರಘುರಾಮ್ ಶೆಟ್ಟಿಗಾರ್ ಇವರು ಇಂದು ಕೈಮಗ್ಗ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ತಮ್ಮ ಸಂಘಟನೆ ವತಿಯಿಂದ ಕೈಮಗ್ಗ ಪ್ರಾಯೋಜಿಸುವ ಚೆಕ್ ಅನ್ನು ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಅಧ್ಯಕ್ಷರಾದ ರತ್ನಾಕರ ಇಂದ್ರಾಳಿಯವರಿಗೆ ನೇಕಾರರ ಸಮ್ಮುಖದಲ್ಲಿ ಹತ್ತಾಂತರಿಸಿದರು. ಈ ಸಂದರ್ಭದಲ್ಲಿ ನೇಕಾರ ಗುರುಗಳಾದ ಪ್ರಭುಲ ಚಂದ್ರನ್, ಹಿರಿಯ ನೇಕಾರರಾದ ದೇವರಾಯ ಶೆಟ್ಟಿಗಾರ್, ಪ್ರೇಮಾನಂದ ಶೆಟ್ಟಿಗಾರ್, ಕೇಶವ ಶೆಟ್ಟಿಗಾರ್, ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಪದಾಧಿಕಾರಿ ರಾಜಕೇಸರಿ, ಯುವ ನೇಕಾರರಾದ ಪುಷ್ಪಲತಾ ಶೆಟ್ಟಿಗಾರ್ , ವೇದಾವತಿ ಶೆಟ್ಟಿಗಾರ್, ಜ್ಯೋತಿ ಶೆಟ್ಟಿಗಾರ್, ಭಾರತಿ ಶೆಟ್ಟಿಗಾರ್, ಸುಗುಣ ಶೆಟ್ಟಿಗಾರ್, ಪ್ರತಿಮಾ ಸನಿಲ್, ಜಯಲಕ್ಷ್ಮಿ ಶೆಟ್ಟಿಗಾರ್, ಭಾನುಮತಿ ಪಿತಾಂಬರ, ಅನುಪಮಾ ದೇವಾಡಿಗ, ಶಾಂತ ದಯಾನಂದ ಶೆಟ್ಟಿಗಾರ್, ಪುಷ್ಪಾ ವೀರೇಶ್ ಶೆಟ್ಟಿಗಾರ್ ಮತ್ತು ಹೊಸ ತರಬೇತಿಯ ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಅಧ್ಯಕ್ಷರಾದ ರತ್ನಾಕರ್ ಇಂದ್ರಾಳಿ ಇವರು ನಮ್ಮ ಕುಲಕಸುಬು ಕೈ ಮಗ್ಗದ ನೇಕಾರಿಕೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಉದಾರ ಧನ ಸಹಾಯ ಮಾಡಿದ ಪದ್ಮಶಾಲಿ ಸಮುದಾಯ ಯು.ಎ.ಇ. ಯ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಮನಪೂರ್ವಕ ಕೃತಜ್ಞತೆ ಸಲ್ಲಿಸಿದರು.
ಮುಂದಿನ ದಿನಗಳಲ್ಲಿ ನೇಕಾರರಿಗೆ ಇನ್ನೂ ಹೆಚ್ಚಿನ ಸೌಕರ್ಯಗಳನ್ನು ಕಲ್ಪಿಸಿ, ಅವರು ಆರ್ಥಿಕವಾಗಿ ಸದೃಢರಾಗುವಂತೆ ಮಾಡಲು ಸಮಾಜದ ಎಲ್ಲಾ ಸಂಘ ಸಂಸ್ಥೆಗಳು ಹಾಗೂ ದಾನಿಗಳ ಸಹಾಯ ಯಾಚಿಸಿದರು.

ಜಾಹೀರಾತು

ಜಾಹೀರಾತು
ಜಾಹೀರಾತು