Wednesday, January 22, 2025
ಉಡುಪಿ

ಆತ್ರಾಡಿಯ ಹೊಟೇಲ್ ಶ್ರೀಗುರು ಮತ್ತು ಶ್ರೀನಿಧಿ ಬಾರ್ ಹಾಗೂ ರೆಸ್ಟೋರೆಂಟ್ ಮಾಲಕ ಶ್ರೀ ರಮೇಶ್ ಹೆಗ್ಡೆ ನಿಧನ –ಕಹಳೆ ನ್ಯೂಸ್

ಉಡುಪಿ: ಉಡುಪಿ ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆಯವರ ತಂದೆ, ಆತ್ರಾಡಿಯ ಹೊಟೇಲ್ ಶ್ರೀಗುರು ಮತ್ತು ಶ್ರೀನಿಧಿ ಬಾರ್ ಹಾಗೂ ರೆಸ್ಟೋರೆಂಟ್ ಮಾಲಕರಾದ ಹಿರೇಬೆಟ್ಟು “ಶ್ರೀ ರಮೇಶ್ ಹೆಗ್ಡೆ” (79) ಅವರು ಜೂ.1 ರಂದು ತಮ್ಮ ಸ್ವಗೃಹ “ಶಂಕರಾಕ್ಷಿ”ಯಲ್ಲಿ ಧೈವಾದಿನರಾಗಿದ್ದಾರೆ. ಮೃತರು ಪತ್ನಿ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಮೃತರು ಹಿರೇಬೆಟ್ಟು ಶ್ರೀ ದುರ್ಗಾದೇವಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಹಾಗೂ ಬಾಳ್ಕಟ್ಟ ಬ್ರಹ್ಮ ಬೈದರ್ಕಳ ಗರಡಿಯ ಸಮಿತಿಯಲ್ಲಿ ಪದಾಧಿಕಾರಿಯಾಗಿ ತೊಡಗಿಸಿಕೊಂಡಿದ್ದರು. ಹಲವು ಜನೋಪಯೋಗಿ ಕಾರ್ಯದ ಮೂಲಕ ಊರಿನಲ್ಲಿ ಜನ ಮನ್ನಣೆಗಳಿಸಿದ್ದರು ಹಾಗೂ ವಿವಿಧ ಸಂಘ – ಸಂಸ್ಥೆಗಳಲ್ಲಿ, ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾನುವಾರ ಹಿರೇಬೆಟ್ಟಿನ ಸ್ವಗೃಹದ ತೋಟದಲ್ಲಿ ಮೃತರ ಅಂತ್ಯ ಸಂಸ್ಕಾರವು ಧಾರ್ಮಿಕ ವಿಧಿ ವಿಧಾನದಂತೆ ನೆರವೇರಿತು‌. ಅಂತ್ಯ ಸಂಸ್ಕಾರದಲ್ಲಿ ಉಡುಪಿಯ ಖ್ಯಾತ ವಕೀಲರಾದ ಶಾಂತರಾಮ್ ಶೆಟ್ಟಿ, ಮಟ್ಟಾರ್ ರತ್ನಾಕರ್ ಹೆಗ್ಡೆ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಬಿಜೆಪಿ ಜಿ.ಪ್ರ.ಕಾರ್ಯದರ್ಶಿ ದಿನಕರ್ ಶೆಟ್ಟಿ ಹೆರ್ಗಾ, ಜಿಲ್ಲಾ ವಕ್ತಾರ ವಿಜಯ್ ಕುಮಾರ್ ಸೇರಿದಂತೆ ಸಾವಿರಾರು ಜನರು ಭಾಗಿಯಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು