Saturday, September 21, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಪದವೀಧರ ಕ್ಷೇತ್ರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ : ಬಂಟ್ವಾಳ ಆಡಳಿತ ಸೌಧದ ಕಚೇರಿಯಲ್ಲಿ ನಡೆದ ಮತದಾನ–ಕಹಳೆ ನ್ಯೂಸ್

ಬಂಟ್ವಾಳ: ಪದವೀಧರ ಕ್ಷೇತ್ರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಇಂದು ಬಂಟ್ವಾಳ ತಾಲೂಕಿನ ಆಡಳಿತ ಸೌಧದ ಕಚೇರಿಯಲ್ಲಿ ಮತದಾನ ನಡೆಯಿತು.

ಮತದಾನ ಅತ್ಯಂತ ಶಾಂತ ರೀತಿಯಲ್ಲಿ ನಡೆದಿದೆಯಾದರೂ, ಆಡಳಿತ ಸೌಧದ ಕಚೇರಿಯಲ್ಲಿ ಸಾರ್ವಜನಿಕರ ಸರಕಾರಿ ಕೆಲಸ ಕಾರ್ಯಗಳಿಗೆ ಸಾಕಷ್ಟು ತೊಂದರೆಯಾಗಿರುವುದು ಕಂಡು ಬಂತು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಶೇಷವಾಗಿ ಆಡಳಿತ ಸೌಧದ ಕಚೇರಿಯೊಳಗೆ ಇರುವ ಸಬ್ ರಿಜಿಸ್ಟ್ರಾರ್ ಕಚೇರಿಗೆ ಜಾಗದ ನೊಂದಾವಣೆಗಾಗಿ ಬರುವ ಸಾರ್ವಜನಿಕರು ತೊಂದರೆಯಲ್ಲಿ ಸಿಲುಕಿಹಾಕಿಕೊಂಡ ಘಟನೆ ನಡೆಯಿತು.

ಜಾಹೀರಾತು

ಓನ್ ಲೈನ್ ಸ್ಲಾಟ್ ಮೂಲಕ ಜಾಗದ ನೊಂದಾವಣೆ ದಿನ ನಿಗದಿಯಾಗುತ್ತದೆ. ಅದೇ ರೀತಿ ಇಂದು ಅನೇಕ ಮಂದಿಯ ಜಾಗದ ನೊಂದಾವಣೆಗೆ ದಿನ ಆನ್ ಲೈನ್ ಮೂಲಕ ನೀಡಲಾಗಿತ್ತು. ಅದೇ ರೀತಿ ನೊಂದಾವಣೆಗಾಗಿ ದೂರದ ಊರಿನಿಂದ ಇಂದು ಸಮಯಕ್ಕೆ ಸರಿಯಾಗಿ ಕಚೇರಿಗೆಂದು ಬಂದು ನೋಡಿದಾಗ ಆಡಳಿತ ಸೌಧದ ಕಚೇರಿಯ ಗೇಟ್ ಮುಚ್ಚಲಾಗಿತ್ತು, ಮತ್ತು ಪೋಲೀಸರು ಒಳಗೆ ಹೋಗದಂತೆ ತಡೆದಿದ್ದರು.

ಆಡಳಿತ ಸೌಧದ ಕಚೇರಿಯೊಳಗೆ ಮತದಾನ ನಡೆಯುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅದೇಶದಂತೆ ಇಲ್ಲಿನ ತಹಶಿಲ್ದಾರ್ ಅರ್ಚನಾ ಭಟ್ ಪೋಲೀಸರಿಗೆ ಮತದಾರರಲ್ಲದೆ ಯಾರೂ ಕೂಡ ಒಳಗಡೆ ಬಿಡಬೇಡಿ ಎಂದು ಸೂಚನೆ ನೀಡಿದ್ದರು. ಅವರ ಸೂಚನೆ ಪಾಲಿಸಿದ ಪೋಲೀಸರು ಯಾರನ್ನು ಕೂಡ ಒಳಗಡೆಗೆ ಬಿಡಲಿಲ್ಲ.

ಆದರೆ ಜಾಗದ ನೊಂದಾವಣೆಗಾಗಿ ಬಂದ ಸಾರ್ವಜನಿಕರಿಗೆ ನೊಂದಾವಣೆ ನಡೆಯದಿದ್ದರೆ ಮತ್ತೆ ನೊಂದಾವಣೆ ಕಷ್ಟಸಾಧ್ಯವಾಗುತ್ತದೆ. ಇದೇ ಚಿಂತೆಯಲ್ಲಿ, ಕಚೇರಿಯ ಹೊರಗಡೆ ಬಿಸಿಲಿನಲ್ಲಿ ನಿಂತುಕೊಂಡು ಕಾಯುತ್ತಿದ್ದರು. ಆನ್ ಲೈನ್ ಸ್ಲಾಟ್ ಬಗ್ಗೆ ಮತ್ತೆ ಮನವರಿಕೆಯಾಗಿ ಅಧಿಕಾರಿಗಳು ಒಬ್ಬೊಬ್ಬರನ್ನೇ ಒಳಗೆ ಕರೆದುಕೊಂಡು ಹೋಗಿ ರಿಜಿಸ್ಟ್ರೇಶನ್ ಮಾಡುವ ವ್ಯವಸ್ಥೆ ಮಾಡಲಾಯಿತು.

ಚುನಾವಣೆಯ ದಿನ‌ದ ಬಗ್ಗೆ ಪೂರ್ವ ಮಾಹಿತಿ ಇದ್ದರೂ ಕೂಡ ಸಬ್ ರಿಜಿಸ್ಟ್ರಾರ್ ಕಚೇರಿಯವರು ನೊಂದಾವಣೆಯ ದಿನವನ್ನು ಯಾಕೆ ತಡೆಹಿಡಿಯುವ ಕೆಲಸ ಮಾಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆಯ ದಿನ ಮತ್ತು ಮತದಾನ ನಡೆಯವ ಸ್ಥಳದ ಬಗ್ಗೆ ಇಲಾಖೆ ಮುಂಚಿತವಾಗಿ ತಿಳಿಸಿದೆಯಾದರೂ ಮತ್ತೆ ಈ ದಿನ‌ಸಾರ್ವಜನಿಕರಿಗೆ ಯಾಕೆ ಮಾಹಿತಿ ನೀಡಿಲ್ಲ ಎಂಬ ಬಗ್ಗೆ ಯೂ ಚರ್ಚೆ ನಡೆಯಿತು.

ಗೇಟ್ ತೆರೆಯುತ್ತೇವೆ: ತುಂಗಪ್ಪ‌ಬಂಗೇರ ಆಕ್ರೋಶ

ಸಾರ್ವಜನಿಕರಿಗೆ ಅತೀ ಅವಶ್ಯಕತೆ ಇರುವ ಆಡಳಿತ ಸೌಧದ ಕಚೇರಿಯಲ್ಲಿ ಚುನಾವಣೆ ನಡೆಸಿರುವುದು ಅತ್ಯಂತ ಸಂಕಷ್ಟಕ್ಕೆ ಕಾರಣವಾಗಿದೆ. ಜನರು ಒಳಗಡೆ ಹೋಗದಂತೆ ಪೋಲೀಸರು ತಡೆಯುವುದು ಸರಿಯಲ್ಲ, ಸಾರ್ವಜನಿಕ ‌ಕೆಲಸಗಳಿಗೆ ಒಳಗಡೆ ಹೋಗಲು ಅವಕಾಶ ನೀಡಿ ,ಇಲ್ಲದಿದ್ದರೆ ಗೇಟ್ ತೆರೆದು ಜನರನ್ನು ಒಳಗಡೆ ಕಳುಹಿಸುವುದಾಗಿ ಮಾಜಿ ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ ಪೋಲೀಸರಲ್ಲಿ ತಿಳಿಸಿದರು