ಪುತ್ತೂರು : ಪೊದೆಯಲ್ಲಿ ಕಾರು ನಿಲ್ಲಿಸಿ ಯುವಕ ಹಾಗೂ ಯುವತಿ ಲವ್ವಿ-ಡವ್ವಿ : ಪ್ರಶ್ನಿಸಲು ತೆರಳಿದ ವೇಳೆ ಕಾರು ಸಮೇತ ಪರಾರಿಯಾದ ಜೋಡಿ -ಕಹಳೆ ನ್ಯೂಸ್
ಪುತ್ತೂರು : ಪೊದೆಯಲ್ಲಿ ಕಾರು ನಿಲ್ಲಿಸಿ ಯುವಕ ಹಾಗೂ ಯುವತಿ ಲವ್ವಿ-ಡವ್ವಿ ನಡೆಸುತ್ತಿದ್ದ ಘಟನೆ ಸಾಮೆತ್ತಡ್ಕ ಸಮೀಪ ನಡೆದ ಬಗ್ಗೆ ತಿಳಿದು ಬಂದಿದೆ.
ಸಾಮೆತ್ತಡ್ಕ ಸಮೀಪ ಯುವಕ ಹಾಗೂ ಯುವತಿ ಪೊದೆಗಳ ಮಧ್ಯೆ ಕಾರು ನಿಲ್ಲಿಸಿದ್ದರೆನ್ನಲಾಗಿದೆ.
ಪೊದೆ ಮಧ್ಯೆ ಕಾರು ನಿಲ್ಲಿಸಿರುವುದನ್ನು ಪ್ರಶ್ನಿಸಲು ತೆರಳಿದ ವೇಳೆ ಕಾರು ಸಮೇತ ಪರಾರಿಯಾಗಿದ್ದು, ಪರಾರಿಯಾಗುವ ವೇಳೆ ಓರ್ವ ಯುವಕನ ವಾಹನ ಸಹಿತ, ಖಾಸಗಿ ಬಸ್ ಹಾಗೂ ಇತರ ಕೆಲ ವಾಹನಗಳಿಗೆ ಕಾರು ಡಿಕ್ಕಿಯಾಗಿದೆ ಎನ್ನಲಾಗುತ್ತಿದೆ.
ಹಿಟ್ ಅಂಡ್ ರನ್ ಬಗ್ಗೆ ಪುತ್ತೂರು ಸಂಚಾರಿ ಠಾಣೆಯಲ್ಲಿ ಮೌಖಿಕ ದೂರು ನೀಡಲಾಗಿದ್ದು, ಘಟನೆ ಬಗ್ಗೆ ಇತರ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.