ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಇಂದು ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡ ನಾಲ್ಕನೇ ಏಕದಿನ ಪಂದ್ಯವನ್ನಾಡಲಿದೆ. ವೆಸ್ಟ್ ಇಂಡೀಸ್ ವಿರುದ್ದದ 3 ನೇ ಪಂದ್ಯದಲ್ಲಿ ಭಾರತ ತಂಡ ಅನಿರೀಕ್ಷಿತ ಆಘಾತ ಎದುರಿಸಿತು.
ಇದರಿಂದ 1-1 ರಿಂದ ಸಮಬಲದಲ್ಲಿರುವ ಭಾರತ, ಬ್ಯಾಟಿಂಗ್ ವಿಭಾಗದ ಸದೃಢತೆಯೊಂದಿಗೆ 5 ಪಂದ್ಯಗಳ ಸರಣಿಯನ್ನು ವಶಪಡಿಸಿಕೊಳ್ಳುವ ಆಸೆಯನ್ನು ಜೀವಂತವಾಗಿಸಿಕೊಳ್ಳಲು ಗೆಲ್ಲಲೇಬೇಕಾಗಿದೆ.
ವಿಂಡೀಸ್ ತಂಡ ಈಗ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ಸದೃಢಗೊಂಡಿದೆ. ಇನ್ನೂ ಧೋನಿ ಮತ್ತು 4 ಕ್ರಮಾಂಕಕ್ಕೆ ಭರವಸೆ ಮೂಡಿಸಿದರೂ ಸತತ 2 ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿರುವ ಅಂಟಿ ರಾಹುಡು ಈ ಪಂದ್ಯದಲ್ಲಾದರೂ ಲಯಕ್ಕೆ ಮರಳದಿದ್ದರೆ, ಆಯ್ಕೆ ಸಮಿತಿ ವಿಶ್ವಕಪ್ ಟೀಮ್ ಆಯ್ಕೆ ಗೊಂದಲ ಎದುರಾಗಲಿದೆ.