Bangalore South Results : ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿಗೆ 71 ಸಾವಿರ ಮತಗಳ ಮುನ್ನಡೆ – ಕಹಳೆ ನ್ಯೂಸ್
ಈ ಬಾರಿ ಅತ್ಯಂತ ರೋಚಕತೆ ಹೆಚ್ಚಿಸಿರುವ ಕ್ಷೇತ್ರಗಳಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಸಹ ಒಂದು. ಈ ಕ್ಷೇತ್ರದಲ್ಲಿ ಯುವಕರ ನಡುವಿನ ಫೈಟ್ ಎಲ್ಲರ ಚಿತ್ತ ಕದ್ದಿದೆ. ಅಲ್ಲದೆ ಎರಡು ರಾಜಕೀಯ ಕುಟುಂಬಗಳ ನಡುವಿನ ಹೊರಾಟದಲ್ಲಿ ಯಾರಿಗೆ ಮತದಾರ ಪ್ರಭು ಜೈ ಎಂದಿದ್ದಾರೆ ಎಂಬುದು ಇನ್ನೇನು ಕೆಲವೇ ಕ್ಷಣಗಳಲ್ಲಿ ತಿಳಿಯಲಿದೆ.
ಈ ಕ್ಷೇತ್ರದಲ್ಲಿ ಏಪ್ರಿಲ್ 26 ರಂದು ಮತದಾನವಾಗಿದೆ. ಈ ಕ್ಷೇತ್ರವನ್ನು ಬಿಜೆಪಿ ಸತತವಾಗಿ ಗೆಲ್ಲುತ್ತಲೇ ಬರುತ್ತಿದೆ. ಸದ್ಯ ಹಾಲಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ಬಿಜೆಪಿ ಮತ್ತೊಮ್ಮೆ ಅವಕಾಶ ನೀಡಿದೆ. ಇನ್ನು ವಿಧಾಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದ ಸೌಮ್ಯಾ ರೆಡ್ಡಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಇಬ್ಬರ ನಡುವಿನ ಫೈಟ್‌ನಲ್ಲಿ ಗೆಲುವು ಯಾರಿಗೆ ಎಂಬುದು ಕುತೂಹಲ ಮೂಡಿಸಿದೆ.
ಈ ಕ್ಷೇತ್ರದಲ್ಲಿ 1989ರಲ್ಲಿ ಕೊನೆಯ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್.ಗುಂಡು ರಾವ್ ಜಯ ದಾಖಲಿಸಿದ್ದರು. ಇದಾದ ಬಳಿಕ ನಡೆದ ಎಂಟು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡಿದೆ. ಇದೇ ಕ್ಷೇತ್ರದಿಂದ ಅನಂತ್ ಕುಮಾರ್ ಆರು ಬಾರಿ ಲೋಕಸಭೆ ಪ್ರವೇಶಿಸಿದ್ದಾರೆ.
– ಬೆಂಗಳೂರಿನ ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರಿಗೆ 71716
– ಬೆಂಗಳೂರು ಬಿಜೆಪಿ 42,683, ಕಾಂಗ್ರೆಸ್ 20,542 ಮತಗಳು. ತೇಜಸ್ವಿ ಸೂರ್ಯ ಅವರಿಗೆ 22,141 ಮುನ್ನಡೆ
– ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ
-ಅಂಚೆ ಮತದಾನ ಏಣಿಕೆ ಆರಂಭ
ಎರಡನೇ ಬಾರಿ ಲೋಕಸಭಾ ಪ್ರವೇಶಿಸುವ ಕನಸಿನಲ್ಲಿ ತೇಜಸ್ವಿ ಸೂರ್ಯ
35 ವರ್ಷಗಳಿಂದ ಕಾಣದ ಗೆಲುವನ್ನು ಹುಡುಕುತ್ತಿರುವ ಸೌಮ್ಯಾ ರೆಡ್ಡಿ