Recent Posts

Sunday, January 19, 2025
ಸುದ್ದಿ

ವಿಜಯ್ ಪತ್ನಿ ನಾಗರತ್ನ ವಿರುದ್ಧ ಎರಡನೇ ಪತ್ನಿಯಿಂದ ದೂರು ದಾಖಲು – ಕಹಳೆ ನ್ಯೂಸ್

ಬೆಂಗಳೂರು: ದುನಿಯಾ ವಿಜಯ್ ಪತ್ನಿಯರು ದಿನಕ್ಕೊಂದರಂತೆ ಜಗಳ ಮಾಡುತ್ತಿದ್ದು ಈಗ ಮೊದಲ ಪತ್ನಿ ನಾಗರತ್ನ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಕೆಟ್ಟ ಪದಗಳಿಂದ ನಿಂದಿಸಿದ್ದಾರೆ ಎಂದು ವಿಜಯ್ ಎರಡನೇ ಪತ್ನಿ ಕೀರ್ತಿ ಗೌಡ, ನಾಗರತ್ನ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದುನಿಯಾ ವಿಜಿ ಜೈಲಿನಲ್ಲಿದ್ದಾಗ ನಾಗರತ್ನ ಅವರು ಕೀರ್ತಿಗೌಡರ ಮನೆಗೆ ಬಂದು ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ ಎಂಬುದು ಕೀರ್ತಿಗೌಡರ ಆರೋಪ. ಹಾಗೇ ಅತ್ತೆ – ಮಾವರ ಮೇಲೂ ಹಲ್ಲೆ ಆಗಿದೆ. ಅತ್ತೆ ಈ ಘಟನೆಯಿಂದ ಗಾಬರಿಯಾಗಿದ್ದಾರೆ ಎಂದು ಕೀರ್ತಿಗೌಡ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ನಾಗರತ್ನ, ತಮ್ಮ ಸಹೋದರನ ಜೊತೆ ಬಂದು ಕೊಲೆ ಬೆದರಿಕೆ ಕೂಡ ಹಾಕಿದ್ದಾರೆ ಎಂದು ಕೀರ್ತಿಗೌಡ ದೂರಿನಲ್ಲಿ ತಿಳಿಸಿದ್ದಾರೆ. ದುನಿಯಾ ವಿಜಿ ಮಗಳು ಮೋನಿಕಾ ಕೂಡ ತಮಗೆ ಕೆಟ್ಟ ಪದಗಳಿಂದ ನಿಂದಿಸಿದ್ದಾಳೆ ಎಂದು ಹೇಳಿದ್ದಾರೆ. ಸುಮ್ಮನೇ ದೂರು ದಾಖಲಿಸಿ ವಿಜಯ್ ನೆಮ್ಮದಿ ಹಾಳು ಮಾಡುತ್ತಿದ್ದಾರೆ ಎಂದು ನಾಗರತ್ನ ವಿರುದ್ಧ ಕೀರ್ತಿಗೌಡ ಕಿಡಿಕಾರಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು