Recent Posts

Sunday, January 19, 2025
ಸುದ್ದಿ

ಆಪರೇಷನ್‌ಗೆ ಒಳಗಾಗಿ ಕರ್ನಾಟಕದಲ್ಲಿ ಕಮಲ ಕೋಮಾದಲ್ಲಿದೆ: ಸಿದ್ದರಾಮಯ್ಯ ಟ್ವೀಟ್ – ಕಹಳೆ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರಕ್ಕೆ ಮತ್ತು ಬಿಜೆಪಿ ನಡುವಣ ಆಗಾಗ ಚರ್ಚೆಯಾಗ್ತಾ ಇದ್ದು ಒಂದರ ಮೇಲೆ ಒಂದು ವಾಕ್ ಅಸ್ತ್ರಗಳನ್ನು ಪ್ರಯೋಗಿಸ್ತಾ ಇದ್ದಾರೆ.

ಈಗಾಗಲೇ ಹಲವಾರು ಬಾರಿ ಆಪರೇಷನ್‌ಗೆ ಒಳಗಾಗಿ ಕರ್ನಾಟಕದಲ್ಲಿ ಕಮಲ ಕೋಮಾದಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಟ್ವಿಟ್ಟರ್‌ನಲ್ಲಿ ಲೇವಡಿ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತೊಮ್ಮೆ ಸರಕಾರ ಬೀಳುತ್ತೆ ಎಂಬ ಹೇಳಿಕೆ ನೀಡಿದ್ದಾರೆ. ಈಗಾಗಲೇ ಹಲವು ಬಾರಿ ಆಪರೇಷನ್‌ಗೆ ಒಳಗಾಗಿ ಕರ್ನಾಟಕದಲ್ಲಿ ಕಮಲ ಕೋಮಾದಲ್ಲಿದೆ. ಮತ್ತೆ ಆಪರೇಷನ್ ಕಮಲಕ್ಕೆ ಕೈಹಾಕುವ ಕೆಟ್ಟ ಸಾಹಸ ಮಾಡಬೇಡಿ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಪಕ್ಷವಾಗಿ ಸದಾ ಬಿಜೆಪಿ ನಮ್ಮ ಮುಂದಿರಬೇಕು. ಇದೇ ಪ್ರಜಾಪ್ರಭುತ್ವದ ಸೌಂದರ್ಯ ಎಂದು ಸಿದ್ದರಾಮಯ್ಯ ಟ್ವಿಟ್ ಅಸ್ತ್ರ ಪ್ರಯೋಗಿಸಿದ್ದಾರೆ.