Sunday, January 19, 2025
ಕ್ರೈಮ್ದಕ್ಷಿಣ ಕನ್ನಡಮಂಗಳೂರುಸುದ್ದಿ

ಕಂಕನಾಡಿ ಸಾರ್ವಜನಿಕ ರಸ್ತೆಯಲ್ಲಿ ನಮಾಜ್ ಪ್ರಕರಣ ; ಸೋ ಮೋಟೋ ಪ್ರಕರಣ ಬಿ ‘ ರಿಪೋರ್ಟ್ ; ಘಟನೆ ಖಂಡಿಸಿದ್ದ ಶರಣ್ ಪಂಪ್ವೆಲ್ ವಿರುದ್ಧ ದಾಖಲಾಗಿದ್ದ FIR ಗೆ ಹೈಕೋರ್ಟ್ ತಡೆ – ಕಹಳೆ ನ್ಯೂಸ್

ಮಂಗಳೂರು : ಕಂಕನಾಡಿ ಸಾರ್ವಜನಿಕ ರಸ್ತೆಯಲ್ಲಿ ಶುಕ್ರವಾರ ನಮಾಜ್ ಮಾಡಿ ಸಾರ್ವಜನಿಕರಿಗೆ ಸಮಸ್ಯೆ ಉಂಟುಮಾಡಿದ್ದರ ವಿರುದ್ಧ ಸೋ ಮೋಟೋ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ FIR ದಾಖಸಿದ ಅಧಿಕಾರಿಯನ್ನು ಕಡ್ಡಾಯ ರಜೆ ಮೇಲೆ ಮನೆಗೆ ಕಳುಹಿಸಿ, ಕೆಲವೇ ಗಂಟೆಗಳಲ್ಲಿ ಬಿ ‘ ರಿಪೋರ್ಟ್ ದಾಖಸಿತ್ತು. ಈ ಘಟನೆ ಖಂಡಿಸಿದ್ದ ಶರಣ್ ಪಂಪ್ವೆಲ್ ವಿರುದ್ಧ FIR ದಾಖಲುಗೊಂಡಿತ್ತು.

ಇದರ ವಿರುದ್ಧ ಹೈ ಕೋರ್ಟಿನಲ್ಲಿ ಶರಣ್ ಪಂಪ್ವೆಲ್ ಅರ್ಜಿಸಲ್ಲಿಸಿದ್ದು, ಶರಣ್ ಪರ ಖ್ಯಾತ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ಮಂಡಿಸಿದ ವಾದವನ್ನು ಆಲಿಸಿದ ನ್ಯಾಯಮೂರ್ತಿ ನಾಗಪ್ರಸನ್ನರ ಏಕಸದಸ್ಯ ಪೀಠ ಪೋಲಿಸರನ್ನು , ಸರಕಾರವನ್ನು ತಾರಟೆಗೆ ತೆಗೆದುಕೊಂಡು ತಡೆಯಾಜ್ಞೆ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು