Thursday, November 14, 2024
ಕ್ರೈಮ್ದಕ್ಷಿಣ ಕನ್ನಡಬೆಳ್ತಂಗಡಿರಾಜಕೀಯರಾಜ್ಯಸುದ್ದಿ

ಕಾಂಗ್ರೆಸ್ ನಿಂದ ಬೆಳ್ತಂಗಡಿಯಲ್ಲಿ ದ್ವೇಷದ ರಾಜಕಾರಣ ; ಹಿಂದುತ್ವದ ಆಧಾರದಲ್ಲಿ ಬೆಳ್ತೆಯುತ್ತಿರುವ ಬಿಜೆಪಿಯ ಗೆಲುವು, ಯುವ ನಾಯಕತ್ವವನ್ನು ಹತ್ತಿಕ್ಕಲು ಕೊಲೆ ಯತ್ನ ; ತಲ್ವಾರ್ ದಾಳಿ ಘಟನೆ ಶಾಸಕ ಹರೀಶ್ ಪೂಂಜ ಆಕ್ರೋಶ – ಕಹಳೆ ನ್ಯೂಸ್

ಬೆಳ್ತಂಗಡಿ: ಕಾಂಗ್ರೆಸ್ ಬೆಳ್ತಂಗಡಿಯಲ್ಲಿ ದ್ವೇಷದ ರಾಜಕಾರಣ ನಡೆಸುತ್ತದೆ. ಹಿಂದುತ್ವದ ಆಧಾರದಲ್ಲಿ ಬೆಳ್ತೆಯುತ್ತಿರುವ ಬಿಜೆಪಿಯ ಗೆಲುವು ಸಹಿಸದೆ, ಯುವ ನಾಯಕತ್ವವನ್ನು ಹತ್ತಿಕ್ಕಲು ಕೊಲೆ ಯತ್ನ ನಡೆಸಿದೆ. ತಲ್ವಾರ್ ದಾಳಿ ಘಟನೆ ಶಾಸಕ ಹರೀಶ್ ಪೂಂಜ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯುವ ಉದ್ಯಮಿ, ತಾಲೂಕು ಎಸ್.ಟಿ. ಮೋರ್ಚಾ ಅಧ್ಯಕ್ಷ ರಾಜೇಶ್ ನಿಡ್ಡಾಜೆ ಮೇಲೆ ಕಾಯರ್ತಡ್ಕದಲ್ಲಿ ಜೂ.4ರಂದು ಸಂಜೆ ತಲವಾರಿನಿಂದ ದಾಳಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆಂಜ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಕುಶಾಲಪ್ಪ ಗೌಡ ಕಜೆ ದಾಳಿ ನಡೆಸಿದವರು ಎಂದು ಆರೋಪಿಸಲಾಗಿದೆ. ಸಂಜೆ ತನ್ನ ಅಂಗಡಿ ಮುಚ್ಚಿ ಮನೆಗೆ ಹೊರಟಿದ್ದ ರಾಜೇಶ್ ಮೇಲೆ‌ ದಾಳಿ‌ ನಡೆಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಕ್ಷಣ ಅವರನ್ನು ಉಜಿರೆಯ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ಧಾರೆ.

ಈ ಘಟನೆಗೆ ಖಂಡನೆ ವ್ಯಕ್ತಪಡಿಸಿದ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ. ಕಾಂಗ್ರೆಸ್ ದ್ವೇಷದ ರಾಜಕಾರಣ ನಡೆಸುತ್ತಿದ್ದು, ಟಾರ್ಗೆಟ್ ಮಾಡಿ ಯುವ ನಾಯಕರ ಮೇಲೆ ಕೊಲೆ ಯತ್ನ ಮಾಡಿದೆ. ಪೋಲೀಸ್ ಇಲಾಖೆ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿದ್ದಾರೆ.