Recent Posts

Sunday, January 19, 2025
ದಕ್ಷಿಣ ಕನ್ನಡಸುದ್ದಿ

ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿ ದ್ವಿತೀಯ ದರ್ಜೆಯ ಗುಮಾಸ್ತರಾಗಿ ಸೇವೆ ಸಲ್ಲಿಸಿದ ಶ್ರೀಯುತ ವಿಜಯ ಶೇರಿ ಗಾರ ಇವರಿಗೆ ಬೀಳ್ಕೊಡುವ ಸಮಾರಂಭ-ಕಹಳೆ ನ್ಯೂಸ್

ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿ ಸುಮಾರು 39 ವರ್ಷಗಳ ಸುದೀರ್ಘ ಕಾಲ ದ್ವಿತೀಯ ದರ್ಜೆಯ ಗುಮಾಸ್ತರಾಗಿ ಸೇವೆ ಸಲ್ಲಿಸಿದ ಸರಳ ಸಜ್ಜನಿಕೆಯ ವ್ಯಕ್ತಿತ್ವವುಳ್ಳ ಶ್ರೀಯುತ ವಿಜಯ ಶೇರಿ ಗಾರ ಇವರು ಸೇವೆಯಿಂದ ನಿವೃತ್ತಿ ಹೊಂದಿದರು.

ಈ ಸಂದರ್ಭದಲ್ಲಿ ವಿದ್ಯಾವರ್ಧಕ ಶಾಲೆಯ ಆಡಳಿತ ಮಂಡಳಿ, ಹಳೆ ವಿದ್ಯಾರ್ಥಿ ಸಂಘ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ,ವಿದ್ಯಾವರ್ಧಕ ಪ್ರಾಥಮಿಕ ಶಾಲೆಯಿಂದ ಜಂಟಿಯಾಗಿ ಬೀಳ್ಕೊಡುವ ಸಮಾರಂಭವನ್ನು ಏರ್ಪಡಿಸಲಾಯಿತು. ವಿಜಯ ಸೇರಿದಾರ ದಂಪತಿಗಳನ್ನು ಶಾಲು ಹೊಧಿಸಿ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಸಂಚಾಲಕರಾದ ಶ್ರೀಯುತ ಪಿ .ರಾಜೇಶ್ ರಾವ್ ವಹಿಸಿದ್ದರು. ಕಾರ್ಯದರ್ಶಿ ಪಿ. ಸುಬ್ಬ ರಾವ್ ನಿವೃತ್ತರ ಗುಣಗಾನವನ್ನು ಮಾಡಿದರು.
ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಭೋಜರಾಜಶೆಟ್ಟಿ, ಸುರೇಶ್ ರಾವ್ ,ರಾಧಾಕೃಷ್ಣ ರಾವ್, ರಾಜೇಶ್ ಶೆಟ್ಟಿ ,ಗೋಪಾಲಕೃಷ್ಣರಾವ್, ಪ್ರೌಢಶಾಲಾ ನಿವೃತ್ತ ಶಿಕ್ಷಕಿ ಶಕುಂತಲಾ ಮತ್ತು ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ನಳಿನಿ ಶೆಟ್ಟಿ ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿಗಳಾದ ಶ್ರೀ ರಾಜೇಶ್ ಶೆಟ್ಟಿ ಸಹನಾ ದೇವಾಡಿಗ, ರಾಜೇಶ್ ಆಚಾರ್ಯ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರೌಢಶಾಲಾ ಪ್ರಭಾರ ಮುಖ್ಯ ಶಿಕ್ಷಕ ಶ್ರೀಯುತ ಫ್ರಾನ್ಸಿಸ್ ಮಿನೇಜಸ್ ವಿಜಯ ಸೇರಿಗಾರರ ಸೇವೆಯನ್ನು ನೆನೆಸಿಕೊಂಡರು
ಶಿಕ್ಷಕಿ ಶ್ರೀಮತಿ ಜ್ಯೋತಿ ನಿವೃತ್ತರ ಸನ್ಮಾನ ಪತ್ರವನ್ನು ವಾಚಿಸಿದರು . ಶಿಕ್ಷಕಿ ಶರ್ಮಿಳಾ ಕಾರ್ಯಕ್ರಮ ನಿರೂಪಿಸಿ,ಹಿರಿಯ ಶಿಕ್ಷಕಿ ಶ್ರೀಮತಿ ಕಲ್ಯಾಣಿ ಯವರು ಧನ್ಯವಾದ ಸಮರ್ಪಣೆಯನ್ನು ಮಾಡಿದರು.