Recent Posts

Monday, January 20, 2025
ಕಾಪುದಕ್ಷಿಣ ಕನ್ನಡಸುದ್ದಿ

“ಕಾಪು ತಾಲ್ಲೂಕು ಕಚೇರಿಯಲ್ಲಿ ಪರಿಸರ ದಿನ ಆಚರಣೆ ಪರಿಸರವೇ ನಮ್ಮ ಉಸಿರು; ಗಿಡಮರಗಳೇ ನೀವಿದ್ದರೆ ಮಾತ್ರ ನಾವು -ತಹಶಿಲ್ದಾರ್ ಪ್ರತಿಭಾ ಆರ್.-ಕಹಳೆ ನ್ಯೂಸ್

ಕಾಪು :ಈ ದಿನ ತಾಲ್ಲೂಕು ಕಚೇರಿಯಲ್ಲಿ ಗಿಡಗಳನ್ನು ನೆಡುವುದರ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತು.ತಹಶಿಲ್ದಾರ್ ಪ್ರತಿಭಾ ಆರ್ ಮತ್ತು ಪುರಸಭೆ ಮುಖ್ಯ ಅಧಿಕಾರಿ ನಾಗರಾಜ್ ರವರು ಉಪಸ್ಥಿತರಿದ್ದು ಸ್ವತಃ ಗಿಡ ನೆಟ್ಟು ಪರಿಸರ ದಿನಾಚರಣೆಗೆ ಚಾಲನೆ ನೀಡಿದರು.

ತಹಶಿಲ್ದಾರ್ ಕಚೇರಿಯ ಉಪ ತಹಶಿಲ್ದಾರ್ ಗಳಾದ ರವಿಕಿರಣ್, ದೇವಕಿ, ಅಶೋಕ್ ಕೋಟೆಕಾರ್ ಹಾಗೂ ಇತರ ಸಿಬ್ಬಂದಿಗಳು ಹಾಜರಿದ್ದರು.ತಹಶಿಲ್ದಾರ್ ಕಚೇರಿಯ ಆವರಣದಲ್ಲಿ ಉದ್ಯಾನವನ ನಿರ್ಮಿಸಿ ಸೌಂದರ್ಯೀಕರಣಗೊಳಿಸಲು ಪ್ರಯತ್ನಿಸಲಾಗುವುದು ಎಂದು ತಹಶಿಲ್ದಾರ್ ಪ್ರತಿಭಾ ಆರ್ ತಿಳಿಸಿದರು. ಅದಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಮ್ಮ ನಡೆ ಪರಿಸರದ ಕಡೆಗೆ ಈ ವರ್ಷದ ಪರಿಸರ ದಿನದ “ಧೈಯ ವಾಕ್ಯ “
ಭೂಮರುಸ್ಥಾಪನೆ, ಮರುಭೂಮೀಕರಣ ವನ್ನು ನಿಲ್ಲಿಸುವುದು ಮತ್ತು ಬರ ನಿರೋಧಕತೆಯನ್ನು ನಿರ್ಮಿಸುವುದು” ಎಂಬುದಾಗಿದ್ದು”ನಾವಿಲ್ಲದಿದ್ದರೂ ಗಿಡ-ಮರಗಳು ಬದುಕುತ್ತವೆ ಆದರೆ ಗಿಡ-ಮರಗಳು ಇಲ್ಲದಿದ್ದರೆ ನಾವು ಬದುಕುವುದಕ್ಕೆ ಸಾಧ್ಯವೇ ಇಲ್ಲ” ಆದ್ದರಿಂದ ಇಂದು ನಾವೆಲ್ಲರೂ ಸೇರಿ ಪರಿಸರವನ್ನು ಪ್ರೀತಿಸಬೇಕು, ಆರಾಧಿಸಬೇಕು,ಮತ್ತು ಅದನ್ನು ರಕ್ಷಿಸ ಬೇಕಾದ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು ಅದಕ್ಕಾಗಿ ಪರಿಸರ ದಿನಾಚರಣೆಯ ದಿನ ಮಾತ್ರ ಸಸಿ ಗಳನ್ನು ನೆಟ್ಟು ನಾನು ಪರಿಸರ ಪ್ರೇಮಿ ಎಂದು ಬಿಂಬಿಸಿ ಕೊಳ್ಳುವುದು ಬೇಡ ಪ್ರತಿ ವರ್ಷ,ಪ್ರತಿ ದಿನ ಪ್ರತಿ ಕ್ಷಣ ಗಿಡ ಮರಗಳನ್ನು ಪ್ರೀತಿಸಿ,ಆರಾಧಿಸಿ ರಕ್ಷಿಸಿದಾಗ ಮಾತ್ರ ನಾವು ನಿಜವಾದ ಪರಿಸರ ಪ್ರೇಮಿಗಳು ಎಂದು ಪ್ರತಿಭಾ ಆರ್ ಕರೆ ನೀಡಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು