Recent Posts

Sunday, January 19, 2025
ಸಿನಿಮಾಸುದ್ದಿ

ರಜನೀಕಾಂತ್ ಮುಖ್ಯ ಭೂಮಿಕೆಯ 2.0 ಚಿತ್ರ ನವೆಂಬರ್ 29 ರಂದು ತೆರೆಗೆ – ಕಹಳೆ ನ್ಯೂಸ್

ಬೆಂಗಳೂರು: ಬಹು ನಿರೀಕ್ಷಿತ ರಜನೀಕಾಂತ್ ಮುಖ್ಯ ಭೂಮಿಕೆಯ 2.0 ಚಿತ್ರ ತೆರೆ ಮೇಲೆ ಅಪ್ಪಳಿಸುವ ದಿನಾಂಕ ನಿಶ್ಚಯವಾಗಿದೆ. ನವೆಂಬರ್ 29 ರಂದು ಪ್ರೇಕ್ಷಕರ ಮುಂದೆ ಬರುವ ಚಿತ್ರದ ಬಜೆಟ್ ಬಗ್ಗೆ ಸಾಕಷ್ಟು ಊಹಾಪೋಹ ಚರ್ಚೆಗಳು ನಡೆದಿವೆ.

ಈ ಚಿತ್ರಕ್ಕೆ ಸಂಬಂಧಪಟ್ಟವರೇ ಈ ಸಂಗತಿಯನ್ನು ಬಹಿರಂಗಪಡಿಸಿದ್ದು, ಸರಿ ಸುಮಾರು 500 ಕೋಟಿ ವೆಚ್ಚದಲ್ಲಿ ಚಿತ್ರ ತಯಾರಾಗಿದೆ ಎಂದು ಹೇಳಿದ್ದಾರೆ. 2.0 ಚಿತ್ರದ ವಿಎಫ್‌ಎಕ್ಸ್ ಸರಿ ಬಾರದ ಕಾರಣ ಮತ್ತೆ ಆ ಕೆಲಸ ನಡೆಯುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಜನಿಕಾಂತ್, ಅಕ್ಷಯ್ ಕುಮಾರ್, ಆಮಿ ಜಾಕ್ಸನ್ ನಟಿಸಿರುವ ಈ ಚಿತ್ರವು ಭಾರತದಲ್ಲಿನ ಸಾಮಾನ್ಯ 3ಡಿ ಚಲನಚಿತ್ರ ತಯಾರಿಕೆಗಿಂತ ದುಬಾರಿಯಾಗಿದೆ. ಭಾರತದಲ್ಲಿ ಬಹುತೇಕ ಚಿತ್ರಗಳನ್ನು 2ಡಿಯಲ್ಲಿ ಚಿತ್ರೀಕರಿಸಿ ಬಳಿಕ 3ಡಿಗೆ ಬದಲಿಸಲಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಈ ಚಿತ್ರವನ್ನು 3ಡಿಯಲ್ಲೇ ಚಿತ್ರೀಕರಿಸಲಾಗಿದೆಯಂತೆ.ನ ಇದರಿಂದಲೇ ಈ ಚಿತ್ರವು ದುಬಾರಿಯಾಗಿರೋದು. ಆದ್ರೆ ಮೂಲಗಳ ಪ್ರಕಾರ ಇದು ಬಜೆಟ್‌ಗಿಂತ ಹೆಚ್ಚು ಕಲೆಕ್ಷನ್ ಮಾಡಲಿವೆಯಂತೆ.