ಬಂಟ್ವಾಳ: ವಿವಿಧ ಕಾರಣಗಳಿಂದ ತೆರವಾಗಿದ್ದ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಸಂಗಬೆಟ್ಟು ತಾಲೂಕು ಪಂಚಾಯತ್‌ನ ಉಪ ಚುನಾವಣೆ ಮತದಾನದ ಪ್ರಕ್ರಿಯೆಯು ಮುಕ್ತಾಯವಾಗಿದ್ದು, ಶೇ. 73.14ರಷ್ಟು ಮತದಾನವಾಗಿದೆ.
ಉಪುಚುನಾವಣೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶಾಂತಿಯುತವಾಗಿತ್ತು. ಬೆಳಿಗ್ಗೆ 10:30 ಕ್ಕೆ ಸುಮಾರಿಗೆ ಶೇ. 25ರಷ್ಟು ಮತದಾನವಾಗಿದ್ದು, ಹಲವು ಶುಭ ಕಾರ್ಯಕ್ರಮಗಳಿದ್ದ ಕಾರಣ ಮಧ್ಯಾಹ್ನದವರೆಗೆ ಮತದಾನ ವಿರಳವಾಗಿತ್ತು.
ಒಟ್ಟು 10 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ಒಟ್ಟು 6840 ಮತದಾರರಿದ್ದು 3293 ಗಂಡಸರು, 3547 ಹೆಂಗಸರು ಇದ್ದು ಇದರಲ್ಲಿ ಮತದಾನ ಮಾಡಿದ್ದು ಶೇಕಡಾ 73.04 ರಷ್ಟು ಮಾತ್ರವಾಗಿದೆ. ಒಟ್ಟಿನಲ್ಲಿ ಮತದಾನ ಶಾಂತಿಯುತ ಮತದಾನಕ್ಕಾಗಿ ಪೊಲೀಸರು ಬಿಗಿ ಬಂದೋಬಸ್ತು ನಡೆಸಿದ್ದರು.