10 ಜನ ಪಕ್ಷೇತರರ ಬೆಂಬಲ! ಬಿಜೆಪಿಗೆ ಹೆಚ್ಚಾದ ಬಲ ; ಈಗ ಎನ್ ಡಿಎ 292 ಅಲ್ಲ 303…! – ಕಹಳೆ ನ್ಯೂಸ್
ಆದರೆ, ಬೆಂಬಲ ನೀಡಿದ 10 ಜನ ಸಂಸದರ ಹೆಸರು ಬಹಿರಂಗವಾಗಿಲ್ಲ. ಸಿಕ್ಕಿಂ ಕ್ರಾಂತಿ ಮೋರ್ಚಾ, ಶಿರೋಮಣಿ ಅಕಾಲಿ ದಳ, ವೈಸ್ ಆಫ್ ಪೀಪಲ್ಸ್ ಪಾರ್ಟಿ, ಮಿಜೋರಾಂನ ಜೆಡ್‌ಪಿಎಂನ ತಲಾ ಒಬ್ಬ ಸಂಸದರ ಬೆಂಬಲ ಸಿಗುವ ಸಾಧ್ಯತೆ ಇತ್ತು. ಹೀಗಾಗಿ ಇನ್ನುಳಿದವರ ಹೆಸರು ಬಹಿರಂಗವಾಗಬೇಕಿದೆ.
ಈ ಬೆಂಬಲ ಸಿಕ್ಕಿದ್ದರಿಂದಾಗಿ ಬಿಜೆಪಿಗೆ ಮತ್ತಷ್ಟು ಬಲ ಬಂದಂತಾಗಿದೆ. ಜೆಡಿಯು ಹಾಗೂ ಟಿಡಿಪಿಯನ್ನು ಸೆಳೆದು ಎನ್ ಡಿಎ ಒಕ್ಕೂಟದ ನಿರ್ಧಾರಕ್ಕೆ ವ್ಯಕ್ತಪಡಿಸಬೇಕೆಂಬ ಇಂಡಿಯಾ ಒಕ್ಕೂಟದ ಪ್ರಯತ್ನ ಕೂಡ ಮತ್ತಷ್ಟು ಕಠಿಣವಾಗುವಂತಾಗಿದೆ. ನೂತನವಾಗಿ ಆಯ್ಕೆಯಾಗಿರುವ ಇನ್ನುಳಿದ 7 ಜನರ ಬೆಂಬಲ ಮೋದಿಗೆ ಸಿಗುವುದು ಕಷ್ಟ.
7 ಜನ ಪಕ್ಷೇತರ ಸಂಸದರಲ್ಲಿ ಇಬ್ಬರು ಖಲಿಸ್ತಾನಿ ಬೆಂಬಲಿಗರಿದ್ದಾರೆ. ಅಮೃತ್‌ಪಾಲ್ ಸಿಂಗ್, ಸರಬ್‌ಜಿತ್ ಸಿಂಗ್ ಖಲ್ಸಾ ವಿವಿಧ ಅಪರಾಧ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಈ ಇಬ್ಬರ ಬೆಂಬಲ ಮೋದಿಗೆ ಸಿಗುವುದು ಬಹುತೇಕ ಕಷ್ಟ. ದೇಶದ್ರೋಹದ ಆರೋಪದ ಮೇಲೆ ಎಂಜಿನಿಯರ್ ರಶೀದ್ ಜೈಲಲ್ಲಿದ್ದಾನೆ. ಆತ ಬೆಂಬಲಿಸುವುದಿಲ್ಲ. ಬಿಹಾರದ ರಂಜನ್ ರಾಜೇಶ್ ಅಲಿಯಾಸ್ ಪಪ್ಪು ಯಾದವ್ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿ. ಅವರ ಬೆಂಬಲವೂ ಬಿಜೆಪಿಗೆ ಕಷ್ಟ. ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ, ಲಡಾಕ್‌ನಿಂದ ಆಯ್ಕೆಯಾಗಿಧಿರುವ ಮೊಹಮ್ಮದ್ ಹನೀಫ್, ಉತ್ತರ ಪ್ರದೇಶದಿಂದ ಗೆದ್ದಿರುವ ಚಂದ್ರಶೇಖರ್ ಆಜಾದ್, ಮಹಾರಾಷ್ಟ್ರದ ಸಾಂಗ್ಲಿಯ ಸಂಸದ ವಿಕಾಸ್ ಪ್ರಕಾಶ್‌ಬಾಬು ಪಾಟೀಲ್, ಉಮೇಶ್ ಬಾಬೂಧಿಭಾಯ್ ಪಟೇಲ್ ಬಿಜೆಪಿ ಬೆಂಬಲಿಸುವ ಸಾಧ್ಯತೆ ಕಡಿಮೆ.
ಈ ಬೆಂಬಲ ಸಿಕ್ಕಿದ್ದರಿಂದಾಗಿ ಬಿಜೆಪಿಗೆ ಜೆಡಿಯು ಹಾಗೂ ಟಿಡಿಪಿಯ ತಲೆನೋವು ಕೊಂಚ ಕಡಿಮೆ ಆದಂತೆ ಕಾಣುತ್ತಿದೆ.