Recent Posts

Sunday, November 17, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಿಸಿರೋಡಿನ ಮುಖ್ಯ ವೃತ್ತದಿಂದ ಪಾಣೆಮಂಗಳೂರು ಸೇತುವೆಯವರೆಗೆ ಹೆದ್ದಾರಿಯ ಇಕ್ಕೆಲಗಳಲ್ಲಿ ಆರಂಭವಾಗ ಹಸಿರು ಹುಲ್ಲು ನೆಡುವ ಕಾರ್ಯ- ಕಹಳೆ ನ್ಯೂಸ್

ಬಂಟ್ವಾಳ: ಬಿಸಿರೋಡಿನ ಮುಖ್ಯ ವೃತ್ತದಿಂದ ಪಾಣೆಮಂಗಳೂರು ಸೇತುವೆಯವರೆಗೆ ಹೆದ್ದಾರಿಯ ಇಕ್ಕೆಲಗಳಲ್ಲಿ ರಸ್ತೆ ಜರಿದು ಹೋಗುವುದನ್ನು ತಡೆಯಲು ಹಸಿರು ಹುಲ್ಲು ನೆಡುವ ಕಾರ್ಯ ಆರಂಭವಾಗಿದೆ.

ಬಿಸಿರೋಡಿನಿಂದ ಅಡ್ಡಹೊಳೆವರೆಗಿನ ಚತುಷ್ಪತ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯನ್ನು ಕೆ.ಎನ್.ಆರ್.ಸಿ.ಕಂಪೆನಿ ವಹಿಸಿಕೊಂಡಿದೆ. ಅನೇಕ ಕಡೆಗಳಲ್ಲಿ ರಸ್ತೆಯನ್ನು ಮಣ್ಣು ತುಂಬಿಸಿ ನಿರ್ಮಿಸಲಾಗಿತ್ತು. ಇನ್ನು ಹಲವು ಕಡೆಗಳಲ್ಲಿ ಗುಡ್ದಜರಿದು ರಸ್ತೆಯ ತಯಾರು ಮಾಡಲಾಗಿದೆ. ಇದೀಗ ಮಳೆಗಾಲ ಆರಂಭವಾಗಿದ್ದು, ಮಣ್ಣು ತುಂಬಿಸಿ ರಸ್ತೆ ನಿರ್ಮಿಸಲಾಗಿರುವ ಕಡೆಗಳಲ್ಲಿ ಮಣ್ಣು ಜರಿದು ರಸ್ತೆ ಸಂಪರ್ಕ ಕಡಿತವಾಗದಂತೆ ಮುನ್ನೆಚ್ಚರಿಕೆ ವಹಿಸಿಕೊಂಡ ಕಂಪೆನಿ ಇದೀಗ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಿಗೆ ಹುಲ್ಲು ನೆಡುವ ಕಾರ್ಯ ಆರಂಭಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ತಮಿಳುನಾಡಿನ ಕಂಪೆನಿಯೊಂದಕ್ಕೆ ಗುತ್ತಿಗೆ ನೀಡಿದ ಕಂಪೆನಿ, ಇದೀಗ ಕಾಮಗಾರಿ ಭರದಿಂದ ಸಾಗುತ್ತಿದೆ. ರಸ್ತೆಯ ಇಕ್ಕೆಲಗಳನ್ನು ಇಳಿಜಾರು ಮಾದರಿಯಲ್ಲಿ ತಯಾರುಮಾಡಿದ್ದು, ಅದರ ಮೇಲೆ ತೆಂಗಿನ ಸಿಪ್ಪೆಯಿಂದ ತಯಾರಿಸಿದ ಹೊದಿಕೆಯನ್ನು ಹಾಕಿ,ಅದರ ಮೇಲೆ ಲಾವಂಚ ಎಂಬ ಜಾತಿಗೆ ಸೇರಿದ ಆಯುರ್ವೇದ ಮೂಲದ ಹುಲ್ಲನ್ನು ನೆಡಲಾಗುತ್ತಿದೆ.

ಹೊಸದಾಗಿ ಹಾಕಲಾಗಿರುವ ಮಣ್ಣಿನ ಮೇಲೆ ನೆಟ್ಟ ಹುಲ್ಲು ಬೆಳೆದು ಮಣ್ಣಿನ ರಕ್ಷಣೆ ಮಾಡಲು ಕನಿಷ್ಠ ಒಂದು ವರ್ಷ ಬೇಕಾಗುತ್ತದೆ. ಅವರೆಗೆ ಮಣ್ಣು ಮಳೆ ನೀರಿಗೆ ಕೊಚ್ಚಿಕೊಂಡು ಹೋಗದಂತೆ ರಕ್ಷಣೆ ನೀಡಲು ತೆಂಗಿನಕಾಯಿ ಸಿಪ್ಪೆಯಿಂದ ತಯಾರಿಸಿದ ಹೊದಿಕೆಯನ್ನು ಹಾಸಲಾಗಿದೆ. ಅದರ ಮೇಲೆ ನೆಡುವ ಹುಲ್ಲು ಒಂದು ವರ್ಷದ ಬಳಿಕ ಅತ್ಯಂತ ಶಕ್ತಿಶಾಲಿಯಾಗಿ ಮಣ್ಣು ಕರಗದಂತೆ ರಕ್ಷಣೆ ನೀಡುತ್ತದೆ ಎಂಬುದನ್ನು ಕಾರ್ಮಿಕರು ತಿಳಿಸುತ್ತಾರೆ.

ಕರಾವಳಿಗೆ ಸೂಕ್ತವೇ?
ಕರಾವಳಿ ಭಾಗದಲ್ಲಿ ಅತೀ ಹೆಚ್ಚು ಮಳೆಯಾಗುವುದರಿಂದ ತೆಂಗಿನಕಾಯಿ ಸಿಪ್ಪೆಯ ಹೊದಿಕೆ ಹಾಗೂ ಹಸಿರು ಹುಲ್ಲು ಮಣ್ಣು ಜರಿದು ಹೋಗುವುದನ್ನು ತಡೆಯುವುದು ಅಷ್ಟು ಸುಲಭದ ಮಾತಲ್ಲ ಎಂಬುದು ಇಲ್ಲಿನ‌ ಸ್ಥಳೀಯ ತಜ್ಞರ ಅಭಿಪ್ರಾಯ.

ಹೊಸದಾಗಿ ಮಣ್ಣು ತುಂಬಿಸಿ ರಸ್ತೆ ಮಾಡಲಾಗಿದೆ. ಬಳಿಕ ಕಂಪೆನಿಯವರು ರೋಲರ್ ಹಾಕಿ ಮಣ್ಣನ್ನು ಕೂರಿಸಲಾಗಿದೆ. ಇಲ್ಲಿನ ಅತೀಯಾದ ಮಳೆಗೆ ಕಂಪೆನಿಯವರು ಹೊದಿಸಲಾಗಿರುವ ಹೊದಿಕೆಯೊಳಗಿಂದ ಮಣ್ಣು ಜರಿಯಲು ಪ್ರಾರಂಭವಾದರೆ ನಿಲ್ಲುವುದು ಕಷ್ಟದ ಮಾತು ಎಂದಿದ್ದಾರೆ.ಇಲ್ಲಿ ಏನಿದ್ದರೂ ಕಪ್ಪು ಕಲ್ಲು ಕಟ್ಟಿದರೆ ಮಾತ್ರ ಧೈರ್ಯ ಎಂದು ಅವರು ತಿಳಿಸಿದ್ದಾರೆ.

ಆರಂಭದ ವರ್ಷದಲ್ಲಿ ಮಣ್ಣು ಕೊಚ್ಚಿಹೋಗದಿದ್ದರೆ ಮುಂದಿನ ವರ್ಷಕ್ಕೆ ಹಸಿರು ಹುಲ್ಲು ಬೆಳೆದು ರಕ್ಷಣೆ ನೀಡಬಹುದು ಎಂದು ತಿಳಿಸಿದ್ದಾರೆ