Sunday, January 19, 2025
ಬದಿಯಡ್ಕಸುದ್ದಿ

ಬದಿಯಡ್ಕ: ನಾಡೋಜ ಕಯ್ಯಾರ ಕಿಂಞಣ್ಣ ರೈಗಳ 109ನೆ ಜನ್ಮ ದಿನಾಚರಣೆ– ಕಹಳೆ ನ್ಯೂಸ್

ಬದಿಯಡ್ಕ: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡಮಿ ಕಾಸರಗೋಡು ಮತ್ತು ಕಯ್ಯಾರರ ಕುಟುಂಬ ಜಂಟಿ ಆಶ್ರಯದಲ್ಲಿ ಕಯ್ಯಾರರ ಇಂಜ್ಜಕ್ಕ ನಿವಾಸದಲ್ಲಿ ಕಯ್ಯಾರರ 109ನೆ ಜನ್ಮ ದಿನಾಚರಣೆಯನ್ನು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡಮಿಯ ಅಧ್ಯಕ್ಷರಾದ ಚನಿಯಪ್ಪ ನಾಯ್ಕ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಕಾಸರಗೋಡು ಬ್ಲಾಕ್ ಪಂಚಾಯತ್ ಸದಸ್ಯರಾದ ಸುಕುಮಾರ್ ಕುದ್ರೆಪಾಡಿ ನಾಡೋಜ ಡಾ.ಕಯ್ಯಾರ ಕಿಞಣ್ಣ ರೈಯವರ ಬದುಕು ಹಾಗೂ ಬರಹ ಅನುಸ್ಮರಣೀಯ. ರಾಜಕೀಯ, ಸಾಮಾಜಿಕ, ಸಾಹಿತ್ಯ, ಶೈಕ್ಷಣಿಕ ಕ್ಷೇತ್ರದಲ್ಲಿ ಅವರು ತೋರಿದ ಅಸಾಮಾನ್ಯ ಸಾಧನೆ ಇಂದಿನ ಮಕ್ಕಳಿಗೆ, ಯುವಜನರಿಗೆ ಮಾದರಿಯಾಗಬೇಕು. ಕಯ್ಯಾರರ ಬಗ್ಗೆ, ಅವರ ರೀತಿ ನೀತಿಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಕನ್ನಡಿಗರು ಕನ್ನಡಕ್ಕಾಗಿ ಹೋರಾಡಿದ ಧೀಮಂತ ವ್ಯಕ್ತಿತ್ವವನ್ನು ಸದಾ ಸ್ಮರಿಸಬೇಕು. ಅವರು ತೋರಿದ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬದಿಯಡ್ಕ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಾಹಿನ್ ಕೇಳೋಟ್ ಮಾತನಾಡಿ ಮುಚ್ಚಿರುವ ಕಯ್ಯಾರರ ಹೆಸರಲ್ಲಿರುವ ಬದಿಯಡ್ಕ ಪಂಚಾಯತು ಪುಸ್ತಕಾಲಯವನ್ನು ತೆರೆದು, ಇನ್ನಷ್ಟು ಸುಸಜ್ಜಿತಗೊಳಿಸಿ ಅದರ ಪ್ರಯೋಜನ ಓದುಗರಿಗೆ ಲಭ್ಯವಾಗುವಂತೆ ಮಾಡಬೇಕೆಂದು ಪಂಚಾಯತು ಅಧ್ಯಕ್ಷರನ್ನು ಒತ್ತಾಯಿಸಲಾಗುವುದೆಂದು ಹೇಳಿದರು.

ಪ್ರೊ. ಶ್ರೀನಾಥ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯತ್ ಸದಸ್ಯರಾದ ಶ್ಯಾಂ ಪ್ರಸಾದ್ ಮಾನ್ಯ, ಕುಂಬಡಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಗೋಸಾಡ, ತುಳು ಸಂಘಟಕ ಕೃಷ್ಣ ಡಿ ಬೇಲಿಂಜ, ನಿರಂಜನ್ ರೈ ಪೆರಡಾಲ, ಬದಿಯಡ್ಕ ರೋಟರಿ ಕ್ಲಬ್ ನ ಪ್ರತಿಕ್ ಆಳ್ವ, ಕಯ್ಯಾರರ ಕುಟುಂಬದ ಪ್ರದೀಪ್ ರೈ, ಆರತಿ, ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಚಂದ್ರಹಾಸ ಮಾಸ್ಟರ್, ವಸಂತ ಬಾರಡ್ಕ ಕಯ್ಯಾರರು ರಚಿಸಿದ ಕವನ ವಾಚಿಸಿದರು. ಧನರಾಜ್ ಪೆರ್ಲ ಸ್ವಾಗತಿಸಿ, ಸುಷ್ಮಿತಾ ಗೋಸಾಡ ವಂದಿಸಿದರು. ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡಮಿಯ ಪ್ರಧಾನ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಕಾರ್ಯಕ್ರಮ ನಿರೂಪಿಸಿದರು.