Recent Posts

Monday, April 14, 2025
ಸುದ್ದಿ

ಕ್ಯಾಟ್ ವಾಕ್ ಶೋ: ಮಾಡೆಲ್‌ಗಳಿಗೆ ತೊಂದರೆ ಕೊಟ್ಟ ಬೆಕ್ಕು – ಕಹಳೆ ನ್ಯೂಸ್

ಕ್ಯಾಟ್ ವಾಕ್ ಗೆ ಬೆಕ್ಕೇ ಕಂಟಕವಾದ ಸ್ವಾರಸ್ಯಕರ ಘಟನೆ ಇದು. ಬೆಕ್ಕಿನ ಹಾಗೆ ವೈಯ್ಯಾರದಿಂದ ನಡೆಯುವ ಕಾರ್ಯಕ್ರಮಕ್ಕೆ ಕ್ಯಾಟ್ ವಾಕ್ ಎನ್ನುತ್ತೇವೆ. ಆದರಿಲ್ಲಿ ನಿಜವಾಗಿಯೂ ಕ್ಯಾಟ್ ವಾಕ್ ಶೋನಲ್ಲಿ ಬೆಕ್ಕು ಅಡ್ಡ ಬಂದು ತೊಂದರೆ ಕೊಡುತ್ತಾ ಕುಳಿತಿತ್ತು.

ಇಸ್ತಾನ್ ಬುಲ್ ನಲ್ಲಿ ನಡೆದ ಫ್ಯಾಶನ್ ಶೋನಲ್ಲೇ ಬೆಕ್ಕು ಅಟಕಾಯಿಸಿಕೊಂಡಿದ್ದು, ಅತ್ತ ಮಾಡೆಲ್‌ಗಳು ರಾಂಪ್ ಮೇಲೆ ಹೆಜ್ಜೆ ಹಾಕುತ್ತಿದ್ದರೆ, ಬೆಕ್ಕು ಸಹ ಮಧ್ಯೆ ಮಧ್ಯೆ ಅಡ್ಡ ಬಂದು ತೊಂದರೆ ಕೊಡುತ್ತಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕೊನೆಗೆ ರಾಂಪ್‌ನ ತುದಿಯಲ್ಲಿ ನಿಂತು ಅಲ್ಲಿಗೆ ಬಂದ ಮಾಡೆಲ್ ಒಬ್ಬರ ಕಾಲಿಗೆ ಬಾಯಿ ಹಾಕಿತು. ಮತ್ತೊಮ್ಮೆ ಹಾಕಲು ಹೋಗಿ ವಿಫಲವೂ ಆಯಿತು. ಅಂತೂ ಮುಂದೇನಾಗುತ್ತದೆಂಬ ಕುತೂಹಲವನ್ನು ಪ್ರೇಕ್ಷಕರಲ್ಲಿ ಮೂಡಿಸುವಲ್ಲಿ ಈ ಬೆಕ್ಕು ಸಫಲವಾದಂತಾಗಿದೆ!

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ