Sunday, January 19, 2025
ಸುದ್ದಿ

ಕವಿ ಭಾಸ್ಕರ ಅಡ್ವಳರ ನೂತನ ಕೃತಿ “ಜೀವಸತ್ವ”, ಕೃತಿ ಬಿಡುಗಡೆ – ಕಹಳೆ ನ್ಯೂಸ್

ವ್ಯಂಗ್ಯ ಚಿತ್ರಕಾರ ವಿರಾಜ್ ಅಡೂರು ಇವರು ಕವಿ ಭಾಸ್ಕರ ಅಡ್ವಳರ ನೂತನ ಕೃತಿ “ಜೀವಸತ್ವ”, ವಿನೂತನ ಜ್ಞಾನದ ಕೆಕೆ ಒಗಟಿನ ಮಾಲೆಯನ್ನು ಬಿಡುಗಡೆಗೊಳಿಸಿದರು. ಅವರು ಬಂಟ್ವಾಳ ತಾಲೂಕಿನ ವಿಟ್ಲ ಚಂದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಕೃತಿ ಬಿಡುಗಡೆ ಗೊಳಿಸಿ ಮಾತಾಡಿದ ವಿರಾಜ್ ಒಗಟುಗಳು ಬುದ್ಧಿಯನ್ನು ಮಸೆಯುತ್ತವೆ. ಒಗಟಿಗೆ ಉತ್ತರ ಶೋಧಿಸುವ ಕಾರಣದಿಂದ ಏಕಾಗ್ರತೆಯು ಬಲಗೊಳ್ಳುತ್ತದೆ. ಮಾತಿನ ಕಟ್ಟೆಗಳಲ್ಲಿ ನಮ್ಮ ಹಿರಿಯರು ಮನರಂಜನೆಗಾಗಿ ಒಗಟು ಹೇಳುತ್ತಿದ್ದರು. ಒಗಟು ಸಾಹಿತ್ಯದ ಅಂಗವಾಗಿದೆ. ಭಾಸ್ಕರ ಅಡ್ವಳರ ಕೃತಿ “ಜೀವಸತ್ವ” ಹಿರಿಯರು ಮತ್ತು ಕಿರಿಯರೆಲ್ಲರಿಗೂ ಸಹಕಾರಿಯಾಗಿದೆ ಎಂದರು.

ಕೃತಿಕಾರ ಭಾಸ್ಕರ ಅಡ್ವಳರು ಪ್ರಸ್ತಾವನೆ ಮಾಡಿದರು. ಮಕ್ಕಳ ಕಲಾಲೋಕ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಇದರ ಅಧ್ಯಕ್ಷ ರಮೇಶ ಎಂ ಬಾಯಾರು ಅಧ್ಯಕ್ಷತೆ ವಹಿಸಿದರು. ಚಂದಳಿಕೆ ಶಾಲಾ ಮುಖ್ಯೋಪಾಧ್ಯಾಯ ವಿಶ್ವನಾಥ ಗೌಡ ಕುಳಾಲು ಸ್ವಾಗತಿಸಿ,ಶಿಕ್ಷಕ ವೆಂಕಟೇಶ್ವರ ಭಟ್ ವಿಟ್ಲ ವಂದಿಸಿ, ಸಹ ಶಿಕ್ಷಕಿ ರೇಶ್ಮಾ ಲೂಯಿಸ್ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು