Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಹಣ,ದಾಖಲೆ ಪತ್ರ ಮರಳಿಸಿದ ಆಟೋ ಚಾಲಕ ಪ್ರಾಮಾಣಿಕತೆಗೆ ವ್ಯಾಪಕ ಪ್ರಶಂಸೆ– ಕಹಳೆ ನ್ಯೂಸ್

ಬಂಟ್ವಾಳ: ಆಟೋ ಚಾಲಕರೋರ್ವರು ದಾರಿಯಲ್ಲಿ ಸಿಕ್ಕ ಹಣದ ಕಟ್ಟನ್ನು ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದು, ಪ್ರಶಂಸೆಗೆ ಒಳಗಾಗಿದ್ದಾರೆ.

ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ ಗ್ರಾ.ಪಂ.ವ್ಯಾಪ್ತಿಯ ಬಸ್ತಿಕೋಡಿಯ ಆಟೋ ಮಾಲಕ ಸೀತಾರಾಮ ಶೆಟ್ಟಿ ಹರ್ಕಾಡಿ ಅವರು ಮಡಂತ್ಯಾರ್ ನಿಂದ ಆಟೊವನ್ನು ಬಾಡಿಗೆಗೆ ಬರುವಾಗ ರಸ್ತೆಯಲ್ಲಿ ಪ್ಲಾಸ್ಟಿಕ್ ಕವರೊಂದು ಸಿಕ್ಕಿದ್ದು ಅದರಲ್ಲಿ ಹದಿಮೂರುವರೆ ಸಾವಿರ ನಗದು ಒಂದು ಲಕ್ಷ ರೂ.ಗಿಂತ ಹೆಚ್ಚು ಮೊತ್ತದ ಚೆಕ್ ಹಾಗೂ ಕೆಲವು ಡಾಕ್ಯುಮೆಂಟಗಳು ದೊರೆತಿದ್ದವು.ಅದನ್ನು ಬಸ್ತಿಕೋಡಿಗೆ ತಂದು ಗ್ರಾಮ ಪಂಚಾಯತ್ ಸದಸ್ಯ ಉದಯ ಕುಮಾರ್ ಶೆಟ್ಟಿ ಕುಂಡೋಳಿಗುತ್ತು ಅವರ ಮೂಲಕ ಅದರ ವಾರಸುದಾರರನ್ನು ಸಂಪರ್ಕಿಸಿ ಅವರನ್ನು ಬಸ್ತಿಕೋಡಿಗೆ ಕರೆಸಿ ಅವರಿಗೆ ಹಸ್ತಾಂತರಿಸಲಾಯಿತು. ಆಟೋ ಚಾಲಕ,ಮಾಲಕ ಸೀತಾರಾಮ ಶೆಟ್ಟಿ ಅವರ ಈ ಪ್ರಾಮಾಣಿಕತೆಗೆ ಬಸ್ತಿಕೋಡಿ ನಾಗರಿಕರು ಅವರನ್ನು ಅಭಿನಂದಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು