Recent Posts

Sunday, January 19, 2025
ಸುದ್ದಿ

ವನ್ಯಜೀವಿಗಳ ಬೇಟೆ: ಅರಣ್ಯಾಧಿಕಾರಿಗಳಿಂದ ಬೇಟೇಗಾರರ ಬಂಧನ – ಕಹಳೆ ನ್ಯೂಸ್

ಉತ್ತರ ಕನ್ನಡ: ಜಿಲ್ಲೆಯ ಅರಣ್ಯದಲ್ಲಿ ವನ್ಯಜೀವಿ ಬೇಟೆಯಾಡಿ ಅವುಗಳ ಚರ್ಮ, ಮಾಂಸವನ್ನು ಮಾರಾಟ ಮಾಡುತಿದ್ದ ಆರು ಜನ ಕುಮಟಾ ಮೂಲದ ವನ್ಯಜೀವಿ ಕಳ್ಳ ಬೇಟೇಗಾರರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದೇ ತಿಂಗಳ 3 ನೇ ತಾರೀಕಿನಂದು ಕುಮಟಾ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಿ ಚಿರತೆ ಚರ್ಮ ಹಾಗೂ ಉಗುರುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈತನ ಮಾಹಿತಿ ಆಧಾರದಲ್ಲಿ ನಿನ್ನೆ ಅಂಕೋಲದಲ್ಲಿ ಅಭಿಷೇಕ್ ದಿನಕರ್ ನಾಯಕ್ ಎಂಬುವವನನ್ನು ಕುಮಟಾ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಲಾಟಿ ಏಟಿನ ರುಚಿ ಬಿದ್ದಮೇಲೆ ತನ್ನೊಂದಿಗಿದ್ದ ಆರು ಜನ ವನ್ಯಜೀವಿ ಭೇಟೆಗಾರರ ಮಾಹಿತಿಯನ್ನು ಬಾಯಿಬಿಟ್ಟಿದ್ದು,ಕುಮಟಾ,ಅಂಕೋಲಾ ಮೂಲದ ಶ್ರೀಧರ್ ನಾಗೇಶ್ ಬಂಡಾರಿ,ರಾಮಚಂದ್ರ ಕುಪ್ಪುಗೌಡ ,ಮಹೇಶ್ ಗೌಡ,ಈಶ್ವರ್ ಗೌಡ ,ಅಶೋಕ್ ಬಂಡಾರಿ,ರಾಜು ನಾಯ್ಕನನ್ನು ಬಂಧಿಸಲಾಗಿದೆ.