Recent Posts

Sunday, January 19, 2025
ಕ್ರೈಮ್ದಕ್ಷಿಣ ಕನ್ನಡಮಂಗಳೂರುರಾಜಕೀಯಸುದ್ದಿ

ಮಂಗಳೂರಿನಲ್ಲಿ ಮೋದಿ ಪ್ರಮಾಣವಚನದ ವಿಜಯೋತ್ಸವ ಸಂದರ್ಭ ಚೂರಿ ಇರಿತ ; ಇಬ್ಬರು ಗಂಭೀರ – ಕಹಳೆ ನ್ಯೂಸ್

ಮಂಗಳೂರು : ಬಿಜೆಪಿ ವಿಜಯೋತ್ಸವ ಮೆರವಣಿಗೆ ಸಂದರ್ಭ ಚೂರಿ ಇರಿತವಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಿಯಾರು ಎಂಬಲ್ಲಿ ಘಟನೆ ನಡೆದಿದ್ದು, ಬಿಜೆಪಿ ವಿಜಯೋತ್ಸವ ಮೆರವಣಿಗೆ ಬಳಿಕ ಇಬ್ಬರಿಗೆ ಚೂರಿ ಇರಿತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೋಳಿಯಾರು ನಿವಾಸಿಗಳಾದ ಹರೀಶ್ ‌ಹಾಗೂ ನಂದ ಕುಮಾರ್ ಗೆ ಇರಿತಕ್ಕೊಳಕ್ಕಾದವರು ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೋದಿ ಪದಗ್ರಹಣ ಹಿನ್ನೆಲೆಯಲ್ಲಿ ಬೋಳಿಯಾರ್ ನಲ್ಲಿ ಆಯೋಜಿಸಿದ್ದ ವಿಜಯೋತ್ಸವ ಸಂದರ್ಭ ಮಾತಿನ ಚಕಮಕಿ ನಡೆದು ಯುವಕರಿಗೆ ಚೂರಿ ಇರಿತವಾಗಿದೆ.

ಚೇಳೂರು ನಿಂದ ಬೋಳಿಯಾರ್ ಮೆರವಣಿಗೆಯ ಸಂದರ್ಭ ಮಾತಿನ ಚಕಮಕಿ ನಡೆದಿದ್ದು , ಮೆರವಣಿಗೆ ಮುಂದೆ ಹೋದಾಗ ಹಿಂದೆ ಇದ್ದವರ ಮೇಲೆ ದಾಳಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸದ್ಯ ಇಬ್ಬರಿಗೂ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.