ಕಳೆದ ಮೂರ್ನಾಲ್ಕು ದಿನಗಳಲ್ಲಿ ಕೋಳಿ ಮಾಂಸದ ಬೆಲೆ ಏಕಾಏಕಿ ಪ್ರತಿ ಕೆಜಿಗೆ 30 ರಿಂದ 40 ರೂ. ಹೆಚ್ಚಾಗಿದ್ದು, ಕೋಳಿ ಮಾಂಸ ಪ್ರಿಯರು ಖರೀದಿ ಮಾಡಲು ಹಿಂದೇಟು ಹಾಕುವಂತಾಗಿದೆ.
ಕಳೆದ ವಾರ ಚಿಲ್ಲರೆ ಮಾರುಕಟ್ಟೆಯಲ್ಲಿ ಮಾಂಸದ ಬ್ರಾಯ್ಲರ್ ಕೋಳಿ ಕೆ.ಜಿಗೆ 120 ರೂ. ಫಾರಂ ಕೋಳಿ ಕೆಜಿಗೆ 115 ರಿಂದ 125 ರೂ. ನಾಟಿ ಕೋಳಿ ಕೆಜಿಗೆ 350, ಗೆ ಇತ್ತು. ಆದರೆ ಇದೀಗ ಪ್ರತಿ ಕೆಜಿಗೆ 40 ರಿಂದ 50 ರೂ. ಹೆಚ್ಚಾಗಿದೆ.
ಬ್ರಾಯ್ಲರ್ ಕೋಳಿ ಕೆಜಿಗೆ 155 ರಿಂದ 160 ರೂ. ಫಾರಂ ಕೆಜಿಗೆ 125 ರಿಂದ 145, ವಿತ್ ಸ್ಕಿನ್ 220, ಸ್ಕಿನ್ ಔಟ್ 240 ಕ್ಕೆ ಏರಿಕೆಯಾಗಿದೆ. ಇದಕ್ಕೆ ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಗೆ ಕೋಳಿ ಪೂರೈಕೆಯಾಗದಿರುವುದೇ ಕಾರಣವೆನ್ನಲಾಗಿದೆ.