Friday, November 15, 2024
ದಕ್ಷಿಣ ಕನ್ನಡಮಂಗಳೂರುಸುದ್ದಿ

ಬೊಳಿಯಾರ್ ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿತ ಪ್ರಕರಣ : ಕಾಂಗ್ರೆಸ್‍ನ ಸೌಹಾರ್ಧತೆಯ ಭಾಷಣಕ್ಕೆ ಕವಡೆ ಕಿಮ್ಮತ್ತಿಲ್ಲ : ಶಾಸಕ ಡಾ.ಭರತ್ ಶೆಟ್ಟಿ ವೈ – ಕಹಳೆ ನ್ಯೂಸ್

ಕಾವೂರು : ಸೌಹಾರ್ಧತೆ ಎಂಬುದು ರಕ್ತದಲ್ಲಿ ಬರಬೇಕು. ಕಾಂಗ್ರೆಸ್‍ನ ರಾಜಕೀಯ ಓಲೈಕೆಯ ಸೌಹಾರ್ಧತೆಗೆ ಕವಡೆ ಕಿಮ್ಮತ್ತನ್ನು ಕಿಡಿಗೇಡಿಗಳು ನೀಡುವುದಿಲ್ಲ.ಭಾರತ್ ಮಾತಾಕಿ ಜೈ ಎಂದು ಹೇಳಿದ ಮಾತ್ರಕ್ಕೆ ಚೂರಿ ಇರಿತದ ಘಟನೆ ನಡೆದಿದ್ದು,ಭಾರತ ಎಂದರೆ ಎಷ್ಟು ಅಸಹನೆ ಹೆಚ್ಚುತ್ತಿದೆ ಎಂಬುದು ಮುಡಿಪು ಘಟನೆಯಿಂದ ಸಾಬೀತಾಗಿದೆ. ಸರಕಾರ ಹಾಗೂ ಪೊಲೀಸರು ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ಆಕ್ರೋಶಿತ ಕಾರ್ಯಕರ್ತರು ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಖಡಕ್ಕಾಗಿ ನುಡಿದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಧಾನಿಯಾಗಿ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಿರುವುದರಿಂದ, ಅಧಿಕಾರ ಸಿಗದೆ ಹತಾಶೆ ಗೊಂಡಿರುವ ಕಾಂಗ್ರೆಸ್ ಪಕ್ಷ ದೇಶದಾದ್ಯಂತ ಒಂದು ರೀತಿಯಲ್ಲಿ ದ್ವೇಷಮಯ ವಾತಾವರಣ ಹರಡಿದೆ. ಸಾಮಾಜಿಕ ಜಾಲತಾಣ ಮಾಧ್ಯಮಗಳ ಮೂಲಕ ಅಲ್ಪಸಂಖ್ಯಾತರನ್ನು ಬಹುಸಂಖ್ಯಾತರ ಮೇಲೆ ಎತ್ತಿಕಟ್ಟುವ ಮೂಲಕ ವಿಷ ಬೀಜವನ್ನು ಬಿತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಧಾನ ಸೌಧದಲ್ಲೂ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರ ಮೇಲೆ ಕ್ರಮ ಜರಗಿಸಿಲ್ಲ.ಭಾರತ್ ಮಾತಾಕಿ ಜೈ ಅಂದರೂ ಹಲ್ಲೆ ಮಾಡುವಷ್ಟರ ಮಟ್ಟಿಗೆ ದ್ವೇಷ ಮೂಡುತ್ತಿದೆ. ಹಲ್ಲೆ ಘಟನೆ ನಡೆದರೆ ಯಾವುದೇ ಕೇಸು ದಾಖಲಾದರೂ ಹಿಂಪಡೆಯುತ್ತಾರೆ ಎಂಬ ಭಂಡ ಧೈರ್ಯ ಕಿಡಿಗೇಡಿಗಳಲ್ಲಿ ಬಂದಿದೆ. ಇದರ ಫಲವಾಗಿ ಮುಡಿಪುವಿನಲ್ಲಿ ಘಟನೆ ನಡೆದಿದೆ.

ಇಂತಹ ಘಟನೆ ರಾಜ್ಯದ ಇತರೆಡೆಯೂ ನಡೆಯುವ ಸಂಶಯವಿದ್ದು, ಆತ್ಮರಕ್ಷಣೆಗಾಗಿ ಬಿಜೆಪಿ ಕಾರ್ಯಕರ್ತರು ಸ್ವತಃ ಕ್ರಮ ಕೈಗೊಂಡು ಹಿಂಸಾತ್ಮಕ ವಾತಾವರಣ ಉಂಟಾದರೆ ಇದರ ಹೊಣೆ ಕಾಂಗ್ರೆಸ್ ಹೊರಬೇಕು ಎಂದು ಸೂಚ್ಯವಾಗಿ ಎಚ್ಚರಿಕೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಜಮ್ಮುವಿನಲ್ಲಿ ಹಿಂದೂ ಯಾತ್ರಾರ್ಥಿಗಳ ಮೇಲೆ ಮುಸ್ಲಿಂ ಉಗ್ರರು ನಡೆಸಿದ ನರಮೇಧವನ್ನು ಖಂಡಿಸಿದ್ದು, ಇದಕ್ಕೆ ಉಗ್ರರ ಎನೌಕೌಂಟರ್ ಒಂದೇ ಪರಿಹಾರ ಎಂದು ಹೇಳಿದ್ದಾರೆ.