Saturday, November 23, 2024
ರಾಜಕೀಯಸುದ್ದಿ

ಮಲೆನಾಡಿಗೆ ಎಂಟ್ರಿ: ಕುಮಾರ ಪರ್ವಕ್ಕೆ ಚಾಲನೆ ನೀಡಿದ ಕುಮಾರಸ್ವಾಮಿ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲ ಕೆರಳಿಸಿರುವ ಶಿವಮೊಗ್ಗ ಲೋಕಸಭಾ ಚುನಾವಣೆ ಬಿಜೆಪಿ ಮತ್ತು ಮೈತ್ರಿ ಪಕ್ಷಗಳ ನಡುವಿನ ಕದನ ಎಂದೇ ಬಿಂಬಿಸಲಾಗುತ್ತಿದೆ.

ಈಗ ಮುಖ್ಯಮಂತ್ರಿ ಕುಮಾರಸ್ವಾಮಿ ಚುನಾವಣಾ ಪ್ರಚಾರದ ನಿಮಿತ್ತ ಮಲೆನಾಡಿಗೆ ಎಂಟ್ರಿ ಕೊಟ್ಟಿದ್ದು ಕುಮಾರ ಪರ್ವಕ್ಕೆ ಚಾಲನೆ ನೀಡಿದ್ದಾರೆ. ಬಿಜೆಪಿ 2ನೇ ಸುತ್ತಿನ ಪ್ರಚಾರ ಮುಗಿಸಿದರೂ ಕಾಂಗ್ರೆಸ್-ಜೆಡಿಎಸ್ ಇನ್ನೂ ನಾಯಕರ ಮಟ್ಟದ ಪ್ರಚಾರ,ಸಭೆಗೆ ಮಾತ್ರ ಸೀಮಿತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರ ಹೆಸರು ಇನ್ನು ತಳಮಟ್ಟಕ್ಕೆ ತಲುಪಿಲ್ಲ ಎಂಬ ಆರೋಪ ಕಾರ್ಯಕರ್ತರಿಂದಲೇ ವ್ಯಕ್ತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯಡಿಯೂರಪ್ಪ ವರ್ಸಸ್ ಬಂಗಾರಪ್ಪ ಫ್ಯಾಕ್ಟರ್ ಈಗಲೂ ಭಾರೀ ಹೋರಾಟಕ್ಕೆ ನಾಂದಿ ಹಾಡಿದೆ. ಯಡಿಯೂರಪ್ಪ ಪುತ್ರ ರಾಘವೇಂದ್ರ ಲಿಂಗಾಯತ ಸಮುದಾಯಕ್ಕೆ ಸೇರಿದರೆ, ಮಧು ಬಂಗಾರಪ್ಪ ಈಡಿಗ ಸಮುದಾಯದವರಾಗಿದ್ದಾರೆ.ಶಿವಮೊಗ್ಗ ಕ್ಷೇತ್ರದ ಪ್ರಭಾವಿ ಜಾತಿಯಾಗಿರುವ ಈ ಎರಡೂ ಜಾತಿಗೆ ಒಕ್ಕಲಿಗ,ಇತರೆ,ಅಲ್ಪಸoಖ್ಯಾತರ ಮತ ಹೇಗೆ ವಿಭಜನೆಯಾಗಲಿದೆ ಎಂಬ ಕುತೂಹಲ ಮೂಡಿದೆ.

ಈ ನಡುವೆ ಬಿಜೆಪಿ ಪ್ರಚಾರದಲ್ಲಿ ಮುಂದಿದೆ. ಆದರೆ ಕುಮಾರಸ್ವಾಮಿ ಭಾನುವಾರದಿಂದ ಮಲೆನಾಡಿನ ಮಡಿಲು ಶಿವಮೊಗ್ಗ ಜಿಲ್ಲೆಯ ಅನೇಕ ಕಡೆ ಪ್ರಚಾರ ಮಾಡಲು ಶುರು ಮಾಡಿದ್ದು,ಯಾರ ಮೇಲುಗೈ ಆಗುತ್ತೆ ಎಂಬುದನ್ನು ಚುನಾವಣಾ ಫಲಿತಾಂಶದ ವರೆಗೂ ಕಾದು ನೋಡಬೇಕಿದೆ.