Recent Posts

Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಕುಕ್ಕೆರೋಡಿ ಅಡಿಕೆ ಸುಲಿಯುವ ಫ್ಯಾಕ್ಟರಿಯಿಂದ ಸಮಸ್ಯೆ : ಇವತ್ತೂರು ಗ್ರಾ.ಪಂ. ನಿರ್ಣಯದ ವಿರುದ್ಧ ಪ್ರತಿಭಟನೆ- ಕಹಳೆ ನ್ಯೂಸ್

ಬಂಟ್ವಾಳ: ಬಂಟ್ವಾಳ ತಾಲೂಕಿನ ಇರ್ವತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಪಡುಕೋಡಿ ಗ್ರಾಮದ ಕುಕ್ಕೆರೋಡಿ ಎಂಬಲ್ಲಿ ನಡೆಸುತ್ತಿರುವ ಪರವಾನಿಗೆ ಅವಧಿ ಮೀರಿದ ಯಾಂತ್ರೀಕೃತ ಅಡಿಕೆ ಸುಲಿಯುವ ಘಟಕವನ್ನು ಸ್ಥಗಿತಗೊಳಿಸುವಂತೆ ಗ್ರಾ.ಪಂ.ಗೆ ಮನವಿ ಸಲ್ಲಿಸಿದ್ದರೂ ಘಟಕವನ್ನು ಯಥಾಸ್ಥಿತಿ ಮುಂದುವರೆಸಲು ಗ್ರಾ.ಪಂ.ಆಡಳಿತ ಕೈಗೊಂಡ ನಿರ್ಣಯದ ವಿರುದ್ಧ ಗ್ರಾಮಸ್ಥರು ಗ್ರಾ.ಪಂ.ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಇರ್ವತ್ತೂರು ಗ್ರಾ.ಪಂ.ನ ಕುಕ್ಕೆರೋಡಿ ವ್ಯಾಪ್ತಿಯ ಸದಸ್ಯ ಸುಧಿ0ದ್ರ ಶೆಟ್ಟಿ ಮತ್ತು ಸ್ಥಳೀಯ ಪ್ರಮುಖರಾದ ಜಯಚಂದ್ರ ಪೂಜಾರಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು, ಗ್ರಾ.ಪಂ. ನಿರ್ಣಯದ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಥಳೀಯ ವ್ಯಕ್ತಿಯೋರ್ವರು ಕಳೆದ ಒಂದು ವರ್ಷದಿಂದ ಅಡಿಕೆ ಸುಲಿಯುವ ಫ್ಯಾಕ್ಟರಿ ನಡೆಸುತ್ತಿದ್ದು, ಇದರಿಂದ ವಿಷಪೂರಿತ ದೂಳು ಹಾಗೂ ಶಬ್ದ ಮಾಲಿನ್ಯಉಂಟಾಗುತ್ತಿದೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ ಎಂದು ಗ್ರಾ.ಪಂ.ಗೆ ಸ್ಥಳೀಯರು ಆರೋಪಿಸಿದ್ದರು. ಆದರೆ ಇರ್ವತ್ತೂರು ಗ್ರಾ.ಪಂ.ನಲ್ಲಿ ಮೇ 27ರಂದು ಲೋಕಸಭಾ ಚುನಾವಣೆಯ ನೀತಿ ಸಂಹಿತೆಯನ್ನು ಉಲ್ಲಂಘಿಸಿ ನಡೆಸಿದ ಸಾಮಾನ್ಯ ತುರ್ತುಸಭೆಯಲ್ಲಿ ಕಲ್ಪತರು ಎಂಬ ಯಾಂತ್ರಿಕೃತ ಅಡಿಕೆ ಸುಲಿಯುವ ಘಟಕದ ಪರ ಗ್ರಾ.ಪಂ.ಅಧ್ಯಕ್ಷೆ ಮಾಲತಿ, ಅಭಿವೃದ್ಧಿ ಅಽಕಾರಿ ಹಾಗೂ ಆಡಳಿತ ಮಂಡಳಿ ಸದಸ್ಯರು ಕಾನೂನು ಬಾಹಿರ ನಿರ್ಣಯವನ್ನು ಕೈಗೊಂಡಿದ್ದರ ವಿರುದ್ಧ ಹಾಗೂ ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ಅಡಿಕೆ ಸುಲಿಯುವ ಘಟಕವನ್ನು ವಸತಿ ಪ್ರದೇಶವಾದ ಕುಕ್ಕೆರೋಡಿಯಿಂದ ಸ್ಥಳಾಂತರಗೊಳಿಸಬೇಕು ಎಂದು ಪ್ರತಿಭಟನೆ ನಡೆಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳಗ್ಗೆ 11ಗಂಟೆಗೆ ಪ್ರತಿಭಟನೆ ಆರಂಭವಾಗಿ ಮಧ್ಯಾಹ್ನವಾದರೂ ಮನವಿ ಸ್ವೀಕರಿಸಲು ಗ್ರಾ.ಪಂ.ಅಧ್ಯಕ್ಷರು ಬಾರದ ಕಾರಣ ಬಂಟ್ವಾಳ ತಾ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಪ್ರತಿಭಟನಾ ಸ್ಥಳಕ್ಕೆ ಬರಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಬಳಿಕ ತಾ.ಪಂ.ಸಹಾಯಕ ನಿರ್ದೇಶಕ ವಿಶ್ವನಾಥ ಅವರು ಆಗಮಿಸಿ ಮನವಿ ಸ್ವೀಕರಿಸಿದರು. ಪ್ರಸ್ತುತ ಚುನಾವಣಾ ನೀತಿ ಸಂಹಿತೆ ಇರುವ ಕಾರಣ ಹಾಗೂ ಘಟಕ ಸ್ಥಗಿತಗೊಳಿಸುವ ಬಗ್ಗೆ ನ್ಯಾಯಾಲಯದಲ್ಲಿ ಘಟಕ ಪರ ಮತ್ತು ವಿರುದ್ಧ ದಾವೆ ಹೂಡಿರುವುದರಿಂದ ಮುಂದಕ್ಕೆ ಪರಿಶೀಲಿಸಿ ನಿರ್ಣಯ ಕೈಗೊಳ್ಳ ಲಾಗುವುದು ಎಂದು ಅವರು ಪ್ರತಿಭಟನಾಕಾರರಲ್ಲಿ ತಿಳಿಸಿದ್ದಾರೆ.