Saturday, November 23, 2024
ಕುಂದಾಪುರಸುದ್ದಿ

ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ವಾರ್ಷಿಕೋತ್ಸವ ಸಮಾರಂಭ– ಕಹಳೆ ನ್ಯೂಸ್

ಫಾರ್ಚೂನ್ ಅಕಾಡೆಮಿಕ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಆಡಳಿತಕೊಳಪಟ್ಟ ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ಹಾಗೂ ಬಿ.ಡಿ. ಶೆಟ್ಟಿ ಕಾಲೇಜ್ ಮಾಬುಕಳ ಇದರ ವಾರ್ಷಿಕೋತ್ಸವ ಸಮಾರಂಭವು ಜರುಗಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಮಾರಂಭದ ಮುಖ್ಯ ಅತಿಥಿಯಾಗಿ ಡಾ| ಬಿ. ಜಗದೀಶ್ ಶೆಟ್ಟಿ, ನಿವೃತ್ತ ಪ್ರಾಂಶುಪಾಲರು, ಪೂರ್ಣಪ್ರಜ್ಞಾ ಕಾಲೇಜು, ಉಡುಪಿ ಹಾಗೂ ಆಡಳಿತಾಧಿಕಾರಿ, ಸಾಂಸ್ಕೃತಿಕ ಕೇಂದ್ರ, ಮಾಹೆ, ಶ್ರೀಮತಿ ಕಲ್ಪನ ಶೆಟ್ಟಿ, ಮುಖ್ಯೋಪಾಧ್ಯಾಯರು, ಚೇತನಾ ಪ್ರೌಢಶಾಲೆ, ಹಂಗಾರಕಟ್ಟೆ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ| ದೈವಿಕ್ ಟಿ. ಶೆಟ್ಟಿ, ಅಧ್ಯಕ್ಷರು, ಫಾರ್ಚೂನ್ ಅಕಾಡೆಮಿ ಆಫ್‌ ಹೆಲ್ತ್ ಸೈನ್ಸಸ್, ಬ್ರಹ್ಮಾವರ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು ಹಾಗೂ ವಿದ್ಯಾರ್ಥಿಗಳಿಗೆ ಪ್ರಾವೀಣ್ಯತ ಪ್ರಶಸ್ತಿಯನ್ನು ವಿತರಿಸಿ, ವಿದ್ಯಾರ್ಥಿಗಳಿಗೆ ಮುಂದಿನ ಜೀವನದ ವ್ಯಕ್ತಿತ್ವದ ಬಗೆ ಮಾರ್ಗದರ್ಶನ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಡಾ| ಬಿ. ಜಗದೀಶ್ ಶೆಟ್ಟಿ, ಮಾತನಾಡಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ವಿವೇಕಾನಂದರ ಆದರ್ಶ ತತ್ವಗಳನ್ನು ಹಾಗೂ ಮೌಲ್ಯಗಳನ್ನು ಅಳವಡಿಸಿಕೊಂಡು, ಸಮಾಜದಲ್ಲಿ ಪ್ರಾಮಾಣಿಕ ವ್ಯಕ್ತಿಯಾಗಿ ದೇಶದ ಸತ್ಪಜೆಯಾಗಬೇಕು ಎಂದು ಅನೇಕ ಉದಾಹರಣೆಯೊಂದಿಗೆ ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಚೇರ್‌ಮ್ಯಾನ್‌ರಾದ ಶ್ರೀ ತಾರನಾಥ್ ಶೆಟ್ಟಿ ಇವರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಸಮಾರಂಭದಲ್ಲಿ ವಿದ್ಯಾರ್ಥಿ ನಾಯಕರಾದ ಕೋಟೇಶ್ ಹಾಗೂ ಎಂ.ವಿ. ಹರಿಕೃಷ್ಣ ಉಪಸ್ಥಿತರಿದ್ದರು. ಉಪನ್ಯಾಸಕರಾದ ಕುಮಾರಿ ಅಮಿಷಾ ಸ್ವಾಗತಿಸಿ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸ್ಮಿತಾಮೋಲ್ ಈ.ಎಂ ಕಾಲೇಜಿನ ವಾರ್ಷಿಕ ವರದಿಯನ್ನು ವಾಚಿಸಿದರು. ಹಾಗೆಯೇ ಬಹುಮಾನ ವಿಜೇತರ ವಿವರವನ್ನು ಉಪನ್ಯಾಸಕಾರದ ಶ್ರೀಮತಿ ಅನುರಾಧ, ಕುಮಾರಿ ಅಂಬಿಕಾ, ಹಾಗೂ ಕುಮಾರಿ ಪ್ರೀತಿಕಾ ವಾಚಿಸಿದರು. ಈ ಕಾರ್ಯಕ್ರಮವನ್ನು ಉಪನ್ಯಾಸಕಿ ಶ್ರೀಮತಿ ವೀಣಾ ನಿರೂಪಿಸಿ, ಉಪನ್ಯಾಸಕರಾದ ಸುಕುಮಾ‌ರ್ ಶೆಟ್ಟಿಗಾ‌ರ್ ವಂದಿಸಿದರು