Recent Posts

Friday, November 15, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ವಿ. ಹಿಂ. ಪ. ಪುತ್ತೂರು ನಗರ ಪ್ರಖಂಡದ ವತಿಯಿಂದ ಬಕ್ರೀದ್ ಹಬ್ಬದ ಸಂದರ್ಭಗಳಲ್ಲಿ ಜಾನುವಾರು ಮತ್ತು ಇತರೆ ಪ್ರಾಣಿಗಳ ಹತ್ಯೆ ನಿಷೇಧವಿದ್ದು ಅದನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳುವಂತೆ ಪೊಲೀಸ್ ನಿರೀಕ್ಷಕರಿಗೆ ಮನವಿ – ಕಹಳೆ ನ್ಯೂಸ್

ಪುತ್ತೂರು : ರಾಜ್ಯ ಮತ್ತು ದೇಶದ ಕಾನೂನಿನನ್ವಯ ಹಾಗೂ Animal welfare board of inois ಇದರ ಸುತ್ತೋಲೆ ಅನ್ವಯ ಹಾಗೆಯೇ ಸುಪ್ರೀಂ ಕೋರ್ಟ್ ಆದೇಶದನ್ವಯ ಬಕ್ರೀದ್ ಮತ್ತಿತರ ಹಬ್ಬ ಸಂದರ್ಭಗಳಲ್ಲಿ ಜಾನುವಾರು ಮತ್ತು ಇತರೆ ಪ್ರಾಣಿಗಳ ಹತ್ಯೆ ನಿಷೇಧವಿದ್ದು ಅದನ್ನು ಕಟ್ಟು ನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳುವಂತೆ ಪುತ್ತೂರು ಟೌನ್ ಪೊಲೀಸ್ ನಿರೀಕ್ಷಕರಿಗೆ ಮನವಿ ಸಲ್ಲಿಸಲಾಯಿತು..

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯದಲ್ಲಿ ಕರ್ನಾಟಕ ರಾಜ್ಯ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣ ಕಾಯಿದೆ ಜಾರಿಯಲ್ಲಿದ್ದು ಅದರ ಪ್ರಕಾರ ಕುರ್ಬಾನಿಗೆ ಯಾವುದೇ ರೀತಿಯ ಹತ್ಯೆ ನಿಷೇಧವಿದೆ. ಹಾಗೂ ಕುರ್ಬಾನಿಗೆ ಜಾನುವಾರು ಸಾಗಾಟವೂ ಶಿಕ್ಷಾರ್ಹ ಅಪರಾಧವಾಗಿದೆ. ಕುರ್ಬಾನಿ ಕೊಟ್ಟ ಸ್ಥಳವನ್ನು ಸರಕಾರ ಮುಟ್ಟುಗೋಲಿಗೆ ಅವಕಾಶವಿದೆ. ರಾಜ್ಯದಲ್ಲಿ ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯಿದೆ 1959 ತಿದ್ದುಪಡಿ 1975 ಇದರ ಪ್ರಕಾರವೂ ಜಾನುವಾರು ಬಲೆ (ಕುರ್ಬಾನಿ 1 ನಿಷೇಧವಿರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸುಪ್ರೀಂ ಕೋರ್ಟ್ WP ( Civil ) 309:2003 ದಿನಾಂಕ 30.01.2014 ರ ತೀರ್ಪಿನ ಆದೇಶ ದಿನಾಂಕ 06.01.2009 WP 1443 / 2008 ಹಾಗೂ ಕಾಲ ಕಾಲಕ್ಕೆ ಸರಕಾರ ವಿವಿಧ ಆದೇಶಗಳಂತೆ ರಾಜ್ಯದಲ್ಲಿ ಜಾನುವಾರುಗಳ ಕುರ್ಬಾನಿ ಕಟ್ಟು ನಿಟ್ಟಾಗಿ ತಡೆಯಲು ನಾವು ಮನವಿ ಮಾಡುತ್ತಿದ್ದೇವೆ.
ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಅಕ್ರಮ ಜಾನುವಾರು ಸಾಗಾಟವಾಗದಂತೆ ಬಕ್ರೀದ್ ವರೆಗೂ ನಾಕಾಬಂದಿ ಹಾಕಬೇಕು ಬಕ್ರೀದ್ ವರೆಗೆ ಕಿವಿಯೋಲೆ ಇಲ್ಲದ ಜಾನುವಾರುಗಳನ್ನು ಸಾರ್ವಜನಿಕ ಜಾಗದಲ್ಲಿ ಶೇಖರಿಸಿ ಇಡದಂತೆ ಮೇಯಲು ಬಿಡದಂತೆ, ಸಾರ್ವಜನಿಕರಿಗೆ ಎಚ್ಚರಿಕೆಯನ್ನು ಮಾಧ್ಯಮದ ಮೂಲಕ ಪ್ರಚಾರ ಮಾಡಬೇಕು. ಅದನ್ನು ಉಲ್ಲಂಘಿಸಿ. ಕಿವಿಯೋಲೆ ಇಲ್ಲದೆ ಶೇಖರಿಸಿಟ್ಟ ಮೇಯಲು ಬಿಟ್ಟ ಜಾನುವಾರುಗಳನ್ನು ವಶಪಡಿಸಿ, ಜಾನುವಾರು ನಿಷೇಧ ಕಾಯಿದೆ 2020 ರಂತೆ ಪ್ರಕರಣ ದಾಖಲಿಸಬೇಕು ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಕಸಾಯಿಖಾನೆ ಹಿಂದೆ ನಡೆದಲೆಲ್ಲ ನಿಗ ಇಡುತ್ತಾ ಪ್ರಾರ್ಥನಾ ಮಂದಿರಗಳಲ್ಲಿಯೂ ಜಾನುವಾರು ಶೇಖರಿಸಿ ಇಡದಂತೆ ನಿಗಾ ಇಡಲು ಸೂಚಿಸಬೇಕು.

ಕಾಯಿದೆಯಂತೆ ಜಾನುವಾರು ಹತ್ಯೆ ತಡೆಯುವ ಅಧಿಕಾರ ಸಾರ್ವಜನಿಕರಿಗೂ ಇದ್ದು ಮೊದಲೇ ಪೊಲೀಸರು ಅಕ್ರಮ ಜಾನುವಾರು ಸಾಗಾಟ, ಶೇಖರಣೆ, ಹತ್ಯೆ ತಡೆಯುವ ಮೂಲಕ ಸಾರ್ವಜನಿಕರು ಅಧಿಕಾರ ಉಪಯೋಗಿಸಲು ಅವಕಾಶ ಸಿಗದಂತೆ ಎಚ್ಚರ ವಹಿಸಬೇಕು. ಈ ಎಲ್ಲ ಕಾರ್ಯಗಳಲ್ಲಿ ಕಾನೂನುಭದ್ದವಾಗಿ ತಮಗೆ ಸಹಕರಿಸಲು ನಮ್ಮ ಕಾರ್ಯಕರ್ತರು ಸದಾ ಸಿದ್ಧರಿದ್ದಾರೆ. ಎಂದು ಪುತ್ತೂರು ನಗರ ಪ್ರಖಂಡದ ಜಿಲ್ಲಾ ವಿಶ್ವಹಿಂದು ಪರಿಷದ್ ವತಿಯಿಂದ ಪೊಲೀಸ್ ನಿರೀಕ್ಷಕರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಯಂತ್ ಕುಂಜೂರು ಪಂಜ, ಜೀವನ್ ಆಚಾರ್ಯ, ಪ್ರವೀಣ್ ಕಲ್ಲೇಗ, ಅನಿಲ್ ಇರ್ದೆ, ದಿನೇಶ್ ತಿಂಗಳಾಡಿ ಉಪಸ್ಥಿತರಿದ್ದರು.