Thursday, November 28, 2024
ದಕ್ಷಿಣ ಕನ್ನಡಮೂಡಬಿದಿರೆಯಕ್ಷಗಾನ / ಕಲೆಶಿಕ್ಷಣಸುದ್ದಿ

ಆಳ್ವಾಸ್ ನ ಕೃಷಿಸಿರಿ ವೇದಿಕೆಯಲ್ಲಿ ನಡೆದ “ಆಳ್ವಾಸ್ ಸಾಂಪ್ರದಾಯಿಕ ದಿನ- 2024” ಕಾರ್ಯಕ್ರಮ – ಕಹಳೆ ನ್ಯೂಸ್

ಮೂಡುಬಿದಿರೆ: ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಓರ್ವ ಉತ್ತಮ ಶಿಕ್ಷಕ, ಎಂಜಿನಿಯರ್ ಅಥವಾ ಕಲಾವಿದನಾಗಿ ರೂಪುಗೊಳ್ಳುವಂತೆ ಆಳ್ವಾಸ್ ಸಂಸ್ಥೆಯು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುತ್ತಿರುವುದಲ್ಲದೆ ಓರ್ವ ಮನುಷ್ಯನಿಗೆ ಮನುಷ್ಯತ್ವದ ಗುಣವನ್ನು ಕಲಿಸುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ನಟ, ಕಲಾ ನಿರ್ದೇಶಕ ಅರುಣ್ ಸಾಗರ್ ಹೇಳಿದರು.

ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಕೃಷಿಸಿರಿ ವೇದಿಕೆಯಲ್ಲಿ ನಡೆದ “ಆಳ್ವಾಸ್ ಸಾಂಪ್ರದಾಯಿಕ ದಿನ- 2024” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜೀವನದಲ್ಲಿ ಪಾಸ್ ಫೈಲ್ ಅನ್ನುವುದು ಇರುವುದಿಲ್ಲ. ಬದುಕಿನ ಪ್ರತಿಕ್ಷಣ, ಪ್ರತಿದಿನ ಅವಕಾಶಗಳು ಸಿಗುತ್ತಿರುತ್ತದೆ ಅವುಗಳನ್ನು ಅನುಭವಿಸಬೇಕು. ಅನುಭವ ಅನ್ನುವುದನ್ನು ಅನುಭಾವವಾಗಿ ಮಾಡುವುದರ ಮೂಲಕ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಗುವೆಂಬ ಮುಗ್ದತೆಯ ಭಾವ ನಿಮ್ಮಲ್ಲಿದ್ದರೆ ಸಾಧನೆ ಮಾಡಲು ಸಾಧ್ಯವಾಗುತ್ತದೆ. ನೀವೆಲ್ಲರೂ ಒಳ್ಳೆ ಪ್ರಪಂಚದಲ್ಲಿ ಬದುಕುತ್ತಿದ್ದೀರಿ. ಕಲೆ ಸಂಸ್ಕøತಿ, ಸಂಗೀತ ಇವೆಲ್ಲವುಗಳ ಬಗ್ಗೆ ಗೌರವವನ್ನು ಹೊಂದಿರುವ ಆಳ್ವರು ನಿಮಗೆ ಸಾಧನೆ ಮಾಡಲು ಅವಕಾಶಗಳನ್ನು ನೀಡಿ ನಿಮ್ಮೆಲ್ಲರನ್ನು ಹೀರೋಗಳಾಗಿ ಮಾಡಲು ಹೊರಟಿದ್ದಾರೆ ಎಂದ ಅವರು ನೀವೆಲ್ಲರೂ ಒಳ್ಳೆ ಮುನುಷ್ಯರಾದಾಗ ಸಾಧಕರಾಗುತ್ತೀರಿ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಧ್ಯಕ್ಷತೆ ವಹಿಸಿದ್ದರು. ನಿರ್ಮಾಪಕ ಇಂದ್ರಜಿತ್ ಲಂಕೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಯುವ ಸಮುದಾಯದಿಂದ ದೇಶದ ಭವಿಷ್ಯ ಅದ್ಭುತವಾಗಿರುತ್ತದೆ. ಶಿಕ್ಷಣ ಪ್ರತಿಯೊಬ್ಬರಿಗೂ ಬೇಕು ಆದರೆ ಮನೋರಂಜನೆ ಮಾಡುವ ಸಮಯದಲ್ಲಿ ಮನೋರಂಜನೆ ಮಾಡಿ ಎಂದು ಸಲಹೆ ನೀಡಿದರು.

ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಿತು. ತೀರ್ಪುಗಾರರಾದ ಮೈಮ್ ರಾಮ್ ದಾಸ್ , ಬಿಗ್ ಬಾಸ್ ರನ್ನರ್ ಅರವಿಂದ ಕೆ.ಪಿ., ಚೈತ್ರಾ ಶೆಟ್ಟಿ, ವಿಜೇತ ಪೂಜಾರಿ, ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಿತೇಶ್ ಮಾರ್ನಾಡ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.