Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಕಲ್ಲಡ್ಕಕ್ಕೆ ಬೇಟಿ ನೀಡಿ ಚತುಷ್ಪತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ – ಕಹಳೆ ನ್ಯೂಸ್

ಬಂಟ್ವಾಳ: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಇಂದು ಬೆಳಿಗ್ಗೆ ಕಲ್ಲಡ್ಕ ಕ್ಕೆ ಬೇಟಿ ನೀಡಿ ಚತುಷ್ಪತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು, ಗುತ್ತಿಗೆದಾರರಿಗೆ ಕೆಲವು ನಿರ್ದೇಶನಗಳನ್ನು ನೀಡಿದ್ದಾರೆ.

ಕಲ್ಲಡ್ಕ ಪೇಟೆಯಲ್ಲಿ ಪ್ಲೈ ಓವರ್ ನಿರ್ಮಾಣ ಮಾಡುವ ಕಾಮಗಾರಿ ಭರದಿಂದ ಸಾಗುತ್ತಿದೆಯಾದರೂ ವಾಹನ ಸಂಚಾರಕ್ಕೆ ಅನುಕೂಲವಾದ ಸರ್ವೀಸ್ ರಸ್ತೆ ನಿರ್ಮಿಸದೆ ವಾಹನ ಸವಾರರು ಕೆಸರು ಮಿಶ್ರಿತ ಹೊಂಡಗುಂಡಿಗಳಿಂದ ಕೂಡಿರುವ ರಸ್ತೆಯಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ. ಇದೀಗ ಮಳೆಗಾಲ ಆರಂಭವಾಗಿದ್ದು,ವಾಹನ ಸವಾರರು ಬಹಳಷ್ಟುತೊಂದರೆ ಅನುಭವಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈಗಾಗಿ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಲ್ಲಡ್ಕಕ್ಕೆ ಬೇಟಿ ನೀಡಿ ಗುತ್ತಿಗೆ ವಹಿಸಿಕೊಂಡ ಕೆಎನ್.ಆರ್.ಸಿ.ಕಂಪೆನಿಯವರಿಗೆ ಕೆಲವು ನಿರ್ದೇಶನ ನೀಡಿದ್ದಾರೆ . ನಿರ್ಮಾಣ ಹಂತದಲ್ಲಿರುವ ಪಿಲ್ಲರ್ ಗಳ ಸಮೀಪದಲ್ಲಿ ನೀರು ಸರಾಗವಾಗಿ ಹರಿದುಹೋಗುವುದಕ್ಕಾಗಿ ಒಳ ಭಾಗದಲ್ಲಿ ಡ್ರೈನ್ ಮಾಡಲು ಸೂಚನೆ ನೀಡಿದ್ದಾರೆ.

ಪಾದಚಾರಿಗಳು ದಾಟಲು 4 ಪಾಯಿಂಟ್‍ಗಳಲ್ಲಿ ಸಮತಲವಾದ ಕಾಲುದಾರಿಗಳನ್ನು ಸ್ಥಾಪಿಸಿಕೊಡುವಂತೆ ತಿಳಿಸಿದ್ದಾರೆ. ಅಲ್ಲಲ್ಲಿ ಕಲ್ಲು ಮಣ್ಣುಗಳನ್ನು ರಾಶಿ ಹಾಕಿದ್ದು ಸಾರ್ವಜನಿಕ ವಾಗಿ ಸಾಕಷ್ಟು ತೊಂದರೆಯಾಗುತ್ತಿರುದರಿಂದ ಎಲ್ಲವನ್ನು ತೆಗೆದುಹಾಕಿ ಸ್ವಚ್ಛ ಮಾಡಿ ಎಂದಿದ್ದಾರೆ.

ಸರ್ವೀಸ್ ರಸ್ತೆಯಲ್ಲಿ ಸರಾಗವಾಗಿ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಮಾಡಲು ನಿರಂತರವಾಗಿ ಸಿಮೆಂಟ್ ಜಲ್ಲಿಕಲ್ಲಿನ ಮಿಶ್ರಣವನ್ನು ಹಾಕಿ ಸಮಸ್ಯೆ ಪರಿಹಾರ ಮಾಡುವಂತೆ ಸೂಚನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಬಂಟ್ವಾಳ ತಹಶಿಲ್ದಾರ್ ಅರ್ಚನಾ ಭಟ್, ಮೆಲ್ಕಾರ್ ಟ್ರಾಫಿಕ್ ಎಸ್.ಐ.ಸುತೇಶ್, ಕೆ.ಎನ್‍ಆರ್.ಸಿ.ಕಂಪೆನಿಯ ಎಜಿಎಮ್ ರೋಹಿತ್ ರೆಡ್ಡಿ ಕಂದಾಯ ನಿರೀಕ್ಷಕ ಜನಾರ್ದನ,ವಿಜಯ್ ಮತ್ತಿತರ ಪ್ರಮುಖರು ಹಾಜರಿದ್ದರು.