ಬೆಂಗಳೂರು: ಈಗ ಎಲ್ಲಿ ನೋಡಿದರಲ್ಲಿ ಮಿಟೂವಿನದ್ದೇ ಸದ್ದು. ಅದು ಬೆಂಗಳೂರು ಸಾಹಿತ್ಯ ಉತ್ಸವವನ್ನೂ ಬಿಟ್ಟಿಲ್ಲ. ಅಲ್ಲಿ ಕೂಡ ಮಿಟೂ ಬಗ್ಗೆ ಚರ್ಚೆ, ಮಾತುಕತೆ ನಡೆದಿದೆ.
ಹೌದು, ಬೆಂಗಳೂರು ಸಾಹಿತ್ಯ ಉತ್ಸವದ ಚರ್ಚೆಯ ತಂಡದಲ್ಲಿ ಭಾರತದಲ್ಲಿ ಮಿಟೂ ಚಳವಳಿ ಆರಂಭಿಸಿದ ಸಂಧ್ಯಾ ಮೆನನ್ ಇದ್ದರು. ಇಷ್ಟು ವರ್ಷಗಳಲ್ಲಿ ಸಮಾಜದ ವಿವಿಧ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರು, ಯುವತಿಯರು ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು.
ಇನ್ನು ಸಂಧ್ಯಾ ಮೆನನ್ ಅವರು ತಮ್ಮ ಟ್ವಿಟ್ಟರ್ ಖಾತೆ ಮೂಲಕ ತಮ್ಮಂತೆ ಲೈಂಗಿಕ ಕಿರುಕುಳಕ್ಕೆ ಒಳಗಾದ ಹಲವರ ಬಗ್ಗೆ ಅದರಲ್ಲಿ ಬರೆದುಕೊಂಡಿದ್ದಾರೆ.
25 ವರ್ಷದವಳಾಗಿದ್ದಾಗ ತಮ್ಮ ಮೇಲೆ ಲೈಂಗಿಕ ಕಿರುಕುಳ ನಡೆದಿತ್ತು ಎಂದಿದ್ದಾರೆ. ಕೆಲಸದ ಸ್ಥಳದಲ್ಲಿ ಹೀಗಾಗಿದ್ದು ಇದರಿಂದ ಸಾಕಷ್ಟು ಗೊಂದಲ, ಸಿಟ್ಟು, ಆತ್ಮ ವಿಶ್ವಾಸ ಕೊರತೆ, ತಾರತಮ್ಯ ಎದುರಿಸಿದೆ ಎನ್ನುತ್ತಾರೆ.