ಬಾಂಬ್, ಗುಂಡು ಹಾಗೂ ಗ್ರೆನೇಡ್‌ಗಳಿಂದ ದಾಳಿ ನಡೆಸಿ ಭಾರತೀಯ ಯೋಧರಲ್ಲಿ ಭೀತಿ ಹುಟ್ಟಿಸಲು ಯತ್ನ ನಡೆಸುತ್ತಿದ್ದ ಪಾಕಿಸ್ತಾನ ಮೂಲಕ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆ ಇದೀಗ ಕಾಶ್ಮೀರಕ್ಕೆ ಸ್ನೈಪರ್ ಗಳನ್ನು ರವಾನಿಸಿರುವ ಆತಂಕಕಾರಿ ವಿಚಾರವೊಂದು ಇದೀಗ ಬೆಳಕಿಗೆ ಬಂದಿದೆ.
ದೂರದ ರಹಸ್ಯ ಸ್ಥಳದಳಲ್ಲಿ ಕುಳಿತು ನಿಖರವಾಗಿ ದಾಳಿ ನಡೆಸುವ ಹಂತಕರು/ಶಾರ್ಪ್ ಶೂಟರ್ ಗಳನ್ನು ಸ್ನೈಪರ್ ಗಳೆಂದು ಕರೆಯಲಾಗುತ್ತದೆ. ರೈಫಲ್ ಅಥವಾ ಗನ್ ಮೂಲಕ ದೂರದಿಂದಲೇ ನಿಖರವಾಗಿ ದಾಳಿ ನಡೆಸುವ ಕುರಿತು ಇವರಿಗೆ ತರಬೇತಿ ನೀಡಲಾಗಿರುತ್ತದೆ.
ಕಳೆದ ಕೆಲ ವರ್ಷಗಳಿಂದ ಕಾಶ್ಮೀರದಲ್ಲಿ ಭದ್ರತಾ ಪಡೆಗಳು ತೀವ್ರ ಕಟ್ಟೆಚ್ಚರ ವಹಿಸಿರುವ ಹಿನ್ನಲೆಯಲ್ಲಿ ನೇರಾನೇರಾ ದಾಳಿ ನಡೆಸಲು ಧೈರ್ಯವಿಲ್ಲದೆ. ಹೇಡಿತನದ ಕೃತ್ಯಕ್ಕೆ ಹಾಕಿದೆ.