Monday, January 20, 2025
ಕುಂದಾಪುರಶಿಕ್ಷಣಸುದ್ದಿ

ಎಬಿವಿಪಿ ಆಗ್ರಹಕ್ಕೆ ಮೊದಲ ಹಂತದ ಸ್ಪಂದನೆ: ಆಜ್ರಿಯಿಂದ ಕುಂದಾಪುರಕ್ಕೆ ಹೊಸ ಬಸ್– ಕಹಳೆ ನ್ಯೂಸ್

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಂದಾಪುರ ವತಿಯಿಂದ ಗ್ರಾಮಾಂತರ ಭಾಗಗಳಿಂದ ಕುಂದಾಪುರ ನಗರಕ್ಕೆ ವಿದ್ಯಾಭ್ಯಾಸಕ್ಕಾಗಿ ಬರುವ ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿ ಐದು ದಿನಗಳ ಹಿಂದೆ ( 8-6-2024) ಶಾಸ್ತ್ರಿ ಸರ್ಕಲ್ ನಿಂದ ತಾಲೂಕು ಆಫೀಸಿನ ವರೆಗೆ ಬೃಹತ್ ಪ್ರತಿಭಟನಾ ಜಾಥಾ ನಡೆಸಿ, ಕುಂದಾಪುರ ತಹಶೀಲ್ದಾರ, ಕೆಎಸ್ಆರ್ಟಿಸಿ ಡಿಪೋ ಮ್ಯಾನೇಜರ್ ಸೇರಿದಂತೆ, ಕುಂದಾಪುರ ಮತ್ತು ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಿಗೆ ಆಗ್ರಹವನ್ನು ಇರಿಸಿ ಎಚ್ಚರಿಸಿದರು ಇದರ ಪರಿಣಾಮ ಮೊದಲ ಹಂತದಲ್ಲಿ ಎಬಿವಿಪಿ ಬೇಡಿಕೆಯಂತೆ ಆಜ್ರಿಯಿಂದ ಕುಂದಾಪುರಕ್ಕೆ ಬಸ್ ಬಿಟ್ಟಿರುವುದು ಶ್ಲಾಘನೀಯ.

ಜಾಹೀರಾತು
ಜಾಹೀರಾತು
ಜಾಹೀರಾತು

ಈಗಾಗಲೇ ಆಜ್ರಿಯಿಂದ ನೇರಳಕಟ್ಟೆ ತಲ್ಲೂರು ಮಾರ್ಗವಾಗಿ ಕುಂದಾಪುರಕ್ಕೆ ಮಾಡಿದ ಬಸ್ ವ್ಯವಸ್ಥೆಯಿಂದಾಗಿ ಕೇವಲ ವಿದ್ಯಾರ್ಥಿಗಳಿಗಲ್ಲದೆ ಸಾರ್ವಜನಿಕರಿಗೂ ಸಹಾಯಕವಾಗಿದೆ. ಅನೇಕ ಸಮಯದಿಂದ ಈ ಮಾರ್ಗಕ್ಕೆ ಬಸ್ ನ ಬೇಡಿಕೆ ಇದ್ದರೂ ಅಧಿಕಾರಿಗಳಿಗೆ ವಿವಿಧ ರೀತಿಯಲ್ಲಿ ಮನವಿ ಸಲ್ಲಿಸಿದರೂ ಸಮರ್ಪಕ ಬಸ್ ವ್ಯವಸ್ಥೆ ಮಾಡದ ಅಧಿಕಾರಿಗಳು ಹೋರಾಟ ನಡೆಸಿದ ಐದು ದಿನಗಳ ಒಳಗೆ ಬಸ್ ಬಿಟ್ಟಿರುವುದು ವಿದ್ಯಾರ್ಥಿಗಳ ಧ್ವನಿಯ ಬೆಲೆಯನ್ನು ಸಾರುತ್ತದೆ

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಸುಮಾರು 15 ಕ್ಕೂ ಹೆಚ್ಚು ಮಾರ್ಗಗಳಲ್ಲಿ ಬಸ್ ವ್ಯವಸ್ಥೆ ಮಾಡುವ ಅವಶ್ಯಕತೆ ಇದ್ದು ಆದಷ್ಟು ಬೇಗ ಇದು ಆಗುವಂತೆ ಮಾರ್ಗದ ಅವಶ್ಯಕತೆಯ ಕುರಿತು ಈಗಾಗಲೇ ಎಬಿವಿಪಿ ವಿದ್ಯಾರ್ಥಿಗಳ ಆಗ್ರಹದ ಧ್ವನಿಯಾಗಿ ಅಧಿಕಾರಿಗಳೊಂದಿಗೆ ಚರ್ಚಿಸುತ್ತಿದೆ ಮತ್ತು ಮುಂದೆ ಬರುವ 15 ದಿನಗಳ ವೊಳಗೆ ಎಲ್ಲಾ ಮಾರ್ಗಗಳಿಗೆ ಬಸ್ ವ್ಯವಸ್ಥೆ ಆಗುವ ಭರವಸೆಯೂ ಇದೆ.