ಕುಕ್ಕೆ ಸುಬ್ರಹ್ಮಣ್ಯ ರಸ್ತೆ ಮಾರ್ಗಸೂಚಿ ಹಾಗೂ ಪಾರ್ಕಿಂಗ್ ಸಮಾಲೋಚನಾ ಸಭೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್, ಸುಬ್ರಹ್ಮಣ್ಯ ಪೊಲೀಸ್ ಠಾಣೆ : ರಸ್ತೆ ಸುರಕ್ಷತಾ ಸಪ್ತಾಹ 2024 – ಕಹಳೆ ನ್ಯೂಸ್
ಕುಕ್ಕೆ ಸುಬ್ರಹ್ಮಣ್ಯ : ರಸ್ತೆ ಮಾರ್ಗಸೂಚಿ ಹಾಗೂ ಪಾರ್ಕಿಂಗ್ ಸಮಸ್ಯೆ ಬಗ್ಗೆ ಸಮಾಲೋಚನಾ ಸಭೆಯೂ ಕುಮಾರಧಾರ ಸಭಾಂಗಣ ದಲ್ಲಿ ಸುಬ್ರಹ್ಮಣ್ಯ ಗ್ರಾಮಪಂಚಾಯತ್, ಸುಬ್ರಹ್ಮಣ್ಯ ಪೊಲೀಸ್ ಠಾಣೆ, ಸುಬ್ರಹ್ಮಣ್ಯ ದಲ್ಲಿರುವ ಎಲ್ಲಾ ಇಲಾಖೆ ಅಧಿಕಾರಿಗಳ, ಸಂಘ ಸಂಸ್ಥೆಗಳು,ಟೂರಿಸ್ಟ್ ವಾಹನ ಚಾಲಕ ಮಾಲಕರ ಸಂಘದ ಅಧ್ಯಕ್ಷರು ಸದಸ್ಯರು ಹಾಗೂ ಸುಬ್ರಹ್ಮಣ್ಯ ಗ್ರಾಮಸ್ಥರ ಸಮ್ಮುಖದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಭಾರ ಇ. ಓ ಗೋವಿಂದ ನಾಯಕ್ ವಹಿಸಿದ್ದರು, ವೇದಿಕೆಯಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿ ಕಾರ್ತಿಕ್,ಸುಬ್ರಹ್ಮಣ್ಯ ಗ್ರಾಮ ಅಭಿವೃದ್ದಿ ಅಧಿಕಾರಿ ಮಹೇಶ್,ಸುಬ್ರಹ್ಮಣ್ಯ ಗ್ರಾ. ಪಂ.ಅಧ್ಯಕ್ಷೆ ಸುಜಾತಾ.ಲೋಕೋಪಯೋಗಿ ಇಲಾಖೆ ಎ. ಡಬ್ಲ್ಯೂ ಸೋಮ. ಬಿ, ಸುಬ್ರಹ್ಮಣ್ಯ ಮಾಸ್ಟರ್ ಪ್ಲಾನ್ ಸದಸ್ಯ ಸತೀಶ್ ಕುಜುಗೋಡು, ಪವನ್, ಲೋಲಕ್ಷ, ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗ್ರಾಮಪಂಚಾಯಿತಿ ಸದಸ್ಯ ಹರೀಶ್ ಇಂಜಾಡಿಯವರು,ಎಲ್ಲರು ರಸ್ತೆ ಮಾರ್ಗಸೂಚಿ ನಿಯಮವನ್ನು ಪಾಲಿಸಬೇಕು ರಸ್ತೆಯಲ್ಲಿ ಅಡ್ಡದಿಡ್ಡಿ ವಾಹನ ನಿಲ್ಲಿಸಬಾರದು, ರಸ್ತೆ ವೃತ್ತದಲ್ಲಿ ರಸ್ತೆ ನಿಯಮ ಪ್ರಕಾರ ಸಂಚಾರಿಸಬೇಕು, ಸುಬ್ರಹ್ಮಣ್ಯ ಜನತೆ ಜನಸಾಮಾನ್ಯರು ದೂರದ ಊರುಗಳಿಂದ ಬರುವ ಭಕ್ತರಿಗೆ ಪಾರ್ಕಿಂಗ್ ವಿಚಾರದಲ್ಲಿ ಅನುಕೂಲ ಮಾಡಿಕೊಡಬೇಕು, ಇಲ್ಲಿ ಯಾರು ವಯಕ್ತಿಕವಾಗಿ ಈ ವಿಚಾರವನ್ನು ತೆಗೆದು ಕೊಳ್ಳದೆ ಸಾರ್ವಜನಿಕವಾಗಿ ಅನುಕೂಲ ಮಾಡಿ ಕೊಡಬೇಕು ಹಾಗೂ ಸಹಕರಿಸಬೇಕು,ಇಲ್ಲಿ ಯಾರದ್ದು ವಯಕ್ತಿಕ ವಿಚಾರಗಲಿಲ್ಲ ಸಾರ್ವಜನಿಕರಿಗೆ ಸುಬ್ರಹ್ಮಣ್ಯ ದಲ್ಲಿ ಮೂಲಭೂತ ಸೌಕರ್ಯ ಆಗಲೇ ಬೇಕು ಎಂದರು.
ಕುಕ್ಕೆ ಸುಬ್ರಮಣ್ಯದ ಪಾರ್ಕಿಂಗ್ ಹಾಗೂ ರಸ್ತೆಯ ಸಮಸ್ಯೆ ಸರಿಪಡಿಸಲು ಜಿಲ್ಲಾಧಿಕಾರಿಗಳು 2015ರಲ್ಲಿ ಆದೇಶವನ್ನ ಮಾಡಿದ್ದಾರೆ. ಇದನ್ನು ಕಾರ್ಯಗತಗೊಳಿಸಲು ನಮ್ಮ ಠಾಣೆಯ ಸಬ್ ಇನ್ಸ್ಪೆಕ್ಟರ್ ಆದ ಕಾರ್ತಿಕ್ ಅವರು ತುಂಬಾ ಶ್ರಮ ಪಟ್ಟಿದ್ದಾರೆ. ಕಳೆದ ಎಂಟು ಹತ್ತು ವರ್ಷಗಳಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೆಚ್ಚಿದ ಭಕ್ತರ ಸಂಖ್ಯೆಯಲ್ಲಿ ಆದ್ದರಿಂದ ಇಲ್ಲಿ ದಿನನಿತ್ಯ ಪಾರ್ಕಿಂಗ್ ಸಮಸ್ಯೆ ಎದುರಾಗುತ್ತಿದೆ,ಈ ವಿಚಾರದಲ್ಲಿ ನಡೆದ ಮಹತ್ವದ ಸಭೆ ಇದಾಗಿದೆ ಎಂದರು.
ನಂತರ ಸಭೆಯನ್ನು ಉದ್ದೇಶಿಸಿ ಹೊಸ ರಸ್ತೆ ನಿಯಮ ಹಾಗೂ ಪಾರ್ಕಿಂಗ್ ಬಗ್ಗೆ ತಯಾರಿಸಿದ ನಕ್ಷೆಯನ್ನು ಪ್ರದರ್ಶಿಸಿ ಮಾಹಿತಿ ಹಾಗೂ ನಿಯಮಗಳನ್ನು ವಿವರಿಸಿದ ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್ ಆಗಮಿಸಿದ ಎಲ್ಲಾ ಗ್ರಾಮಜನತೆಗೆ ಕೃತಜ್ಞತೆ ಸಲ್ಲಿ ಮಾತನಾಡಿದ ಅವರು 2015ರಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಎದುರಾಗುತ್ತಿರುವ ಪಾರ್ಕಿಂಗ್ ಸಮಸ್ಯೆ ಬಗ್ಗೆ ಮಾತನಾಡಿದರು.
ಎಸಿ ಹಾಗೂ ಡಿಸಿ ಕಚೇರಿಯಿಂದ ಈ ಬಗ್ಗೆ ಅಂತಿಮ ನಿರ್ಧಾರವನ್ನ ಕೇಳಿದ್ದಾರೆ. ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿಯವರು ಈ ಬಗ್ಗೆ ಒಂದು ಸಭೆಯನ್ನ ಆಯೋಜನೆ ಮಾಡಿದ್ದರು. ಸುಬ್ರಹ್ಮಣ್ಯ ಠಾಣಾಧಿಕಾರಿ ಹಾಗೂ ಮೇಲಾಧಿಕಾರಿಗಳ ಸಭೆ ಇದಾಗಿತ್ತು ನಾವು ಅಲ್ಲಿ ಕೂತು ನಿರ್ಧಾರ ತೆಗೆದುಕೊಳ್ಳುವಾಗ ಕುಕ್ಕೆ ಸುಬ್ರಹ್ಮಣ್ಯದ ಜನಸಾಮಾನ್ಯರಿಗೆ, ವರ್ತಕರಿಗೆ, ಅಂಗಡಿ ಮಾಲೀಕರಿಗೆ, ಸುಬ್ರಮಣ್ಯ ಗ್ರಾಮಸ್ಥರಿಗೆ ನಾವು ಏನು ನಿರ್ಧಾರ ತೆಗೆದುಕೊಳ್ಳುತ್ತೇವೆ, ಅದರಿಂದ ಏನು ಸಮಸ್ಯೆಗಳಾಗುತ್ತದೆ.
ಈ ಸಮಸ್ಯೆಗಳ ಬಗ್ಗೆ ನಿಮ್ಮ ಜೊತೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಮಾರ್ಗಸೂಚಿ ಏನೂ ಮಾಡಬಹುದು ಎಂದು ತಿಳಿದುಕೊಂಡು ಒಂದು ನಿರ್ಣಯವನ್ನು ತೆಗೆದುಕೊಳ್ಳುವ ಎಂದು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ.
ಇದಾಗಲೇ ಮೇಲಾಧಿಕಾರಿ ಗಳು ಆದೇಶ ಮಾಡಿದ್ದಾರೆ, ಈ ಆದೇಶದಲ್ಲಿ ಚಿಕ್ಕಪುಟ್ಟ ಬದಲಾವಣೆ ಮಾಡಬಹುದು, ಈ ಹೊಸ ನಿಯಮ ಜಾರಿಗೆ ಬಂದ ಮೇಲೆ ಸ್ಥಳೀಯರಿಗೆ ಸ್ವಲ್ಪ ಕಷ್ಟ ಆಗಬಹುದು, ಎಲ್ಲರೂ ಜವಾಬ್ದಾರಿಯಿಂದ ನಮ್ಮ ಜೊತೆ ಸಹಕರಿಸಿದರೆ ಕುಕ್ಕೆ ಸುಬ್ರಹ್ಮಣ್ಯದ ಪಾರ್ಕಿಂಗ್ ಸಮಸ್ಯೆಯನ್ನು ಸರಿಪಡಿಸಬಹುದು, ಕುಕ್ಕೆ ಸುಬ್ರಹ್ಮಣ್ಯ ಇಡೀ ರಾಜ್ಯಕ್ಕೆ ಮಾದರಿ, ದ್ವಾರದ ಬಳಿಯಿಂದ ಕಾಶಿಕಟ್ಟೆ ವರೆಗೆ ಯಾವುದೇ ಸಮಸ್ಯೆಗಳಿಲ್ಲ, ಪೊಲೀಸರು, ಭದ್ರತಾ ಸಿಬ್ಬಂದಿಗಳು, ಎಷ್ಟು ಜನರನ್ನು ಹಾಕಿದ್ದರು ಸಮಸ್ಯೆ ತಪ್ಪಿದ್ದಲ್ಲ, ನಿಮ್ಮೆಲ್ಲರ ಸಲಹೆ ಹಾಗೂ ಸಹಕಾರ ಬೇಕು ಎಂದರು.
ಹೊಸ ರಸ್ತೆ ನಿಯಮ ಹಾಗೂ ಪಾರ್ಕಿಂಗ್ ವ್ಯವಸ್ಥೆಗಳ ಬಗ್ಗೆ ನಕ್ಷೆಯ ಚಿತ್ರವನ್ನ ಪ್ರದರ್ಶನ ಮಾಡುವುದರ ಮೂಲಕ ಯಾವ ರೀತಿ ರಸ್ತೆಯಲ್ಲಿ ಸಂಚರಿಸಬೇಕು, ಪಾರ್ಕಿಂಗ್ ವ್ಯವಸ್ಥೆಎಲ್ಲಿರುತ್ತದೆ, ಆಟೋರಿಕ್ಷಾ ನಿಲ್ದಾಣಗಳು, ಟೂರಿಸ್ಟ್ ಚಿಕ್ಕ ವಾಹನಗಳು,ಬಸ್ ಗಳು, ಎಲ್ಲಿ ಪಾರ್ಕಿಂಗ್ ಮಾಡಬೇಕು, ಸುಳ್ಯ ಹಾಗೂ ಬೆಂಗಳೂರು ಭಾಗದಿಂದ ಬರುವ ವಾಹನಗಳು, ಎಲ್ಲಿ ಪಾರ್ಕಿಂಗ್ ಮಾಡಬೇಕು ಎಲ್ಲ ವಿಚಾರಗಳು ಬಗ್ಗೆ ಜಿಲ್ಲಾಧಿಕಾರಿಗಳ ಆದೇಶದಂತೆ ಹೊಸ ರಸ್ತೆ ನಿಯಮ ಗಳನ್ನು ಸಭೆಯಲ್ಲಿ ವಿವರಿಸಿ ಎಲ್ಲರ ಜೊತೆ ಚರ್ಚಿಸಿ ನಿರ್ಣಯವನ್ನು ಕೈಗೊಂಡರು. ಈ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯದ ಗ್ರಾಮಸ್ಥರು, ವರ್ತಕರು ವಾಹನ ಚಾಲಕ ಮಾಲಕರು ಉಪಸ್ಥಿತರಿದ್ದು ಸಲಹೆ ನೀಡಿದರು.