Recent Posts

Sunday, January 19, 2025
ದಕ್ಷಿಣ ಕನ್ನಡದೆಹಲಿಪುತ್ತೂರುರಾಜ್ಯರಾಷ್ಟ್ರೀಯಸುದ್ದಿ

ರಷ್ಯಾದದಲ್ಲಿ ನಡೆಯುತ್ತಿರುವ BRICS ರಾಷ್ಟ್ರಗಳ G20 ಶೃಂಗಸಭೆಯಲ್ಲಿ ರಾಷ್ಟ್ರಗಳ ಪ್ರಾಸಿಕ್ಯೂಷನ್ ಸರ್ವಿಸಸ್ ನ ಭಾರತದ ನಿಯೋಗಕ್ಕೆ ಎ.ಎಸ್.ಜಿ. ಆಪ್ ಇಂಡಿಯಾ ಕೆ.ಎಂ. ನಟರಾಜ್ ಮುಂದಾಳತ್ವ.!! – ಕಹಳೆ ನ್ಯೂಸ್

 

ದೆಹಲಿ/ ಪುತ್ತೂರು : ರಷ್ಯಾದ ಸೈಂಟ್ ಪೀಟರ್ಸ್ ಬರ್ಗ್ ನಲ್ಲಿ ನಡೆಯುತ್ತಿರುವ BRICS ರಾಷ್ಟ್ರಗಳ G20 ಶೃಂಗಸಭೆಯಲ್ಲಿ ಪ್ರಾಸಿಕ್ಯೂಷನ್ ಸರ್ವಿಸಸ್ ಇದರಲ್ಲಿ ಭಾಗವಹಿಸುತ್ತಿರುವ ಭಾರತದ ನಿಯೋಗದ ಮುಂದಾಳತ್ವವನ್ನು ಎಡಿಷನಲ್ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಪುತ್ತೂರು ಮೂಲದ ಕೆ.ಎಂ ನಟರಾಜ್ ಅವರು ವಹಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೆ.ಎಂ. ಎನ್‌. ಅವರು ಮೂಲತಃ ಪುತ್ತೂರಿನ ಈಶ್ವರಮಂಗಲದ ಹನುಮಗಿರಿಯವರು. ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅನೇಕ ಜವಾಬ್ದಾರಿ ಸ್ಥಾನಗಳನ್ನು ಅಲಂಕರಿಸಿರುವ ಇರುವ ಪ್ರಸ್ತುತ ಎಡಿಷನಲ್ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಆಸಿ ಭಾರತದ ಉಚ್ಛ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದು, ಆರ್ಟಿಕಲ್ 370 , CAA ಮುಂತಾದ ಹಲವಾರು ದೇಶದ ಅತ್ಯಂತ ಜಟಿಲವಾದ ಪ್ರಕರಣಗಳು ಸೇರಿದಂತೆ ಇಡಿ ಪ್ರಕರಣಗಳಲ್ಲಿ ಭಾರತ ಸರಕಾರದ ಪರವಾಗಿ ಸಮರ್ಥವಾಗಿ ವಾದ ಮಂಡನೆ ಮಾಡಿ ದೇಶದ ಸಾರ್ವಭೌಮತ್ವಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಸದ್ಯ G-20 ಸಭೆಯಲ್ಲಿ ಕೆ.ಎಂ.ಎನ್. ಅವರು ಭಾಗಿಯಾಗುತ್ತಿರುವುದು ಮತ್ತಷ್ಟು ಮಹತ್ವ ಪಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು