Monday, January 20, 2025
ಉಡುಪಿಸುದ್ದಿ

ನೆಲ್ಲಿಕಟ್ಟೆ ನ್ಯಾಯಬೆಲೆ ಅಂಗಡಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ; ಆಹಾರ ನಿರೀಕ್ಷಕರಾದ ಎಚ್ ಎಸ್ ಸುರೇಶ್ ಸ್ಥಳಕ್ಕೆ ಭೇಟಿ-ಕಹಳೆ ನ್ಯೂಸ್


ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆಹಾರ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿರುವ ಅಂಗಡಿ ಸಂಖ್ಯೆ ೧೧೪-ಅಂಪಾರು ವ್ಯಸೇಸ ಸಂಘ ನೆಲ್ಲಿಕಟ್ಟೆ ನ್ಯಾಯಬೆಲೆ ಅಂಗಡಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಬಂದಿರುವುದರ ಬಗ್ಗೆ ಯಾರೋ ಸಾಮಾಜಿಕ ಜಾಲತಾಣಗಳಲ್ಲಿ ಆಡಿಯೋ, ವಿಡಿಯೋ ಮಾಡಿ ಹಬ್ಬಿಸಿರುತ್ತಾರೆ.
ಪ್ರಸ್ತುತ ಅನ್ನಭಾಗ್ಯ ಯೋಜನೆಯಡಿಯಲ್ಲಿ ನೀಡಲಾದ ಪಡಿತರ ಅಕ್ಕಿಯಲ್ಲಿ ಸಾರವರ್ಧಿತ ಅಕ್ಕಿ (ಪೋರ್ಟಿಪೈಡ್ ರೈಸ್) ಮಿಶ್ರಿತವಾಗಿರುತ್ತದೆ ಎಂಬುದು ಆಹಾರ ಇಲಾಖೆ ಈಗಾಗಲೇ ತಿಳಿಸಿರುವುದರ ಬಗ್ಗೆ ಕುಂದಾಪುರ ತಾಲೂಕಿನ ಆಹಾರ ನಿರೀಕ್ಷಕರಾದ ಎಚ್ ಎಸ್ ಸುರೇಶರವರು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪಡಿತರದಾರರ ಸಮಸ್ಯೆ ಬಗೆಹರಿಸಿ ಪಡಿತರದಾರರಿಗೆ ಆತಂಕಪಡುವುದು ಬೇಡವೆಂದು ಹಾಗೂ ಅವರ ಬಗ್ಗೆ ಕ್ರಮಕೈಗೊಳ್ಳಲಾಗುವುದೆಂದು ತಿಳಿಸಿದರು.

ಜಾಹೀರಾತು

ಜಾಹೀರಾತು
ಜಾಹೀರಾತು